Go to full page →

ಸತ್ಯವೇದದ ಸಿದ್ದಾಂತಗಳು ಅವರ ಎದ್ದು ಕಾಣುವ ಗುರುತುಗಳಾಗಿವೆ ಕೊಕಾಘ 26

1844 ರ ಕಾಲವು ಮಹಾಘಟನೆಗಳು ನಡೆದ ಸಮಯವಾಗಿದ್ದು, ಪರಲೋಕದಲ್ಲಿ ನಡೆಯುತ್ತಿರುವ ದೇವದರ್ಶನದ ಗುಡಾರದ ಶುದ್ಧೀಕರಣವನ್ನು ದಿಗ್ಭ್ರಾಂತರಾದ ಅಡ್ವೆಂಟಿಸ್ಸರಿಗೆ ತಿಳಿಸಿಕೊಟ್ಟಿತು. ಅಲ್ಲದೆ ಲೋಕದಲ್ಲಿ ದೇವಜನರ ಸಂಬಂಧವನ್ನು ನಿರ್ಧರಿಸಿದ್ದಲ್ಲದೆ, ದೇವರಾಜ್ಜೆಗಳು ಮತ್ತು ಯೇಸುವಿನ ಮೇಲಣ ನಂಬಿಕೆಯನ್ನು ಒಳಗೊಂಡಿರುವ ಮೊದಲನೆ ಎರಡನೆ ಹಾಗೂ ಮೂರನೇ ದೂತರ ವರ್ತಮಾನಗಳನ್ನೂ ಸಹ ತಿಳಿಯಪಡಿಸಿತು. ದೇವರ ಸತ್ಯವನ್ನು ಪ್ರೀತಿಸುವ ಜನರು ಪರಲೋಕದಲ್ಲಿ ನೋಡಿದ ದೇವರ ಆಲಯ ಹಾಗೂ ದೇವರಾಜ್ಞೆಗಳನ್ನು ಇಟ್ಟಿದ್ದ ಮಂಜೂಷವು ಮೂರುದೂತರ ವರ್ತಮಾನಗಳಲ್ಲಿ ಕಂಡುಬರುವ ಎದ್ದುಕಾಣುವ ಗುರುತುಗಳಲ್ಲಿ ಒಂದಾಗಿದೆ. ನಾಲ್ಕನೇ ಆಜ್ಞೆಯಾದ ಸಬ್ಬತ್ತಿನ ಬೆಳಕು, ದೇವರಾಜೆಗಳನ್ನು ಮೀರಿ ನಡೆಯುವವರ ದಾರಿಯಲ್ಲಿ ಪ್ರಕಾಶಿಸಿತು. ದುಷ್ಟರು ಸಾಯುವುದು ಒಂದು ಹಳೆಯ ಗುರುತು (ಕೌನ್ಸೆಲ್ ಟು .... ಎಡಿಟರ್ಸ್, ಪುಟಗಳು 30, 31 (1899)). ಕೊಕಾಘ 26.1