Go to full page →

ಗುಣಸ್ವಭಾವದಲ್ಲಿ ಕ್ರಿಸ್ತನ ಸ್ವರೂಪ ಕೊಕಾಘ 128

ಗುಣಸ್ವಭಾವದಲ್ಲಿ ಕ್ರಿಸ್ತನ ಸ್ವರೂಪ ಹೊಂದಿರುವವರಿಗೆ ಮಾತ್ರ ಜೀವಸ್ವರೂಪನಾದ ದೇವರ ಮುದ್ರೆಯು ಹಾಕಲ್ಪಡುವುದು (ಪುಟ 970). ಜೀವಸ್ವರೂಪನಾದ ದೇವರ ಮುದ್ರೆ ಹೊಂದಿ ಇಕ್ಕಟ್ಟಿನ ಕಾಲದಲ್ಲಿ ರಕ್ಷಿಸಲ್ಪಟ್ಟವರು ಯೆಸುವಿನ ಸ್ವರೂಪವನ್ನು ಸಂಪೂರ್ಣವಾಗಿ ಪ್ರತಿಫಲಿಸಬೇಕು (ಎವಾಂಜಲಿಸಮ್ 71, 1851) ಕೊಕಾಘ 128.5

ಅಪರಿಶುದ್ಧರಾದ ಯಾವ ಸ್ತ್ರೀಪುರುಷರ ಹಣೆಯ ಮೇಲೆ ದೇವರ ಮುದ್ರೆ ಎಂದಿಗೂ ಹಾಕಲ್ಪಡುವುದಿಲ್ಲ, ಮಹತ್ವಾಕಾಂಕ್ಷಿಯಾದ, ಲೋಕದ ಆಶಾಪಾಶಗಳನ್ನೇ ಪ್ರೀತಿಸುವವರ ಮೇಲೆ, ಹಾಗೂ ಸುಳ್ಳಾಡುವವರು, ವಂಚನೆಯ ಹೃದಯವುಳ್ಳವರ ಮೇಲೆ ಎಂದಿಗೂ ಸಹ ದೇವರ ಮುದ್ರೆ ಹಾಕಲಡುವುದಿಲ್ಲ. ದೇವರ ಮುದ್ರೆ ಹೊಂದುವವರೆಲ್ಲರೂ ಪರಲೋಕದ ಪ್ರತಿನಿಧಿಗಳಾಗಿ ಕರ್ತನ ಮುಂದೆ ನಿಷ್ಕಳಂಕರಾಗಿ ನಿಲ್ಲಬೇಕು (ಟೆಸ್ಟಿಮೊನೀಸ್, ಸಂಪುಟ 5, 216, 1882). ಕೊಕಾಘ 128.6

ಪ್ರೀತಿಯು ವಿಧೇಯತೆಯ ಮೂಲಕ ವ್ಯಕ್ತವಾಗುತ್ತದೆ ಹಾಗೂ ಪರಿಪೂರ್ಣ ಪ್ರೀತಿಯು ಎಲ್ಲಾ ಭಯವನ್ನು ನಿವಾರಿಸುತ್ತದೆ. ದೇವರನ್ನು ಪ್ರೀತಿಸುವವರು, ತಮ್ಮ ಹಣೆಯ ಮೇಲೆ ಆತನ ಮುದ್ದೆ ಹೊಂದಿರುವವರು ಹಾಗೂ ಅವರು ದೇವರ ಕಾರ್ಯಗಳನ್ನು ಮಾಡುವರು (ಸನ್ಸ್ ಅಂಡ್ ಡಾಟರ್ಸ್ ಆಫ್‌ಗಾಡ್ 51, 1894). ಲೋಕವನ್ನು, ಸೈತಾನನನ್ನು ಹಾಗೂ ಶರೀರಿದಾಶೆಗಳ ಮೇಲೆ ಜಯಹೊಂದಿದವರು, ದೇವರ ದಯೆಗೆ ಪಾತ್ರರಾಗಿದ್ದಾರೆ. ಅವರು ಜೀವಸ್ವರೂಪನಾದ ದೇವರ ಮುದ್ದೆ ಹೊಂದುವರು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, 445, 1886). ಕೊಕಾಘ 128.7

ದೇವರು ಕೊಟ್ಟಿರುವ ಎಲ್ಲಾ ಶಕ್ತಿ ಉಪಯೋಗಿಸಿ ಕ್ರಿಸ್ತನಲ್ಲಿ ಉತ್ತಮ ಪುರುಷರಾಗಿ ಆತನ ಶ್ರೇಷ್ಠತೆಯ ಮಟ್ಟ ಮುಟ್ಟಲು ನಾವು ಪ್ರಯತ್ನಿಸುತ್ತಿದೇವೆಯೋ? ನಾವು ದೇವರ ಪರಿಪೂರ್ಣತೆಯಲ್ಲಿ ಉನ್ನತ ಮಟ್ಟವನ್ನು ಮುಟ್ಟುವುದಕ್ಕೆ ಹಾಗೂ ಆತನ ಗುಣಸ್ವಭಾವದ ನಿಷ್ಕಳಂಕತೆ ಹೊಂದುವುದಕ್ಕೆ ಪ್ರಯತ್ನಿಸುತ್ತಿದ್ದೇವೆಯೇ? ದೇವರ ಮಕ್ಕಳು ಈ ಪರಿಪೂರ್ಣತೆ ಹೊಂದಿದಾಗ ಅವರ ಹಣೆಯ ಮೇಲೆ ದೇವರ ಮುದ್ರೆ ಒತ್ತಲ್ಪಡುವುದು. ಆಗ ಮುದ್ರೆ ಒತ್ತುವ ದೇವದೂತನು ‘ತೀರಿತು’ ಎಂದು ಹೇಳುವನು. ಸೃಷ್ಟಿಯಿಂದಲೂ ಹಾಗೂ ವಿಮೋಚನೆಯಿಂದಲೂ ದೇವರ ಮಕ್ಕಳಾಗಿರುವ ಅವರು ಆತನಲ್ಲಿ ಪರಿಪೂರ್ಣರಾಗುವರು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 427, 1899). ಕೊಕಾಘ 129.1