Go to full page →

ಭಕ್ತರಿಗೆ ಕಿರೀಟಗಳು ಹಾಗೂ ತಂತಿವಾದ್ಯಗಳು ಕೊಡಲ್ಪಡುವವು ಕೊಕಾಘ 165

ಅಸಂಖ್ಯಾತರಾದ ದೇವದೂತರು ರಕ್ಷಿಸಲ್ಪಟ್ಟ ಪ್ರತಿಯೊಬ್ಬರಿಗೂ ಮಹಾವೈಭವ ಹಾಗೂ ಮಹಿಮೆಯುಳ್ಳ ಕಿರೀಟವನ್ನು ಪರಲೋಕದಿಂದ ತರುವರು. ಅವುಗಳಲ್ಲಿ ಅವರ ಹೆಸರುಗಳು ಬರೆಯಲ್ಪಟ್ಟಿರುತ್ತವೆ. ಕಿರೀಟಗಳನ್ನು ಕೊಡುವಂತೆ ಕ್ರಿಸ್ತನು ದೇವದೂತರಿಗೆ ಹೇಳುವನು. ಅತ್ಯಂತ ಮನೋಹರರೂಪವುಳ್ಳ ಆತನು ತನ್ನ ಬಲಗೈಯಿಂದ ಪ್ರತಿಯೊಬ್ಬರ ತಲೆಯ ಮೇಲೆ ಕಿರೀಟ ಇಡುವನು (ಅರ್ಲಿ ರೈಟಿಂಗ್, 288). ಕೊಕಾಘ 165.2

ಗಾಜಿನ ಸಮುದ್ರದ ಮೇಲೆ ಒಂದು ಲಕ್ಷದ ನಾಲ್ಕತ್ತುನಾಲ್ಕು ಸಾವಿರ ಮಂದಿ ಶಿಸ್ತುಬದ್ಧವಾಗಿ ವರ್ತುಲಾಕಾರದಲ್ಲಿ ನಿಂತಿರುವರು. ಅವರಲ್ಲಿ ಕೆಲವರ ತಲೆಯ ಮೇಲಿರುವ ಕಿರೀಟಗಳು ಬಹಳವಾಗಿ ಪ್ರಕಾಶಿಸುತ್ತವೆ, ಬೇರೆ ಕೆಲವರ ಕಿರೀಟಗಳು ಅಷ್ಟೊಂದು ಹೊಳೆಯುತ್ತಿರುವುದಿಲ್ಲ. ಕೆಲವರ ಕಿರೀಟಗಳಲ್ಲಿ ಅನೇಕ ನಕ್ಷತ್ರಗಳಿರುತ್ತವೆ. ಬೇರೆ ಕೆಲವರ ಕಿರೀಟಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ನಕ್ಷತ್ರಗಳಿರುತ್ತವೆ. ಎಲ್ಲರೂ ಸಹ ತಮಗೆ ದೊರೆತ ಕಿರೀಟಗಳಿಂದ ಸಂಪೂರ್ಣವಾಗಿ ತೃಪ್ತರಾಗಿರುತ್ತಾರೆ (ಅರ್ಲಿ ರೈಟಿಂಗ್, 16, 17), ನಮ್ಮ ನಮ್ಮ ಕೃತ್ಯಗಳ ಪ್ರಕಾರ ಜೀವದ ಕಿರೀಟವು ಹೊಳೆಯುತ್ತಿರುವೆ ಇಲ್ಲವೆ ಮಸುಕಾಗಿರುತ್ತವೆ ಅಥವಾ ಅನೇಕ ನಕ್ಷತ್ರಗಳಿಂದ ಕೂಡಿದ್ದು ಪ್ರಕಾಶಿಸುತ್ತವೆ (ಬೈಬಲ್ ವ್ಯಾಖ್ಯಾನ, ಸಂಪುಟ 6, ಪುಟ 1105). ಕೊಕಾಘ 165.3

ನಕ್ಷತ್ರಗಳಿಲ್ಲದ ಕಿರೀಟ ಹೊಂದಿರುವವರು ಪರಲೋಕದಲ್ಲಿ ಯಾರೂ ಇರುವುದಿಲ್ಲ. ನೀವು ಪರಲೋಕಕ್ಕೆ ಹೋದಲ್ಲಿ, ನಿಮ್ಮಿಂದ ರಕ್ಷಣೆ ಪಡೆದುಕೊಂಡು ಅಲ್ಲಿಗೆ ಬಂದಿರುವವರು ಯಾರಾದರೂ ಇದ್ದೇ ಇರುತ್ತಾರೆ (ಸೈನ್ಸ್ ಆಫ್ ದಿ ಟೈಮ್ಸ್, ಜೂನ್ 6, 1892). ಹೊಸ ಯೆರೂಸಲೇಮಿಗೆ ಪ್ರವೇಶಿಸುವುದಕ್ಕೆ ಮೊದಲು ರಕ್ಷಕನಾದ ಕ್ರಿಸ್ತನು ಎಲ್ಲರಿಗೂ ವಿಜಯದ ಸಂಕೇತವಾಗಿ ಕಿರೀಟ ಕೊಡುತ್ತಾನೆ. ತನ್ನ ಬಲಗೈಯಿಂದ ಆತನು ಎಲ್ಲರ ತಲೆಯ ಮೇಲೆ ಮಹಿಮೆಯ ಕಿರೀಟ ತೊಡಿಸುವನು. ಪ್ರತಿಯೊಬ್ಬರ ಕೈಯಲ್ಲೂ ವಿಜಯದ ಸಂಕೇತವಾದ ಖರ್ಜೂರಗರಿ ಮತ್ತು ಬಂಗಾರದಿಂದ ಹೊಳೆಯುತ್ತಿರುವ ತಂತಿವಾದ್ಯಗಳಿರುತ್ತವೆ, ಆಗ ದೇವದೂತರು ತಮ್ಮ ತಂತಿವಾದ್ಯಗಳನ್ನು ಬಾರಿಸಲು ತೊಡಗುವರು. ಅದನ್ನು ಕೇಳಿದ ನೀತಿವಂತರೂ ಸಹ ತಮಗೆ ಕೊಡಲ್ಪಟಿರುವ ತಂತಿವಾದ್ಯಗಳನ್ನು ಬಹಳ ಕೌಶಲದಿಂದ ಮೀಟುತ್ತಾ ಎಂದೂ ಯಾರೂ ಕೇಳದಂತ ಅತ್ಯಂತ ಮಧುರವಾದ ಸಂಗೀತ ಬಾರಿಸುವರು. ಅವರ ಮುಂದೆ ಪರಿಶುದ್ದ ನಗರವಿರುವುದು. ಯೇಸುಕ್ರಿಸ್ತನು ಮುತ್ತಿನ ಬಾಗಿಲುಗಳನ್ನು ವಿಶಾಲವಾಗಿ ತೆರೆಯುವನು. ಸತ್ಯವನ್ನು ಕೈಕೊಂಡು ನಡೆದ ನೀತಿವಂತರೆಲ್ಲರೂ ಅದರಲ್ಲಿ ಪ್ರವೇಶಿಸುವರು (ಗೇಟ್ ಕಾಂಟ್ರೊವರ್ಸಿ, ಪುಟಗಳು 645, 646). ಕೊಕಾಘ 165.4

*****