Go to full page →

ತೊರೆಗಳು, ಬೆಟ್ಟಗುಡ್ಡಗಳು ಹಾಗೂ ಮರಗಳು ಕೊಕಾಘ 168

ಪರಲೋಕದಲ್ಲಿ ಜೀವವೃಕ್ಷ ಹಾಗೂ ದೇವರ ಸಿಂಹಾಸನವಿದೆ. ದೇವರ ಹಾಗೂ ಯಜ್ಞದ ಕುರಿಯಾದಾತನ ಸಿಂಹಾಸನದಿಂದ ಸ್ಪಟಿಕದಂತೆ ಪ್ರಕಾಶಮಾನವಾಗಿದ್ದ ಜೀವಜಲದ ನದಿ ಹರಿಯುತ್ತದೆ. ಆ ನದಿಯ ಎರಡೂ ಕಡೆಗಳಲ್ಲಿ ಜೀವವೃಕ್ಷವಿದೆ. ನದಿಯ ಒಂದು ಭಾಗದಲ್ಲಿ ವೃಕ್ಷದ ಬುಡ ಹಾಗೂ ಮತ್ತೊಂದು ದಂಡೆಯಲ್ಲಿ ಜೀವವೃಕ್ಷದ ಇನ್ನೊಂದೂ ಭಾಗಗಳಿವೆ. ಇವೆರಡೂ ಅಪ್ಪಟವಾದ ಹಾಗೂ ಪಾರದರ್ಶಕವಾದ ಬಂಗಾರದ ಬುಡಗಳು, ಮೊದಲು ನೋಡಿದಾಗ ಎರಡು ಮರಗಳಿವೆ ಎಂದು ಶ್ರೀಮತಿ ವೈಟಮ್ಮನವರಿಗೆ ಅನಿಸಿತು. ಅವರು ಮತ್ತೆ ನೋಡಿದಾಗ, ಇವೆರಡೂ ಬುಡಭಾಗಗಳು ಮೇಲೆ ಒಂದೇ ಮರವಾಗಿ ಕೂಡಿಕೊಂಡಿತ್ತು. ಆದುದರಿಂದ ಇದು ಜೀವಜಲದ ನದಿಯ ಎರಡೂ ಭಾಗಗಳಲ್ಲಿರುವ ಜೀವ ವೃಕ್ಷವಾಗಿದೆ (ಪ್ರಕಟನೆ 22:1,2) ಅದರ ಕೊಂಬೆಗಳು ಶ್ರೀಮತಿ ವೈಟಮ್ಮನವರು ನಿಂತಿದ್ದ ಸ್ಥಳದಲ್ಲಿ ಬಾಗಿಕೊಂಡಿತ್ತು. ಅದರ ಹಣ್ಣು ಬಂಗಾರವು ಬೆಳ್ಳಿಯೊಂದಿಗೆ ಬೆರೆತಂತೆ ರಮ್ಯವಾಗಿತ್ತು (ಅರ್ಲಿ ರೈಟಿಂಗ್ಸ್, 17). ಕೊಕಾಘ 168.7

ಪರಲೋಕದಲ್ಲಿ ಸದಾಕಾಲವೂ ಸ್ಪಟಿಕದಂತೆ ಸ್ಪಷ್ಟವಾಗಿ ಹರಿಯುವ ನೀರಿನ ತೊರೆಗಳು ಹಾಗೂ ಅವುಗಳ ಪಕ್ಕದಲ್ಲಿ, ನೀತಿವಂತರಿಗಾಗಿ ಉಂಟುಮಾಡಲ್ಪಟ್ಟಿರುವ ದಾರಿಗಳಲ್ಲಿ ಓಲಾಡುವ ಮರಗಳು ತಮ್ಮ ನೆರಳು ಚೆಲ್ಲುತ್ತಿದ್ದವು. ಅಲ್ಲಿ ವಿಶಾಲವಾದ ಬಯಲು ಪ್ರದೇಶವಿದ್ದು, ಅದರಲ್ಲಿ ಸೊಗಸಾದ ಹಾಗೂ ಭವ್ಯವಾದ ಬೆಟ್ಟಗುಡ್ಡಗಳಿವೆ. ಜೀವಕರವಾದ ತೊರೆಗಳ ಬಳಿಯಲ್ಲಿರುವ ನಮ್ಮದಿಯ ಬಯಲಿನಲ್ಲಿ ಈ ಲೋಕದಲ್ಲಿ ದೀರ್ಘಕಾಲ ಯಾತ್ರಿಕರೂ, ಅಲೆದಾಡುವವರೂ ಆಗಿದ್ದ ದೇವರ ಮಕ್ಕಳು ವಾಸಿಸುವರು (ಗ್ರೇಟ್ ಕಾಂಟ್ರವರ್ಸಿ, 675). ಕೊಕಾಘ 169.1