Go to full page →

ನಾಲ್ಕನೇ ಉಪದ್ರವ ಕೊಕಾಘ 143

ನಾಲ್ಕನೇ ಉಪದ್ರವದಲ್ಲಿ ಸೂರ್ಯನಿಗೆ ಕಡುಬಿಸಿಲಿನಿಂದ ಮನುಷ್ಯರನ್ನು ಕಂದಿಸುವ ಶಕ್ತಿ ಕೊಡಲ್ಪಟ್ಟಿತು (ಪ್ರಕಟನೆ 16:8, 9)ಪ್ರವಾದಿಗಳಾದ ಯೋವೇಲನು ಹಾಗೂ ಆಮೋಸನು ಭಯಾನಕವಾದ ನಾಲ್ಕನೇ ಉಪದ್ರವದ ಕಾಲದಲ್ಲಿ ಲೋಕದ ಪರಿಸ್ಥಿತಿಯನ್ನು ಈ ರೀತಿ ವರ್ಣಿಸುತ್ತಾರೆ. ‘ಹೊಲವು ಹಾಳಾಗಿದೆ, ದೇಶವು ದುಃಖಿಸುತ್ತದೆ, ಏಕೆಂದರೆ ಧಾನ್ಯವು ಸೂರೆಯಾಗಿದೆ, ದ್ರಾಕ್ಷಾರಸವು ತಗ್ಗಿದೆ... ಗೋದಿಯೂ, ಜವೆಗೋದಿಯೂ ಹಾಳಾಗಿದೆ.. ಅಯ್ಯೋ, ಪಶುಗಳು ಎಷ್ಟೋ ನರಳುತ್ತವೆ! ಮೇವಿಲ್ಲದ ಕಾರಣ ದನದ ಮಂದೆಗಳು ಭ್ರಮೆಗೊಂಡಿವೆ... ತೊರೆಗಳು ಬತ್ತಿ ಹೋಗಿವೆ, ಕಾಡಿನ ಹುಲ್ದಾವಲನ್ನು ಕಿಚ್ಚು ನುಂಗಿ ಬಿಟ್ಟಿದೆ. (ಯೋವೇಲನು 110-12: 1720). “.. ಆಗ ಹೆಣಗಳು ಹೆಚ್ಚುವವು; ಅವುಗಳನ್ನು ಎಲ್ಲೆಲ್ಲಿಯೂ ಮೌನವಾಗಿ ಬಿಸಾಟು ಬಿಡುವರು...” ಆಮೋಸನು 8:3, ಕೊಕಾಘ 143.4

ಈ ಉಪದ್ರವಗಳು ಜಗತ್ತಿನಾದ್ಯಂತ ಕಂಡುಬರುವುದಿಲ್ಲ ಅಥವಾ ಲೋಕದ ಜನರೆಲ್ಲರೂ ನಾಶವಾಗುವುದಿಲ್ಲ. ಆದಾಗ್ಯೂ ಇವು ಮನುಷ್ಯರಿಗೆ ಬರಬಹುದಾದ ಅತ್ಯಂತ ಭಯಾನಕವಾದ ಉಪದ್ರವಗಳಾಗಿವೆ (ಗ್ರೇಟ್ ಕಾಂಟ್ರೊವರ್ಸಿ, 628). ಕೊಕಾಘ 143.5