Go to full page →

ದೇವಜನರು ಆರೋಗ್ಯದ ಮಹತ್ವ ತಿಳಿದಿದ್ದಾರೆ ಕೊಕಾಘ 47

ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ದೇವರು ತೋರಿಸಿದ ಆರೋಗ್ಯ ಸುಧಾರಣಾ ಸಂದೇಶವು ಮೂರನೇ ದೂತನ ಸಂದೇಶದ ಒಂದು ಭಾಗವಾಗಿದೆ. ಮಾನವ ಶರೀರಕ್ಕೆ ತೋಳು ಹಾಗೂ ಕೈ ಹೇಗೆ ಪರಸ್ಪರ ನಿಕಟ ಸಂಬಂಧ ಹೊಂದಿದೆಯೋ, ಅದೇ ರೀತಿ ಆರೋಗ್ಯ ಸುಧಾರಣೆ ಹಾಗೂ ಮೂರನೇ ದೂತನ ವರ್ತಮಾನವು ನಿಕಟ ಸಂಬಂಧ ಹೊಂದಿದೆ (ಟೆಸ್ಟಿಮೊನೀಸ್, ಸಂಪುಟ 1, ಪುಟ 486, 1867), ಕಾಫಿ, ಚಹಾ, ಹೊಗೆ ಸೊಪ್ಪು ಹಾಗೂ ಮದ್ಯಪಾನ ಸೇವನೆಯು ಪಾಪಕೃತ್ಯಗಳನ್ನು ತೃಪ್ತಿಪಡಿಸುವಂತದ್ದಾಗಿದೆ. ಮಾಂಸ, ಮೊಟ್ಟೆ, ಬೆಣ್ಣೆ, ಗಿಣ್ಣು ಮುಂತಾದವುಗಳನ್ನು ಉಪಯೋಗಿಸುವಂತೆ ಕಾಫಿ, ಚಹಾ, ಹೊಗೆಸೊಪ್ಪು, ಮದ್ಯಪಾನಗಳನ್ನು ಉಪಯೋಗಿಸಬಾರದು. ಇವುಗಳು ಹಾನಿಕರವಾಗಿರುವುದರಿಂದ ಸಂಪೂರ್ಣವಾಗಿ ತ್ಯಜಿಸಬೇಕು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 287, 1881). ಕೊಕಾಘ 47.4

ಶರೀರಕ್ಕೆ ಹಾನಿಕರವಾಗಿರುವುದನ್ನು ಸಂಪೂರ್ಣವಾಗಿ ತ್ಯಜಿಸುವುದು ಮತ್ತು ಆರೋಗ್ಯಕರವಾದವುಗಳನ್ನು ಹಿತಮಿತವಾಗಿ ಉಪಯೋಗಿಸುವುದೇ ಮಿತ ಸಂಯಮ ಆಗಿದೆ. ನಿರ್ಮಲವಾದ ಗಾಳಿ, ಸೂರ್ಯನ ಬೆಳಕು, ಸಂಯಮ, ಸಾಕಷ್ಟು ವಿಶ್ರಾಂತಿ ಸರಿಯಾದ ಆಹಾರಕ್ರಮ, ಸಾಕಷ್ಟು ನೀರು ಕುಡಿಯುವುದು ಹಾಗೂ ದೇವರಲ್ಲಿ ಭರವಸೆಯಿಡುವುದು — ಇವು ರೋಗರುಜಿನಗಳಿಗೆ ನಿಜವಾದ ಪರಿಹಾರವಾಗಿವೆ (ದಿ ಮಿನಿಸ್ಟ್ರಿ ಆಫ್ ಹೀಲಿಂಗ್, 127, 1905). ಆರೋಗ್ಯಕ್ಕೆ ಹಾನಿಯುಂಟು ಮಾಡುವಂತದ್ದು ಶಾರೀರಿಕ ಶಕ್ತಿಯನ್ನು ಕುಂದಿಸುವುದಲ್ಲದೆ, ಮಾನಸಿಕ ಹಾಗೂ ನೈತಿಕ ಶಕ್ತಿಗಳನ್ನು ದುರ್ಬಲಗೊಳಿಸುತ್ತದೆ. ಅನಾರೋಗ್ಯಕರ ಚಟ ಹೊಂದಿರುವವರು ಸರಿ ಅಥವಾ ತಪ್ಪು ಯಾವುದೆಂಬ ವ್ಯತ್ಯಾಸ ತಿಳಿಯುವುದು ಕಷ್ಟವಾಗುವುದರಿಂದ ಪಾಪವನ್ನು ಎದುರಿಸಲು ಅವರಿಗೆ ಕಷ್ಟ ಸಾಧ್ಯವಾಗಿದೆ (ದಿ ಮಿನಿಸ್ಟ್ರಿ ಆಫ್ ಹೀಲಿಂಗ್, ಪುಟ 128, 1905). ಕೊಕಾಘ 47.5