Go to full page →

“ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” MBK 111

ದೇವರ ಚಿತ್ತವು ಆತನ ಪರಿಶುದ್ಧ ಧರ್ಮಶಾಸ್ತ್ರದ ನೀತಿಬೋಧೆಯಲ್ಲಿ ಸ್ಪಷ್ಟವಾಗಿದೆ, ಈ ಧರ್ಮಶಾಸ್ತ್ರದ ಮೂಲತತ್ವಗಳೇ ಪರಲೋಕದ ಮೂಲ ತತ್ವಗಳಾಗಿವೆ. ಪರಲೋಕ ದೂತರು ದೇವರ ಚಿತ್ತವನ್ನು ತಿಳಿದುಕೊಳ್ಳುವುದಕ್ಕಿಂತಲೂ ಬೇರಾವ ಜ್ಞಾನವನ್ನೂ ಅಪೇಕ್ಷಿಸರು; ಮತ್ತು ಅವರು ತಮ್ಮ ಪ್ರತಾಪವನ್ನು ಆತನ ಚಿತ್ತವನ್ನು ನೆರವೇರಿಸುವುದರಲ್ಲೇ ಹೊರತು ಬೇರಾವುದರಲ್ಲೂ ವಿನಿಯೋಗಿಸರು. MBK 111.1

ಆದರೆ ಪರಲೋಕದಲ್ಲಿ, ಕಾನೂನುಗಳಿಗೆ ಒಳಪಟ್ಟ ಆತ್ಮವುಳ್ಳವರಾಗಿ ಸೇವೆಯನ್ನು ಸಮರ್ಪಿಸುತ್ತಿಲ್ಲ. ಸೈತಾನನು ಯೆಹೋವನ ಆಜ್ಞೆಗಳನ್ನು ಪ್ರತಿಭಟಿಸಿದಾಗ, ಎಂದೂ ಯೋಚಿಸದೆ ಉತ್ಪನ್ನವಾದಂತೆ, ಆಜ್ಞೆಯೆಂಬುದೊಂದು ಇದೆಯೆಂಬ ಭಾವನೆಯು ದೇವದೂತರಲ್ಲಿ ಉದ್ಭವಿಸಿತು. ದೇವದೂತರು ಅವರ ಸೇವೆಯಲ್ಲಿ ಸೇವಕರಂತಲ್ಲ, ಮಕ್ಕಳಂತೆಯೇ ಎಣಿಸಲ್ಪಟ್ಟಿದ್ದಾರೆ. ಅವರಿಗೂ ಮತ್ತು ಅವರ ಸೃಷ್ಟಿಕರ್ತನಿಗೂ ಪರಸ್ಪರ ಸಂಪೂರ್ಣವಾದ ಐಕ್ಯತೆಯಿದೆ. ವಿಧೇಯತೆಯು ಅವರಿಗೆ ಗುಲಾಮತನದ ಹಾಗಲ್ಲು. ದೇವರ ಮೇಲೆ ಅವರಿಗಿರುವ ಪ್ರೀತಿಯು ಅವರ ಸೇವೆಯನ್ನು ಸಂತೋಷದಾಯಕವಾಗಿಸುತ್ತದೆ. ಹಾಗೆಯೇ ಮಹಿಮೆಯ ನಿರೀಕ್ಷೆಯಾದ ಕ್ರಿಸ್ತನು ವಾಸಿಸುವ ಆತ್ಮಗಳಲ್ಲಿ ಆತನ ವಾಕ್ಯಗಳು ಪ್ರತಿಧ್ವನಿಸುತ್ತವೆ. “ನನ್ನ ದೇವರೇ ನಿನ್ನ ಚಿತ್ತವನ್ನು ನೆರವೇರಿಸುವುದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.” ಕೀರ್ತನೆ 4೦: 8. MBK 111.2

“ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂಬ ಈ ವಿಜ್ಞಾಪನೆಯು, ಭೂಮಿಯ ಮೇಲಿರುವ ಅಧರ್ಮವು ಕೊನೆಗಾಣುವಂತೆಯೂ, ಪಾಪವು ಎಂದೆಂದಿಗೂ ನಾಶವಾಗಲೆಂದೂ, ಮತ್ತು ನೀತಿಯ ರಾಜ್ಯವು ಸ್ಥಾಪಿಸಲ್ಪಡಲೆಂದು ಮಾಡುವ ಪ್ರಾರ್ಥನೆಯಾಗಿದೆ. ಆಗ ಪರಲೋಕದಲ್ಲಿರುವ ಹಾಗೆ ಭೂಲೋಕದಲ್ಲಿಯು ಆತನ ಸಕಲ ಸತ್ಕ್ರಿಯೆಗಳ ಆಲೋಚನೆಯೆಲ್ಲಾ” ನೆರವೇರುವುವು. (2 ಥೆಸಲೋನಿಕ 1: 11). MBK 112.1