Go to full page →

ಬೆರಿಯನ್ ಸ್ಪ್ರಿಂಗ್ಸ್, ಮಿಷಿಗನ್, ಅಮೇರಿಕಾ ಕೊಕಾಘ 60

ಮಿಷಿಗನ್ ನಗರದ ನೈಋತ್ಯ ಭಾಗದಲ್ಲಿರುವ ಬೆರಿಯನ್ ಸ್ಪ್ರಿಂಗ್‌ನಲ್ಲಿ ಶಾಲೆ ಆರಂಭಿಸುವ ಯೋಜನೆಯು ಒಳ್ಳೆಯದು. ಅದು ಒಂದು ಮಾದರಿ ಶಾಲೆಯಾಗಿದ್ದು, ಅಲ್ಲಿ ಸುವಾರ್ತಾ ಸೇವೆಯ ಮುಂದುವರಿಕೆಗೆ ಯಾರೂ ಅಡ್ಡಿ ಮಾಡುವುದಿಲ್ಲವೆಂದು ಹಾರೈಸುತ್ತೇನೆ (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 4, ಪುಟ 407, 1901, ಜುಲೈ 12). ಕೊಕಾಘ 60.2

ನಮ್ಮ ಅಧಿಕಾರಿಗಳು ಶಾಲೆಗಾಗಿ ಬೆರಿಯನ್‌ ಸ್ಪ್ರಿಂಗ್ಸ್ನಲ್ಲಿ ಸ್ಥಳವನ್ನು ಖರೀದಿಸಲು ದೇವರು ಸಹಾಯ ಮಾಡಿದ್ದಾನೆ. ಇದು ನನಗೆ ದೇವರು ತೋರಿಸಿದ ಸ್ಥಳಕ್ಕೆ ಅನುಗುಣವಾಗಿಯೇ ಇದೆ. ಇದು ನಗರಗಳಿಂದ ದೂರವಿದೆ. ವ್ಯವಸಾಯ ಮಾಡಲು ಸಾಕಷ್ಟು ಭೂಮಿಯಿದೆ. ಅಲ್ಲದೆ ಮನೆಗಳನ್ನು ಸಾಕಷ್ಟು ದೂರದಲ್ಲಿ ಸ್ಥಳಬಿಟ್ಟು ಕಟ್ಟಲು ಅಗತ್ಯವಾದ ಭೂಮಿಯಿದೆ. ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಸ್ಥಳವಿದೆ ಎಂದು ಶ್ರೀಮತಿ ವೈಟಮ್ಮನವರು ರಿವ್ಯೂ ಅಂಡ್ ಹೆರಾಲ್ಡ್ ಪತ್ರಿಕೆಯಲ್ಲಿ ತಿಳಿಸಿದ್ದಾರೆ (ಜನವರಿ 28, 1902) ಕೊಕಾಘ 60.3

ಬ್ಯಾಟಲ್ ಕ್ರೀಕ್‌ನಿಂದ ಕಾಲೇಜನ್ನು ಬೆರಿಯನ್‌ ಸ್ಪ್ರಿಂಗ್ಸ್ಗೆ ವರ್ಗಾಯಿಸಬೇಕೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತಿಳಿಸಿದನು. ಅದರಂತೆಯೇ ಸಭೆಯ ಅಧಿಕಾರಿಗಳಾದ ಮ್ಯಾಗನ್ ಹಾಗೂ ಸುದರ್‌ಲ್ಯಾಂಡ್‌ರವರು ಶ್ರೀಮತಿ ವೈಟಮ್ಮನವರ ಮಾತಿಗೆ ವಿಧೇಯರಾಗಿ ಬೆರಿಯನ್‌ ಸ್ಪ್ರಿಂಗ್ಸ್ಗೆ ಕಾಲೇಜು ವರ್ಗಾಯಿಸಲು ಪ್ರಮುಖ ಪಾತ್ರ ವಹಿಸಿದ್ದರು. ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಆದರೆ ದೇವರು ಅವರೊಂದಿಗಿದ್ದು, ಅವರ ಪ್ರಯತ್ನಗಳಿಗೆ ಸಮ್ಮತಿಸಿದನು (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 4, ಪುಟಗಳು 260, 261, 1904). ಕೊಕಾಘ 60.4