Go to full page →

ಆಕಾಶದಲ್ಲಿ ಸೂಚಕಕಾರ್ಯಗಳು ಕೊಕಾಘ 10

ರೋಮನ್ ಕಥೋಲಿಕ್ ಸಭೆಯ ಮಹಾಹಿಂಸೆಯು ಮುಕ್ತಾಯವಾದಾಗ, ಸೂರ್ಯನು ಕತ್ತಲಾಗುವನು, ಚಂದ್ರನು ಬೆಳಕು ಕೊಡದೆ ಇರುವನು, ಹಾಗೂ ನಕ್ಷತ್ರಗಳು ಆಕಾಶದಿಂದ ಉದುರುವವು ಎಂದು ಕ್ರಿಸ್ತನು ಹೇಳಿದ್ದಾನೆ. ಅಲ್ಲದೆ ‘ಅಂಜೂರದ ಮರದ ದೃಷ್ಟಾಂತದಿಂದ ಬುದ್ದಿ ಕಲಿಯಿರಿ, ಅದರ ಕೊಂಬೆ ಇನ್ನೂ ಎಳೆಯದಾಗಿದ್ದು, ಎಲೆ ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ, ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ, ಆ ದಿನವು ಹತ್ತಿರವಿದೆ, ಬಾಗಿಲಲ್ಲೇ ಅದೆ ಎಂದು ತಿಳುಕೊಳ್ಳಿರಿ’ ಎಂದು ಯೇಸು ಹೇಳಿದ್ದಾನೆ (ಮತ್ತಾಯ 24:29, 32, 33). ಕೊಕಾಘ 10.3

ಕ್ರಿಸ್ತನು ತನ್ನ ಬರೋಣ ಸೂಚನೆಗಳನ್ನು ಮುಂದಾಗಿ ತಿಳಿಸಿದ್ದಾನೆ. ಅದು ಯಾವಾಗ ಹತ್ತಿರದಲ್ಲಿಯೇ ಇದೆ. ಬಾಗಿಲಲ್ಲೇ ಅದೆ ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆಂದು ಆತನು ಹೇಳುತ್ತಾನೆ. ಈ ಸೂಚಕ ಕಾರ್ಯಗಳನ್ನು ನೋಡಿದವರ ವಿಷಯದಲ್ಲಿ ಕ್ರಿಸ್ತನು ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವುದೇ ಇಲ್ಲ’ ಎಂದು ಹೇಳಿದ್ದಾನೆ (ಮತ್ತಾಯ 24:34) ಈ ಸೂಚಕಕಾರ್ಯಗಳು ಕಂಡುಬಂದಿವೆ (ಗೇಟ್ ಕಾಂಟ್ರೊವರ್ಸಿ ಪುಟಗಳು 306-308, 333, 334), ಇದರಿಂದಾಗಿ ಕರ್ತನ ಬರೋಣವು ಹತ್ತಿರದಲ್ಲಿದೆ ಎಂದು ನಾವು ಖಚಿತವಾಗಿ ತಿಳಿದಿದ್ದೇವೆ (ಡಿಸೈರ್ ಆಫ್ ಏಜಸ್, ಪುಟ 632 (1898). ಕೊಕಾಘ 10.4