Go to full page →

1844ನೇ ಇಸವಿಯ ನಂತರ ಯಾವುದೇ ಸಮಯ ನಿಗದಿ ಮಾಡುವ ಪ್ರವಾದನೆಯಿಲ್ಲ ಕೊಕಾಘ 20

ಶ್ರೀಮತಿ ವೈಟಮ್ಮನವರು ಜಾಕ್ಸನ್ ಕ್ಯಾಂಪ್ ಮೀಟಿಂಗ್‌ನಲ್ಲಿ ಕ್ರಿಸ್ತನ ಬರೋಣಕ್ಕೆ ಸಮಯ ನಿಗದಿ ಮಾಡುವ ಮತಾಂಧರಿಗೆ ನೀವು ಅಂಧಕಾರದಲ್ಲಿದ್ದುಕೊಂಡು ಸೈತಾನನ ಕಾರ್ಯಗಳನ್ನು ಮಾಡುತ್ತಿದ್ದೀರೆಂದು ಸ್ಪಷ್ಟವಾಗಿ ತಿಳಿಸಿದರು. 1884ನೇ ಇಸವಿಯ ಆಕ್ಟೋಬರ್‌ನಲ್ಲಿ ಕೃಪೆಯ ಕಾಲ ಮುಗಿಯುವುದೆಂದು ತಮಗೆ ದೇವರಿಂದ ಪ್ರೇರಣೆ ಉಂಟಾಗಿದೆ ಎಂದು ಮತಾಂಧರು ಹೇಳಿಕೊಂಡರು. ಆದರೆ ಶ್ರೀಮತಿ ವೈಟಮ್ಮನವರು 1844ನೇ ಇಸವಿ ಆದನಂತರದಿಂದ ಕರ್ತನ ಬರೋಣವು ಇಂತದೇ ದಿನ ಬರುತ್ತದೆಂದು ಸಮಯ ನಿಗದಿ ಮಾಡುವ ಯಾವ ಸಂದೇಶವು ಇಲ್ಲವೆಂದು ತಮಗೆ ದರ್ಶನದಲ್ಲಿ ದೇವರು ತಿಳಿಸಿದನೆಂದು ಹೇಳಿದರು (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 2, ಪುಟ 73 (1885). ಕೊಕಾಘ 20.2

1844 ರಿಂದ ಕರ್ತನ ಬರುವವರೆಗಿನ ಪ್ರವಾದನಾತ್ಮಕ ಕಾಲದ ನಡುವೆ ಯಾವುದೇ ಸಮಯವನ್ನು ನಿಗದಿ ಮಾಡಬಾರದು. ತಾಳ್ಮೆಯಿಂದ ಎಚ್ಚರವಾಗಿದ್ದು ಕ್ರಿಸ್ತನ ಬರೋಣಕ್ಕಾಗಿ ಕಾದುಕೊಂಡಿರುವುದು ಮಾತ್ರ ನಮ್ಮ ಕರ್ತವ್ಯವಾಗಿದೆ. ನಿರ್ದಿಷ್ಟವಾದ ದಿನ, ಗಳಿಗೆಯಲ್ಲಿ ಕ್ರಿಸ್ತನು ಬರುತ್ತಾನೆಂಬ ಬೇರೆ ಯಾವ ಸಂದೇಶವೂ ಜನರಿಗೆ ಕೊಡಲ್ಪಟ್ಟಿಲ್ಲ. ಪ್ರಕಟನೆ 10:4-6ನೇ ವಚನಗಳಲ್ಲಿ ತಿಳಿಸಿರುವ 1842 ರಿಂದ 1844 ರವರೆಗಿನ ಕಾಲದ ಅವಧಿಯ ನಂತರ, ಪ್ರವಾದನಾ ಸಮಯವನ್ನು ಖಚಿತವಾಗಿ ಗುರುತಿಸಲಾಗದು. 1844ನೇ ಇಸವಿಯ ಶರತ್ಕಾಲದಲ್ಲಿಯೇ ಅಂದರೆ ಸೆಪ್ಟೆಂಬರ್ 21 ರಿಂದ ಡಿಸೆಂಬರ್ 21 ರವರೆಗಿನ ಅವಧಿಯಲ್ಲಿಯೇ ಕ್ರಿಸ್ತನು ಬರುತ್ತಾನೆಂದು ಅಡ್ವಿಂಟಿಸ್ಟ್ ಎದುರು ನೋಡುತ್ತಿದ್ದ ಕಾಲ ಮುಕ್ತಾಯವಾಯಿತು (ಅಡ್ವಿಂಟಿಸ್ಟ್ ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟ 971 (1900). ಕೊಕಾಘ 20.3