Go to full page →

ನಗರಗಳಲ್ಲಿ ಶಾಲಾ ಕಾಲೇಜುಗಳು ಹಾಗೂ ಸಭೆಗಳ ಅಗತ್ಯವಿದೆ ಕೊಕಾಘ 68

ಪ್ರಸ್ತುತ ನಗರಗಳನ್ನು ಬಿಟ್ಟು ಹೋಗಲಾಗದಂತ ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಆತ್ಮೀಕವಾಗಿ ರಕ್ಷಿಸಲು ಹೆಚ್ಚಾದ ಕಾರ್ಯ ಮಾಡಬಹುದಾಗಿದೆ. ಇದು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಲು ಯೋಗ್ಯವಾದ ವಿಷಯವಾಗಿದೆ. ನಗರದಲ್ಲಿರುವ ಮಕ್ಕಳಿಗಾಗಿ ಸಭೆಯು ಶಾಲೆಗಳನ್ನು ಸ್ಥಾಪಿಸಬೇಕು. ಅಲ್ಲದೆ ಉನ್ನತ ಶಿಕ್ಷಣ ನೀಡುವ ವ್ಯವಸ್ಥೆಯನ್ನೂ ಸಹ ಮಾಡಬೇಕು (ಚೈಲ್ಡ್ ಗೈಡೆನ್ಸ್ 306, 1903). ಕೊಕಾಘ 68.4

ನಾವು ಹಳ್ಳಿಗಳಲ್ಲಿದ್ದುಕೊಂಡು ನಗರಗಳಲ್ಲಿ ಸೇವೆ ಮಾಡಬೇಕೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ಅನೇಕ ಸಾರಿ ಸಲಹೆ ನೀಡಿದ್ದಾನೆ. ನಗರಗಳಲ್ಲಿ ದೇವರ ಸ್ಮಾರಕವಾಗಿ ದೇವಾರಾಧನೆಗಾಗಿ ಸಭೆಗಳನ್ನು ಸ್ಥಾಪಿಸಬೇಕು. ಆದರೆ ನಮ್ಮ ಪುಸ್ತಕ ಅಚ್ಚುಹಾಕುವ, ಪ್ರಕಟಿಸುವ ಪ್ರಕಟಣಾಲಯಗಳು, ಆಸ್ಪತ್ರೆಗಳು ಹಾಗೂ ತರಬೇತಿ ನೀಡುವ ಕಾಲೇಜುಗಳನ್ನು ನಗರದಿಂದ ಹೊರಭಾಗದಲ್ಲಿ ಸ್ಥಾಪಿಸಬೇಕು. ವಿಶೇಷವಾಗಿ ನಮ್ಮ ಯೌವನಸ್ಥರನ್ನು ನಗರ ಜೀವನದ ಆಕರ್ಷಣೆ ಹಾಗೂ ಶೋಧನೆಗಳಿಂದ ರಕ್ಷಿಸುವುದು ಮುಖ್ಯವಾಗಿದೆ (ಸೆಲೆಕ್ಟಡ್ ಮೆಸೇಜಸ್, ಸಂಪುಟ 2, ಪುಟ 358, 1907). ಕೊಕಾಘ 68.5