Go to full page →

ನೀತಿವಂತರಲ್ಲಿ ಬಹಿರಂಗಪಡಿಸಬೇಕಾದ ಯಾವುದೇ ರಹಸ್ಯ ಪಾಪವಿಲ್ಲ ಕೊಕಾಘ 154

ಯಾಕೊಬ್ಬರ ಇಕ್ಕಟ್ಟಿನ ಕಾಲದಲ್ಲಿ, ದೇವರ ಮಕ್ಕಳು ಭಯ ಹಾಗೂ ವೇದನೆಯಿಂದ ಮಾನಸಿಕ ಹಿಂಸೆ ಎದುರಿಸುತ್ತಿರುವಾಗ, ಅವರಲ್ಲಿ ಅರಿಕೆ ಮಾಡದಿರುವ ಯಾವುದೇ ರಹಸ್ಯ ಪಾಪಗಳಿದಲ್ಲಿ, ಅವರ ಚಿತ್ತಸ್ಥೈರ್ಯವು ಕುಂದಿಹೋಗುತ್ತದೆ. ಹತಾಶೆಯಿಂದ ಅವರ ನಂಬಿಕೆಯು ಕುಸಿದು, ತಮ್ಮನ್ನು ಈ ಸಂಕಟದ ಸಮಯದಿಂದ ಬಿಡುಗಡೆ ಮಾಡಬೇಕೆಂದು ದೇವರಲ್ಲಿ ಮೊರೆಯಿಡುವುದಕ್ಕೆ ಅವರಲ್ಲಿ ಭರವಸೆಯಿರುವುದಿಲ್ಲ. ಆದರೆ ನೀತಿವಂತರಲ್ಲಿ ತಾವು ಅಯೋಗ್ಯರೆಂಬ ಭಾವನೆ ಗಾಢವಾಗಿದರೂ, ಬಹಿರಂಗಪಡಿಸಬೆಕಾದ ಯಾವುದೇ ರಹಸ್ಯ ಪಾಪವು ಅವರಲ್ಲಿರುವುದಿಲ್ಲ, ನ್ಯಾಯವಿಚಾರಣೆಯಲ್ಲಿ ಅವರ ಪಾಪಗಳೆಲ್ಲವೂ ಕ್ಷಮಿಸಲ್ಪಟ್ಟಿವೆ ಹಾಗೂ ಅವುಗಳು ನೆನಪಿಗೆ ಬರುವುದಿಲ್ಲ (ಗ್ರೇಟ್ ಕಾಂಟ್ರೊವರ್ಸಿ, 620). ಕೊಕಾಘ 154.2

ದೇವರಜನರಿಗೆ ತಮ್ಮ ತಪ್ಪು ದೋಷಗಳ ಬಗ್ಗೆ ಗಾಢವಾದ ತಿಳುವಳಿಕೆಯಿದೆ. ಅವರು ತಮ್ಮ ಜೀವನವನ್ನು ಪುನರ್ ವಿಮರ್ಶೆ ಮಾಡಿದಾಗ, ಅವರ ನಿರೀಕ್ಷೆಯು ಕುಂದಿ ಹೋಗುತ್ತದೆ. ಆದರೆ ದೇವರ ಮಹೋನ್ನತವಾದ ಕರುಣೆಯನ್ನೂ ಹಾಗೂ ಪ್ರಾಮಾಣಿಕವಾದ ತಮ್ಮ ಪಶ್ಚಾತ್ತಾಪವನ್ನೂ ಅವರು ನೆನಪಿಗೆ ತಂದುಕೊಂಡು, ಅಸಹಾಯಕರಾದ ಪಶ್ಚಾತ್ತಾಪಪಟ್ಟಂತೆ ಪಾಪಿಗಳಿಗೆ ಕ್ರಿಸ್ತನ ಮೂಲಕ ದೇವರು ಮಾಡಿದ ವಾಗ್ದಾನಗಳನ್ನು ನೆರವೇರಿಸುವಂತೆ ಆತನಿಗೆ ಮೊರೆಯಿಡುತ್ತಾರೆ. ನೀತಿವಂತರ ಈ ಪ್ರಾರ್ಥನೆಗೆ ತಕ್ಷಣದಲ್ಲಿಯೇ ಉತ್ತರ ಸಿಕ್ಕದಿದ್ದರೂ, ಅವರ ನಂಬಿಕೆಯು ಕುಂದಿಹೋಗುವುದಿಲ್ಲ. ಯಾಕೋಬನು ದೇವದೂತನನ್ನು ಹಿಡಿದುಕೊಂಡಂತೆ, ಅವರು ದೇವರ ಬಲವನ್ನು ಆಶ್ರಯಿಸಿಕೊಂಡು ‘ನೀನು ನನ್ನನ್ನು ಆಶೀರ್ವದಿಸಿದ ಹೊರತು, ನನ್ನನ್ನು ಬಿಡುವುದಿಲ್ಲ ಎಂದು ಬೇಡಿಕೊಳ್ಳುತ್ತಾರೆ (ಆದಿಕಾಂಡ 32:26) ಪೇಟ್ರಿಯಾರ್ಕ್ಸ್ ಅಂಡ್ ಪ್ರಾಫೆಟ್, ಪುಟ 202). ಕೊಕಾಘ 154.3