Go to full page →

ನಗರಗಳಿಗೆ ನ್ಯಾಯತೀರ್ಪು ಬರುವುದು ಕೊಕಾಘ 64

ಲೋಕಕ್ಕೆ ಭಯಂಕರವಾದ ಆಘಾತ ಬರುವುದು, ನಗರಗಳಲ್ಲಿರುವ ಬಹಳಷ್ಟು ಹಣ ಖರ್ಚು ಮಾಡಿ ಕಟ್ಟಿರುವ ವೈಭವದ ಸೊಗಸಾದ ಭವನಗಳು, ಅರಮನೆಗಳು ಖಂಡಿತವಾಗಿಯೂ ನಾಶವಾಗಿ ಮಣ್ಣಿನ ರಾಶಿಯಾಗುವವು (ಮ್ಯಾನುಸ್ಕ್ರಿಪ್ಟ್ ರಿಲೀಸ್ 3, ಪುಟ 312, 1891). ದೇವರು ಲೋಕದ ಮೇಲಿನ ತನ್ನ ನಿಯಂತ್ರಣವನ್ನು ಹಿಂತೆಗೆದುಕೊಂಡಾಗ ವಿನಾಶಕನಾದ ಸೈತಾನನು ತನ್ನ ಕಾರ್ಯ ಆರಂಭಿಸುವನು. ಆಗ ನಮ್ಮ ನಗರಗಳಲ್ಲಿ ಮಹಾವಿಪತ್ತುಗಳು ಸಂಭವಿಸುವವು (ಪುಟ 314). ಚಿಕಾಗೋ, ಲಂಡನ್, ಆಸ್ಟ್ರೇಲಿಯಾ ದೇಶದ ಮೆಲ್ಬೋರ್ನ್ ಹಾಗೂ ನ್ಯೂಯಾರ್ಕ್ ನಗರಗಳಲ್ಲಿ ಬೆಂಕಿಯ ಅನಾಹುತವಾದಂತೆ, ದೇವರು ಲೋಕದ ಜನರಿಗೆ ಎಚ್ಚರಿಕೆ ಕೊಡುತ್ತಾನೆ. ಕೊಕಾಘ 64.1

ಲೋಕದ ಅಂತ್ಯವು ಸಮೀಪವಾಗಿದೆ, ಪ್ರತಿಯೊಂದು ನಗರದಲ್ಲಿ ಎಲ್ಲಾ ರೀತಿಯಲ್ಲಿಯೂ ಅವ್ಯವಸ್ಥೆ ಉಂಟಾಗುತ್ತದೆ. ಅವುಗಳಲ್ಲಿ ಗಲಿಬಿಲಿ, ಗೊಂದಲವಿರುತ್ತದೆ. ಮುಂದೇನಾಗುತ್ತದೋ, ನಮಗೆ ಗೊತ್ತಿಲ್ಲ. ನ್ಯಾಯತೀರ್ಪು ಜನರ ದುಷ್ಟತನ ಮತ್ತು ಅವರಿಗೆ ದೊರಕಿದ ಸುವಾರ್ತೆಯ ಬೆಳಕಿನ ಪ್ರಮಾಣಕ್ಕೆ ತಕ್ಕಂತೆ ಉಂಟಾಗುತ್ತದೆ (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 1, ಪುಟ 248 (1902). ಕೊಕಾಘ 64.2

ಹೆಚ್ಚು ಕಡಿಮೆ ಸಂಪೂರ್ಣವಾಗಿ ವಿಗ್ರಾಹಾರಾಧನೆಗೆ ಒಳಪಟ್ಟಿರುವ ಸಾವಿರಾರು ನಗರಗಳಿಗೆ ಶೀಘ್ರದಲ್ಲಿಯೇ ಬರಲಿರುವ ನಾಶದ ಬಗ್ಗೆ ದೇವರ ಜನರಿಗೆ ಅರಿವಿರಬೇಕು (ಎವಾಂಜಲಿಸಮ್, 29, 1903) ದೊಡ್ಡ ನಗರಗಳು ಕೊಚ್ಚಿಕೊಂಡು ಹೋಗುವಂತ ಕಾಲ ಸಮೀಪವಾಗಿದೆ ಹಾಗೂ ಬರಲಿರುವ ಈ ನ್ಯಾಯತೀರ್ಪಿನ ಬಗ್ಗೆ ಎಲ್ಲರಿಗೂ ಎಚ್ಚರಿಕೆ ನೀಡಬೇಕು (ಎವಾಂಜಲಿಸಮ್, ಪುಟ 29, 1910). ಕೊಕಾಘ 64.3