Go to full page →

ದೇವರ ವಾಗ್ದಾನಗಳು ಷರತ್ತುಗಳಿಗೆ ಒಳಪಟ್ಟಿವೆ ಕೊಕಾಘ 22

ದೇವದೂತರು ಮನುಷ್ಯರಿಗೆ ಕೊಟ್ಟ ಸಂದೇಶದಲ್ಲಿ ಸಮಯವು ಬಹಳ ಕಡಿಮೆಯಾಗಿದೆ ಎಂದು ಹೇಳಿದರು (ರೋಮಾಯ 13:11, 12: 1 ಕೊರಿಂಥ 7:29; 1 ಥೆಸಲೊನೀಕ 4:15, 17: ಇಬ್ರಿಯ 10:25; ಯಾಕೋಬನು 5:3,9; 1 ಪೇತ್ರನು 47: ಪ್ರಕಟನೆ 22:6; 7ನೇ ವಚನಗಳನ್ನು ಓದಿರಿ). ಇದನ್ನೇ ದೇವದೂತರು ದರ್ಶನದಲ್ಲಿ ಶ್ರೀಮತಿ ವೈಟಮ್ಮನವರಿಗೂ ತಿಳಿಸಿದರು. ಈ ಸಂದೇಶಕೊಟ್ಟ ಆರಂಭದ ದಿನಗಳಲ್ಲಿ ನಾವು ನಿರೀಕ್ಷಿಸಿದಕ್ಕಿಂತಲೂ ಸಮಯವು ದೀರ್ಘವಾಗಿ ಮುಂದುವರಿಯುತ್ತೆಂಬುದು ನಿಜ, ನಾವು ನಿರೀಕ್ಷಿಸಿದಷ್ಟು ಬೇಗನೆ ನಮ್ಮ ರಕ್ಷಕನು ಬರಲಿಲ್ಲ. ಆದರೆ ದೇವರ ವಾಕ್ಯವು ವಿಫಲವಾಯಿತೇ? ಎಂದಿಗೂ ಇಲ್ಲ. ದೇವರ ವಾಗ್ದಾನಗಳು ಮತ್ತು ದಂಡನೆ ಬೆದರಿಕೆಯು ಷರತ್ತಿಗೆ ಒಳಪಟ್ಟಿವೆ ಎಂಬುದನ್ನು ನೆನಪಿನಲ್ಲಿಡಬೇಕು (ಯೆರೆಮೀಯ 18:7-10; ಯೋನ 3:4-10 ಓದಿರಿ). ಕೊಕಾಘ 22.1

ಇಸ್ರಾಯೇಲ್ಯರಂತೆ ನಾವೂ ಸಹ ದೇವರಿಗೆ ವಿರುದ್ಧವಾಗಿ ಎದುರು ಬೀಳುವಿಕೆ ಹಾಗೂ ಅವಿಧೇಯತೆಯ ನಿಮಿತ್ತವಾಗಿ ಈ ಲೋಕದಲ್ಲಿ ಇನ್ನೂ ಅನೇಕ ವರ್ಷಗಳು ಇರಬೇಕಾಗುವುದು. ಆದರೆ ದೇವರ ಮಕ್ಕಳು ತಮ್ಮ ತಪ್ಪಾದ ಕಾರ್ಯಗಳ ನಿಮಿತ್ತ ಹೆಚ್ಚಾದ ಪಾಪ ಮಾಡಬಾರದು (ಎವಾಂಜಲಿಸಮ್ ಪುಟಗಳು 695, 696 (1901) ಕೊಕಾಘ 22.2