Go to full page →

ದುಷ್ಟರನ್ನು ನಾಶಮಾಡುವುದೂ ಸಹ ದೇವರ ಕರುಣೆಯ ಕಾರ್ಯವಾಗಿದೆ ಕೊಕಾಘ 163

ದೇವರ ಸತ್ಯ ಹಾಗೂ ಪರಿಶುದ್ಧತೆಗೆ ವಿರುದ್ಧವಾಗಿ ದ್ವೇಷವುಳ್ಳವರು, ನೀತಿವಂತರೊಂದಿಗೆ ಸೇರಿ ದೇವರನ್ನು ಸ್ತುತಿಸಿ ಜಯಘೋಷ ಮಾಡುವರೇ? ಅವರು ಪರಿಶುದ್ಧವಾದ ದೇವರು ಹಾಗೂ ಆತನ ಮಗನಾದ ಕ್ರಿಸ್ತನ ಮಹಿಮೆಯ ವೈಭವವನ್ನು ತಾಳಿಕೊಳ್ಳುವರೇ? ಇಲ್ಲ, ಎಂದಿಗೂ ಇಲ್ಲ. ದುಷ್ಟರು ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವಂತೆ ಅವರಿಗೆ ಅನೇಕ ವರ್ಷಗಳ ಕಾಲ ಕೊಡಲ್ಪಟ್ಟಿತು. ಆದರೆ ಅವರು ಪರಿಶುದ್ಧತೆಯನ್ನು ಪ್ರೀತಿಸಲಿಲ್ಲ. ಪರಲೋಕದ ಭಾಷೆ ಅಂದರೆ ಪ್ರೀತಿ ತೋರಿಸುವುದನ್ನು ಕಲಿಯಲಿಲ್ಲ, ಆದರೆ ಈಗ ಕಾಲವು ಮೀರಿದೆ. ದೇವರಿಗೆ ಎದುರು ಬೀಳುವ ಅವರ ಸ್ವಭಾವವು, ಅವರನ್ನು ಪರಲೋಕಕ್ಕೆ ಅಯೋಗ್ಯರನ್ನಾಗಿ ಮಾಡಿತು. ಪರಲೋಕದ ನಿರ್ಮಲತೆ, ಪರಿಶುದ್ಧತೆ ಹಾಗೂ ಸಮಾಧಾನವು ಅವರಿಗೆ ಹಿಂಸೆ ಅನುಭವಿಸಿದಂತಾಗುವುದು, ದೇವರ ಮಹಿಮೆಯು ಅವರಿಗೆ ಸುಡುವ ಬೆಂಕಿಯಾಗಿಡುವುದು. ಅಂತಹ ಪವಿತ್ರಸ್ಥಳದಿಂದ ಪಲಾಯನ ಮಾಡಲು ದುಷ್ಟರು ಬಯಸುವರು, ತಮ್ಮನ್ನು ರಕ್ಷಿಸಲು ತನ್ನ ಪ್ರಾಣಕೊಟ್ಟಂತ ಕ್ರಿಸ್ತನ ಮುಖದಿಂದ ಮರೆಮಾಡಿಕೊಳ್ಳಲು ಅವರು ಮರಣವನ್ನು ಸ್ವಾಗತಿಸುವರು. ಪರಲೋಕಕ್ಕೆ ಸೇರದಿರುವುದು ಸ್ವತಃ ಅವರ ನಿರ್ಧಾರವಾಗಿದೆ ಮತ್ತು ದೇವರ ನ್ಯಾಯವೂ ಹಾಗೂ ಕರುಣೆಯೂ ಆಗಿದೆ (ಗ್ರೇಟ್ ಕಾಂಟ್ರೊವರ್ಸಿ. 542, 543). ಕೊಕಾಘ 163.7