Go to full page →

ರಕ್ಷಣೆ ಕಳೆದುಕೊಂಡವರ ಭೀತಿ ಕೊಕಾಘ 160

ಭೂಮಿಯು ಕುಡುಕನಂತೆ ಅತ್ತಿತ್ತ ಓಲಾಡುತ್ತಿರುವಾಗ, ಆಕಾಶವು ಕಂಪಿಸುತ್ತಿರುವಾಗ, ದೇವರ ಮಹಾದಿನವು ಬರುತ್ತದೆ. ಅದು ಮುಂದೆ ನಿಲ್ಲುವವರು ಯಾರು? ಭಯಹುಟ್ಟಿಸುವ ಆ ವೇದನೆಯಿಂದ ದುಷ್ಟರು ತಪ್ಪಿಸಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡುವರು. ‘ಇಗೋ, ಮೇಘಗಳೊಂದಿಗೆ ಬರುತ್ತಾನೆ. ದುಷ್ಟರು ತಮ್ಮ ದೇವತೆಯಾದ ಪ್ರಕೃತಿಗೆ ಭಯಂಕರವಾದ ಶಾಪ ಹಾಕುವರು. ಹಾಗೂ “ಬೆಟ್ಟಗಳಿಗೂ, ಬಂಡೆಗಳಿಗೂ - ನಮ್ಮ ಮೇಲೆ ಬೀಳಿರಿ: ಸಿಂಹಾಸನದ ಮೇಲೆ ಕೂತಿರುವಾತನ ಮುಖಕ್ಕೂ, ಯಜ್ಞದ ಕುರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ’ ಎಂದು ಕೇಳುವರು (ಪ್ರಕಟನೆ 6:16) (ದಟ್ ವೀ ಮೇ ನೋ ಹಿಮ್ ಪುಟ 356). ಕೊಕಾಘ 160.3

ದೇವರು ಮಹಾಶಬ್ಧದಿಂದ ತನ್ನ ಜನರನ್ನು ಬಿಡುಗಡೆ ಮಾಡಿದಾಗ, ಜೀವನದ ಮಹಾಹೋರಾಟದಲ್ಲಿ ತಮ್ಮದೆಲ್ಲವನ್ನೂ ಕಳೆದುಕೊಂಡವರು ಮಹಾಭೀತಿಗೊಳಗಾಗುವರು, ಅವರ ಜೀವಮಾನದಲ್ಲಿ ಗಳಿಸಿದ ಸಂಪತ್ತೆಲ್ಲವೂ ಕ್ಷಣಾರ್ಧದಲ್ಲಿ ನಾಶವಾಯಿತು. ಶ್ರೀಮಂತರು ಅರಮನೆಯಂತ ತಮ್ಮ ಮನೆಗಳು ನಾಶವಾದದ್ಧನ್ನು ಹಾಗೂ ಕೂಡಿಟ್ಟ ಬೆಳ್ಳಿ ಬಂಗಾರವು ಎಲ್ಲೆಲ್ಲಿಯೂ ಬಿದ್ದಿರುವುದನ್ನು ನೋಡಿ ದುಃಖಿಸುವರು... ದುಷ್ಟರು ವಿಷಾದ ವ್ಯಕ್ತಪಡಿಸುವರು. ಆದರೆ ತಾವು ಹಾಗೂ ಇತರರು ದೇವರನ್ನು ನಿರ್ಲಕ್ಷಿಸಿದ ಕಾರಣಕ್ಕಲ್ಲ, ಬದಲಾಗಿ ದೇವರು ಜಯ ಹೊಂದಿದಕ್ಕಾಗಿ ದುಃಖಿಸಿ ವಿಷಾದಪಡುವರು. ಅದರ ಪರಿಣಾಮ ಏನೆಂದು ದುಷ್ಟರು ದುಃಖಿಸಿದರೂ, ತಮ್ಮ ದುಷ್ಟತನಕ್ಕಾಗಿ ಪಶ್ಚಾತ್ತಾಪ ಪಡುವುದಿಲ್ಲ (ಗ್ರೇಟ್ ಕಾಂಟ್ರೊವರ್ಸಿ, 654). ಕೊಕಾಘ 160.4