Go to full page →

ಮಧುರ ಸಂಗೀತ ಹಾಗೂ ಹಾಡುಗಳಿಂದ ದೇವರನ್ನು ಸ್ತುತಿಸುವುದು ಕೊಕಾಘ 176

ಪರಲೋಕದಲ್ಲಿ ಅತ್ಯಂತ ಮಧುರವಾದ, ಕಿವಿಗೆ ಇಂಪಾಗಿರುವ ಹಾಡುಗಳು ಹಾಗೂ ಸಂಗೀತವಿರುತ್ತದೆ. ಅಂತಹ ಮನಮೋಹಕವಾದ ಹಾಡುಗಳನ್ನು ಮಾನವರು ಎಂದೂ ಕೇಳಿಲ್ಲ, ಮಾತ್ರವಲ್ಲ ಮನಸ್ಸಿನಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ವಿಮೋಚಿಸಲ್ಪಟ್ಟವರು ತಮ್ಮ ಅನುಭವದಿಂದ ಹಾಡುವ ಗೀತೆಯು ದೇವರ ಮಹಿಮೆಯನ್ನು ಪ್ರಚಾರ ಪಡಿಸುತ್ತದೆ. ದೇವರಾದ ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ, ಆಶ್ಚರ್ಯಕರವಾದವುಗಳೂ ಆಗಿವೆ. ಸರ್ವಜನಾಂಗಗಳ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ. ಕರ್ತನೇ, ನಿನ್ನ ನಾಮಕ್ಕೆ ಭಯಪಡದವರೂ, ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು’ (ಪ್ರಕಟನೆ 15:3, 4) (ಎಜುಕೇಷನ್ 307-309). ಕೊಕಾಘ 176.1

ಪರಲೋಕದ ಗಾಯನವೃಂದದ ನಾಯಕನಾಗಿ ಯಾವಾಗಲೂ ಒಬ್ಬ ದೇವದೂತನಿದ್ದಾನೆ. ಅವನು ಮೊದಲು ಬಂಗಾರದ ಸ್ವರಮಂಡಲ ಕಿನ್ನರಿಯನ್ನು ಬಾರಿಸುವನು. ಅನಂತರ ರಕ್ಷಿಸಲ್ಪಟ್ಟವರೆಲ್ಲರೂ ಪರಲೋಕದ ಆ ಮಧುರವಾದ ಸಂಗೀತದಲ್ಲಿ ಪಾಲ್ಗೊಳ್ಳುವರು (ಟೆಸ್ಟಿಮೊನೀಸ್‌ ಸಂಪುಟ 1, ಪುಟ 146). ಕೊಕಾಘ 176.2

ಕ್ರಿಸ್ತನು ಮೂರನೇ ಸಾರಿ ಬರುವಾಗ ದುಃಖಗೊಂಡಿರುವನಂತೆ ಕಂಡುಬರುವುದಿಲ್ಲ. ಬದಲಾಗಿ ಎಣ್ಣೆಮರಗಳ ಗುಡ್ಡದಲ್ಲಿ ಜಯಶಾಲಿಯಾದ ರಾಜನಾಗಿ ವೈಭವದಿಂದ ನಿಂತಿರುವನು, ವಿಮೋಚಿಸಲ್ಪಟ್ಟವರೆಲ್ಲರೂ ಹಲ್ಲೆಲೂಯಾ ಹೊಸನ್ನ ಎಂದು ಅಸಂಖ್ಯಾತ ಸ್ವರಗಳು ಒಟ್ಟಾಗಿ ಸಮಸ್ತವಿಶ್ವದ ಕರ್ತನಿಗೆ ಕಿರೀಟಧಾರಣೆ ಮಾಡಿರಿ ಎಂದು ಹರ್ಷದ್ವನಿ ಗೈಯುತ್ತವೆ (ದಿ ಡಿಸೈರ್‌ ಆಫ್ ಏಜಸ್, 830), ಕೊಕಾಘ 176.3