Go to full page →

ದೇವರ ವಾಕ್ಯವನ್ನು ನಂಬುವಂತೆ ಜನರಿಗೆ ತಿಳುವಳಿಕೆ ಕೊಡಬೇಕು ಕೊಕಾಘ 40

ದೇವರ ವಾಕ್ಯವಾದ ಸತ್ಯವೇದದಲ್ಲಿ ಅಪನಂಬಿಕೆ ಹೊಂದಿ ಸಂದೇಹ ವ್ಯಕ್ತಪಡಿಸುವವರು, ಕಷ್ಟಸಂಕಟಗಳು. ಬಂದಾಗ ಅದರಲ್ಲಿ ನಂಬಿಕೆ ಹೊಂದಲು ಬಹಳ ಹೆಣಗಾಡುತ್ತಾರೆ, ಅಪನಂಬಿಕೆಯಲ್ಲಿ ಮುಳುಗಿಹೋಗಿರುವ ಅವರ ಮನಸ್ಸಿನಿಂದ ಅದರ ಪ್ರಭಾವವನ್ನು ತೆಗೆದುಹಾಕುವುದು ಹೆಚ್ಚುಕಡಿಮೆ ಅಸಾಧ್ಯವಾಗಿರುತ್ತದೆ. ಅಂತವರು ಸೈತಾನನ ಬಲೆಯೆಂಬ ಭಯಾನಕವಾದ ಉರುಲಿನಲ್ಲಿ ಬಂಧಿಸಲ್ಪಟ್ಟು ಅದರಿಂದ ಬಿಡಿಸಿಕೊಳ್ಳಲು ಅಸಮರ್ಥರಾಗಿರುತ್ತಾರೆ. ಕೊಕಾಘ 40.3

ದೇವರ ವಾಕ್ಯದಲ್ಲಿ ಅಪನಂಬಿಕೆ ಹೊಂದಿ ಸಂದೇಹಪಡುವವರು, ಸಹಜವಾಗಿಯೇ ತಮ್ಮ ಸಹಾಯಕ್ಕೆ ಸೈತಾನನ ಮೇಲೆ ಆತುಕೊಂಡಿರುತ್ತಾರೆ. ಇವರಿಗಿರುವ ಏಕೈಕ ನಿರೀಕ್ಷೆ ಎಂದರೆ, ತಾವು ಅಸಹಾಯಕರೆಂದು ತಮ್ಮನ್ನು ಮಕ್ಕಳಂತೆ ರಕ್ಷಕನಿಗೆ ಒಪ್ಪಿಸಿಕೊಡುವುದೇ ಆಗಿದೆ. ಆಗ ಕ್ರಿಸ್ತನು ಅವರನ್ನು ಸೈತಾನನ ಬಂಧನದ ಕತ್ತಲೆಯಿಂದ ಬಿಡಿಸಿ, ತನ್ನ ಆಶ್ಚರ್ಯಕರವಾದ ಬೆಳಕಿಗೆ ತರುವನು. ಸೈತಾನನ ಉರುಲಿನ ಬಲೆಯಿಂದ ಬಿಡಿಸಿಕೊಳ್ಳಲು ಮನುಷ್ಯನಿಗೆ ಸ್ವತಃ ಯಾವುದೇ ಬಲವಿಲ್ಲ. ಯಾರು ದೇವರ ವಾಕ್ಯವಾದ ಸತ್ಯವೇದದಲ್ಲಿ ಸಂದೇಹ, ಅಪನಂಬಿಕೆ ವ್ಯಕ್ತಪಡಿಸಿ ಅದನ್ನು ಪ್ರಶ್ನಿಸಿ ಟೀಕಿಸುತ್ತಾರೋ, ಅವರು ದೇವರಲ್ಲಿ ನಂಬಿಕೆಯಿಲ್ಲದ ನಾಸ್ತಿಕರಾಗುತ್ತಾರೆ. ಕೊಕಾಘ 40.4