Go to full page →

ಇಸ್ರಾಯೇಲಿನ ಚರಿತ್ರೆಯು ನಮಗೆ ಎಚ್ಚರಿಕೆಯಾಗಿದೆ ಕೊಕಾಘ 35

ಕೊನೆಯ ದಿನಗಳಲ್ಲಿ ದೇವರ ಮಕ್ಕಳು ಹಳೇ ಒಡಂಬಡಿಕೆ ಕಾಲದ ಇಸ್ರಾಯೇಲ್ಯರಂತೆಯೇ, ಅದೇ ಆಪಾಯಗಳಿಗೆ ಗುರಿಯಾಗುವರು, ದೇವರ ಎಚ್ಚರಿಕೆಯನ್ನು ಗಮನಿಸದವರು ಅವರಂತೆಯೇ ಎಲ್ಲಾ ಕಷ್ಟಸಂಕಟಗಳಿಗೆ ಗುರಿಯಾಗಿ, ತಮ್ಮ ಅಪನಂಬಿಕೆಯಿಂದ ವಾಗ್ದಾನ ಮಾಡಲಟ್ಟ ದೇಶಕ್ಕೆ ಸೇರುವುದಿಲ್ಲ. ಪುರಾತನ ಇಸ್ರಾಯೇಲ್ಯರು ತಮ್ಮ ಮೊಂಡಾದ ಹೃದಯ ಹಾಗೂ ಹಠಮಾರಿತನದಿಂದ ಕಷ್ಟಸಂಕಟ, ವಿಪತ್ತುಗಳನ್ನು ಅನುಭವಿಸಬೇಕಾಯಿತು. ಅವರ ಅಪನಂಬಿಕೆ, ಅತಿಯಾದ ಆತ್ಮವಿಶ್ವಾಸ, ಪಶ್ಚಾತ್ತಾಪ ಪಡದ ಮೊಂಡುತನ, ಕಠಿಣ ಹೃದಯ, ಇವೆಲ್ಲವೂ ಇಸ್ರಾಯೇಲ್ಯರು ಒಂದು ಜನಾಂಗವಾಗಿ ದೇವರಿಂದ ತಿರಸ್ಕರಿಸಲ್ಪಡಲು ಕಾರಣವಾಯಿತು. ಅವರ ಚರಿತ್ರೆಯು ನಮಗೆ ಅಪಾಯದ ಮುನ್ಸೂಚನೆಯಾಗಿದೆ. ಕೊಕಾಘ 35.4

ಈ ಕಾರಣದಿಂದ ಪೌಲನು ‘ಸಹೋದರರೇ, ನೋಡಿಕೊಳ್ಳಿರಿ, ಜೀವಸ್ವರೂಪನಾದ ದೇವರನ್ನು ಬಿಟ್ಟು ಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು. ಮೊದಲಿಂದಿರುವ ಭರವಸೆಯನ್ನು ಅಂತ್ಯದವರೆಗೂ ದೃಢವಾಗಿ ಹಿಡಿದುಕೊಳ್ಳುವ ಪಕ್ಷದಲ್ಲಿ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವಲ್ಲಾ ಎಂಬ ಎಚ್ಚರಿಕೆ ನೀಡುತ್ತಾನೆ (ಇಬ್ರಿಯ 3:12, 14) ಕೊಕಾಘ 35.5