Go to full page →

ಮ್ಯಾಡಿಸನ್, ಟೆನೆಸ್ಸಿ (ಅಮೇರಿಕಾ) ಕೊಕಾಘ 61

ಅಮೇರಿಕಾ ದೇಶದ ದಕ್ಷಿಣ ಭಾಗದಲ್ಲಿ ಸೇವೆ ಮಾಡಬೇಕೆಂದು ಜನರಲ್ ಕಾನ್ಫರೆನ್ಸ್ ಅಧಿಕಾರಿಗಳಾದ ಇ.ಎ. ಸುದರ್‌ಲ್ಯಾಂಡ್ ಹಾಗೂ ಪಿ.ಟಿ, ಮ್ಯಾಗನ್ ನವರು ನಿರ್ಧರಿಸಿದರು. ಅದಕ್ಕನುಸಾರವಾಗಿ ಅವರು ನ್ಯಾಶ್‌ವಿಲ್ಲೆ ಎಂಬ ನಗರದಿಂದ ಬಹಳ ದೂರದಲ್ಲಿ ಶಾಲೆ ಆರಂಭಿಸಲು ಪ್ರಯತ್ನಿಸಿದರು. ಇದು ಶ್ರೀಮತಿ ವೈಟಮ್ಮನರಿಗೆ ಆಶ್ಚರ್ಯ ತಂದಿತು. ಅವರಿಗೆ ಕೊಟ್ಟ ದರ್ಶನದ ಪ್ರಕಾರ ಅದು ಶಾಲೆ ಆರಂಭಿಸಲು ಸರಿಯಾದ ಸ್ಥಳವಲ್ಲವೆಂದು ಅಧಿಕಾರಿಗಳಿಗೆ ತಿಳಿಸಿದರು. ಅದಕ್ಕೆ ಅಧಿಕಾರಿಗಳು ಸಮ್ಮತಿಸಿದರು. ಕೊಕಾಘ 61.6

ಶಾಲೆಗೆ ಸ್ಥಳ ಹುಡುಕುವಾಗ ಹಿರಿಯರಾದ ಸುದರ್‌ಲ್ಯಾಂಡ್ ಹಾಗೂ ಮ್ಯಾಗನ್‌ರವರು ನ್ಯಾಶ್‌ವಿಲ್ಲೆ ನಗರದಿಂದ 158 ಮೀ. ದೂರದಲ್ಲಿ 400 ಎಕರೆ ಮಾರಾಟಕ್ಕಿರುವ ಸಂಗತಿ ತಿಳಿದುಬಂತು. ಬೆಲೆಯೂ ಸಹ ಕೈಗೆಟುಕುವಂತಿತ್ತು. ಅದನ್ನು ಕೊಂಡುಕೊಳ್ಳಬೇಕೆಂದು ಶ್ರೀಮತಿ ವೈಟಮ್ಮನವರು ತಿಳಿಸಿದರು. ಅದರಂತೆಯೇ ನ್ಯಾಶ್‌ವಿಲ್ಲೆ ಸಮೀಪದಲ್ಲಿ 400 ಎಕರೆ ಸ್ಥಳವನ್ನು ಖರೀದಿಸಲಾಯಿತು (ರಿವ್ಯೂ ಅಂಡ್ ಹೆರಾಲ್ಡ್, ಆಗಸ್ಟ್ 18, 1904). ಕೊಕಾಘ 62.1