Go to full page →

ನಗರಗಳಲ್ಲಿರುವ ಅನೇಕರು ಸತ್ಯಕ್ಕಾಗಿಯೂ,ಬೆಳಕಿಗಾಗಿಯೂ ಹಾತೊರೆಯುತ್ತಾರೆ ಕೊಕಾಘ 67

ದೇಶ ವಿದೇಶಗಳಲ್ಲಿರುವ ದೊಡ್ಡ ನಗರಗಳಿಗೆ ಕಠಿಣವಾದ ಶಿಕ್ಷೆ ಬರಲಿದೆ. ಆದರೂ ದೇವರ ಉಗ್ರಕೋಪವು ಇನ್ನೂ ಸಹ ಅಲ್ಲಿ ತೋರಿಬಂದಿಲ್ಲ. ಯಾಕೆಂದರೆ ನಗರಗಳಲ್ಲಿಯೂ ಅನೇಕರು ಸೈತಾನನ ಭ್ರಮೆಯೆಂಬ ಬಲೆಯಿಂದ ಬಿಡಿಸಿಕೊಂಡು ಪಶ್ಚಾತ್ತಾಪಪಟ್ಟು ದೇವರನ್ನು ಅಂಗೀಕರಿಸಿಕೊಳ್ಳುತ್ತಾರೆ. (ಎವಾಂಜಲಿಸಮ್, ಪುಟ 27, 1906). ಜನಸಂಖ್ಯೆ ಅಧಿಕವಾಗಿರುವ ಸ್ಥಳಗಳಲ್ಲಿ ಜಗತ್ತನ್ನು ಆವರಿಸಿಕೊಂಡಿರುವ ಆತ್ಮೀಕ ಅಧಿಕಾರವು ಹೆಚ್ಚಾಗಿ ಕಂಡುಬರುತ್ತದೆ. ಇಂತಹ ನಗರಗಳಲ್ಲಿ ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಡದಿರುವವರು ಹೆಚ್ಚಾಗಿ ಕಂಡುಬರುವುದರಿಂದ ಸುವಾರ್ತಾ ಸೇವಕರ ಅಗತ್ಯ ಹೆಚ್ಚಾಗಿರುತ್ತದೆ. ಅಂತಹ ನಗರಗಳಲ್ಲಿ ಆತ್ಮಗಳನ್ನು ಗೆಲ್ಲುವ ಮಹಾ ಅವಕಾಶವೂ ಹೆಚ್ಚಾಗಿದೆ. ದೇವರು ಹಾಗೂ ಪರಲೋಕದ ಬಗ್ಗೆ ಯಾವುದೇ ಆಲೋಚಯಿಲ್ಲದ ಅನೇಕರು ಆತ್ಮೀಕ ಬೆಳಕಿಗಾಗಿಯೂ ಹಾಗೂ ಹೃದಯ ಪರಿಶುದ್ದತೆಗಾಗಿಯೂ ಹಾತೊರೆಯುತ್ತಾರೆ. ನಿರಾಸಕ್ತಿಯುಳ್ಳವರೂ ಮತ್ತು ತಾತ್ಸಾರ ತೋರಿಸುವವರಲ್ಲಿಯೂ ಸಹ ಅನೇಕರು ದೇವರು ಮಾನವನ ಮೇಲಿಟ್ಟಿರುವ ಪ್ರೀತಿಯನ್ನು ತಿಳಿದುಕೊಂಡಾಗ, ದೇವರ ಕಡೆಗೆ ಗಮನ ನೀಡುವ ಸಾಧ್ಯತೆಯಿದೆ (ರಿವ್ಯೂ ಅಂಡ್ ಹೆರಾಲ್ಡ್, ನವೆಂಬರ್ 17, 1910). ಕೊಕಾಘ 67.2