Go to full page →

ವಿಷಯಾಂತರಗಳ ಬಗ್ಗೆ ಎಚ್ಚರವಿರಲಿ ಕೊಕಾಘ 53

ವಿಷಯಾಂತರ (Side issues) ಅಂದರೆ ಮುಖ್ಯವಾದ ವಿಷಯದಿಂದ ಗಮನವನ್ನು ಬೇರೆ ದಿಕ್ಕಿಗೆ ಸೆಳೆಯುವ ವಿಷಯದ ಬಗ್ಗೆ ಎಚ್ಚರವಿರಲಿ. ದೇವರು ತನ್ನ ಜನರನ್ನು ಅಲಕ್ಷಿಸಿ, ತನ್ನ ಸತ್ಯವನ್ನು ಸಾರಲು ಅಲ್ಲೊಬ್ಬರು ಅಥವಾ ಇಲ್ಲೊಬ್ಬರನ್ನು ಆರಿಸಿಕೊಂಡು ಅವರಿಗೆ ಈ ಜವಾಬ್ದಾರಿಯನ್ನು ವಹಿಸಿಕೊಟ್ಟಿಲ್ಲ. ಸತ್ಯದ ಆಧಾರದಲ್ಲಿ ಬೇರೂರಿರುವ ನಂಬಿಕೆಗೆ ವಿರುದ್ಧವಾಗಿ ಹೊಸದಾದ ಸತ್ಯವನ್ನು ದೇವರು ಒಬ್ಬನಿಗೆ ಕೊಡುವುದಿಲ್ಲ. ಪ್ರತಿಯೊಂದು ಧಾರ್ಮಿಕ ಸುಧಾರಣೆಯಲ್ಲಿಯೂ ತಮಗೆ ಇಂತಹ ಹೊಸ ಸತ್ಯಕೊಡಲ್ಪಟ್ಟಿದೆ ಎಂದು ಅನೇಕರು ಹೇಳಿಕೊಂಡಿದ್ದರು. ಇತರ ಸಹೋದರರಿಗಿಂತ ತಮಗೆ ವಿಶೇಷ ಬೆಳಕು ಕೊಡಲ್ಪಟ್ಟಿದೆಯೋ ಎಂಬಂತೆ, ಯಾರೂ ಸಹ ಅತಿಯಾದ ಆತ್ಮವಿಶ್ವಾಸ ಹೊಂದಿರಬಾರದು. ಕೊಕಾಘ 53.2

ಒಬ್ಬನು ಸತ್ಯಕ್ಕೆ ವಿರುದ್ಧವೆಂದು ಕಂಡುಬರದಂತೆ ಕೆಲವು ಹೊಸದಾದ ವಿಷಯಗಳನ್ನು ಅಂಗೀಕರಿಸಬಹುದು. ಅದು ಬಹಳ ಪ್ರಾಮುಖ್ಯವಾಗಿಯೂ, ಅತ್ಯುತ್ತಮ ಮಾದರಿಯಾಗಿಯೂ ಇದೆಯೆಂದು ಕಂಡುಬರುವವರೆಗೆ ಅವನು ಅದನ್ನು ಧ್ಯಾನ ಮಾಡಬಹುದು. ಆ ರೀತಿಯಲ್ಲಿ ಕಂಡುಬರುವಂತೆ ಮಾಡುವ ಶಕ್ತಿ ಸೈತಾನನಿಗಿದೆ. ಕೊನೆಯಲ್ಲಿ ಇದು ಅವನಿಗೆ ಎಲ್ಲಕ್ಕಿಂತಲೂ ಪ್ರಾಮುಖ್ಯವೆಂಬುದಾಗಿ ತೋರಿಬಂದು, ಯಥಾರ್ಥವಾದ ಸತ್ವವು ಅವನ ಹೃದಯದಿಂದ ತೆಗೆದುಹಾಕಲ್ಪಡುತ್ತದೆ. ಕೊಕಾಘ 53.3

“ಇಂತಹ ವಿಷಯಾಂತರಗಳ ಬಗ್ಗೆ ನಾವು ಎಚ್ಚರಿಕೆಯಾಗಿರಬೇಕು. ಇವು ನಮ್ಮ ಮನಸ್ಸಿನಿಂದ ಸತ್ಯವನ್ನು ದೂರ ಮಾಡಿ ಇತರ ವಿಷಯಗಳ ಕಡೆಗೆ ಗಮನ ಸೆಳೆಯುವಂತೆ ಮಾಡುತ್ತದೆ. ತಪ್ಪುಗಳು, ತಪ್ಪು ಅಭಿಪ್ರಾಯಗಳು ಯಾವಾಗಲೂ ಅಪಾಯಕಾರಿ, ಅದು ಎಂದಿಗೂ ನಮ್ಮನ್ನು ಪವಿತ್ರಗೊಳಿಸುವುದಿಲ್ಲ, ಬದಲಾಗಿ ಗಲಿಬಿಲಿ ಹಾಗೂ ಭಿನ್ನಾಭಿಪ್ರಾಯ ಉಂಟುಮಾಡುತ್ತದೆ’ (ಟೆಸ್ಟಿಮೊನೀಸ್, ಸಂಪುಟ 5, ಪುಟಗಳು 291, 292, 1885). ಕೊಕಾಘ 53.4