Go to full page →

ದೇವರಲ್ಲಿ ಸಂಪೂರ್ಣ ಭರವಸೆ ಕೊಕಾಘ 48

ದೇವರ ಸೇವೆಯಲ್ಲಿ ಸಂಪೂರ್ಣವಾಗಿ ನಿಷ್ಠರಾಗಿಲ್ಲದ ಕೆಲಸಗಾರರಿಂದ ಕೆಲವು ವೇಳೆ ತಪ್ಪು ನಡೆಯುತ್ತದೆ. ಇತರರ ತಪ್ಪಿನಿಂದಾದ ಫಲಿತಾಂಶದ ಬಗ್ಗೆ ನಿಮಗೆ ದುಃಖವಾಗಬಹುದು, ಆದರೆ ಚಿಂತಿಸಬೇಡಿ. ನಮ್ಮ ಗುರುವಾದ ಕ್ರಿಸ್ತನು ಸುವಾರ್ತಾ ಸೇವೆಯ ಮೇಲ್ವಿಚಾರಕನಾಗಿದ್ದಾನೆ. ಎಲ್ಲಾ ಸೇವಕರು ತನ್ನ ಬಳಿಗೆ ಬಂದು, ತನ್ನಿಂದ ಅಪ್ಪಣೆ ಹೊಂದಿ, ತನ್ನ ಮಾರ್ಗದರ್ಶನಕ್ಕೆ ವಿಧೇಯರಾಗಬೇಕೆಂದು ಆತನು ಕೆಲಸಗಾರರಿಗೆ ತಿಳಿಸುತ್ತಾನೆ. ನಮ್ಮ ಸಭೆಗಳು, ಶಾಲಾ ಕಾಲೇಜು, ಸಂಸ್ಥೆಗಳು ಹಾಗೂ ಸಬ್ಬತ್ತು ಶಾಲೆ — ಇವೆಲ್ಲವೂ ಆತನ ಹೃದಯದಲ್ಲಿವೆ. ಆದುದರಿಂದ ಚಿಂತೆ ಯಾಕೆ? ಸಭೆಯಲ್ಲಿ ಉತ್ಸಾಹ ತುಂಬಿರಬೇಕೆಂಬ ನಮ್ಮ ಬಯಕೆಯು ಈಡೇರಬೇಕಾದಲ್ಲಿ ದೇವರಲ್ಲಿ ಸಂಪೂರ್ಣ ಭರವಸೆ ಹೊಂದಿರಬೇಕು. ಕೊಕಾಘ 48.6

ದೇವರ ಸೇವೆಯನ್ನು ಅತಿವೇಗವಾಗಿ ಮುಂದುವರಿಸಬೇಕೆಂಬ ಅತಿಯಾದ ಉತ್ಸಾಹದಲ್ಲಿ ಯಾರೂ ಸಹ ದೇವರುಕೊಟ್ಟ ಶಕ್ತಿ ಪ್ರತಿಭೆ ತಲಾಂತನ್ನು ಮಿತಿಮೀರಿ ಉಪಯೋಗಿಸಬಾರದು. ಮಾನವನ ಬಲವು ಎಂದೂ ಸಹ ದೇವರ ಸೇವೆಯನ್ನು ತ್ವೆರೆಗೊಳಿಸುವುದಿಲ್ಲ. ಇದರೊಂದಿಗೆ ಪರಲೋಕದ ದೇವದೂತರ ಬಲವೂ ಒಂದಾಗಬೇಕು. ದೇವರ ಸೇವೆಯು ಮುಂದುವರಿಯಬೇಕು. ಕೊಕಾಘ 49.1