Go to full page →

ದೇವರ ಮಕ್ಕಳು ಮುಂದೆ ಬರಲಿರುವ ಸಂಕಟದ ಸಮಯಕ್ಕೆ ಸಿದ್ಧರಾಗಿರುವರು ಕೊಕಾಘ 148

ಮೂರನೇ ದೂತನ ಸಂದೇಶವು ಮುಕ್ತಾಯವಾದ ನಂತರ, ಲೋಕದ ಪಾಪಿಗಳಿಗಾಗಿ ಇನ್ನುಮುಂದೆ ಕರುಣೆಯು ತೋರಿಸಲ್ಪಡುವುದಿಲ್ಲ. ದೇವರ ಮಕ್ಕಳು ತಮ್ಮ ಕೆಲಸ ಮುಕ್ತಾಯಗೊಳಿಸಿದ್ದಾರೆ. ಅವರು ದೇವರ ಬಳಿಯಿಂದ ಬರುವ ಚೈತನ್ಯಗೊಳಿಸುವ ಹಿಂಗಾರು ಮಳೆ ಅಂದರೆ ಪವಿತ್ರಾತ್ಮನ ವರವನ್ನು ಪಡೆದುಕೊಂಡಾಗಿದೆ ಹಾಗೂ ಅವರು ಮುಂದೆ ಬರಲಿರುವ ಸಂಕಟ ಸಮಯಕ್ಕೆ ಸಿದ್ಧರಾಗಿದ್ದಾರೆ. ಕೊಕಾಘ 148.2

ದೇವದೂತರು ಪರಲೋಕದಲ್ಲಿ ಅತ್ತಿಂದಿತ್ತ ತ್ವರೆಯಿಂದ ತಿರುಗಾಡುತ್ತಿರುವರು, ಭೂಲೋಕದಿಂದ ಹಿಂದಿರುಗಿದ ಒಬ್ಬ ದೇವದೂತನು ತನ್ನ ಕಾರ್ಯವು ಮುಗಿಯಿತೆಂದು ಹೇಳುವನು, ಲೋಕದ ಮೇಲೆ ಕೊನೆಯ ಪರೀಕ್ಷೆಯು ಬಂದಿದೆ ಹಾಗೂ ದೇವರಾಜ್ಞೆಗಳಿಗೆ ವಿಧೇಯರಾದವರು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹೊಂದಿದ್ದಾರೆ. ಆಗ ಕ್ರಿಸ್ತನು ಪರಲೋಕದ ದೇವದರ್ಶನ ಗುಡಾರದಲ್ಲಿ ತನ್ನ ಯಾಜಕ ಸೇವೆ ನಿಲ್ಲಿಸುವನು. ಕ್ರಿಸ್ತನು ತನ್ನ ಜನರಿಗಾಗಿ ದೋಷ ಪರಿಹಾರ ಮಾಡಿ ಅವರ ಪಾಪಗಳನ್ನು ಅಳಿಸಿ ಬಿಟ್ಟಿದಾನೆ. ಆತನ ಪರಲೋಕ ರಾಜ್ಯಕ್ಕೆ ಯಾರು ಬಾಧ್ಯರೆಂಬುದು ನಿರ್ಧರಿತವಾಗಿದೆ. ಆಕಾಶದ ಕೆಳಗಿರುವ ಎಲ್ಲಾ ದೊರೆತನ ರಾಜ್ಯಗಳು ರಕ್ಷಣೆಗೆ ಬಾಧ್ಯಸ್ಥರಾದ ನೀತಿವಂತರಿಗೆ ಇನ್ನೇನು ಕೊಡಲ್ಪಡುವುದು ಹಾಗೂ ಕ್ರಿಸ್ತನು ರಾಜಾಧಿರಾಜನೂ, ಕರ್ತರ ಕರ್ತನೂ ಆಗಿ ರಾಜ್ಯವಾಳುವನು (ಗ್ರೇಟ್ ಕಾಂಟ್ರೊವರ್ಸಿ, ಪುಟಗಳು 613, 164). ಕೊಕಾಘ 148.3