Go to full page →

ಸಬ್ಬತ್ತೆಂಬ ಪ್ರಮುಖ ಅಂಶವು ವಿವಾದಾಸ್ಪದವಾಯಿತು ಕೊಕಾಘ 70

ಕೊನೆಯ ಕಾಲದಲ್ಲಿ ದೇವಜನರಿಗೆ ವಿರುದ್ಧವಾದ ಹೋರಾಟದಲ್ಲಿ, ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿ ಧರ್ಮಭ್ರಷ್ಟರಾದ ಎಲ್ಲರೂ ಒಟ್ಟಾಗಿ ಸೇರಿಕೊಳ್ಳುತ್ತಾರೆ. ಈ ಹೋರಾಟದಲ್ಲಿ ನಾಲ್ಕನೇ ಆಜ್ಞೆಯಾದ ಸಬ್ಬತ್ತು ಪ್ರಮುಖವಾದ ವಿವಾದಾಸ್ಪದ ಅಂಶವಾಗಿರುತ್ತದೆ. ಯಾಕೆಂದರೆ ಈ ಆಜ್ಞೆಯಲ್ಲಿ ಸೀನಾಯಿ ಬೆಟ್ಟದಲ್ಲಿ ಪ್ರತ್ಯಕ್ಷನಾಗಿ ಮಹಾಶಬ್ದದಿಂದ ಜನರಿಗೆ ಹತ್ತು ಆಜ್ಞೆಗಳನ್ನು ಕೊಟ್ಟಂತ ಕರ್ತನು ತನ್ನನ್ನು ಭೂಮ್ಯಾಕಾಶಗಳ ಸೃಷ್ಟಿಕರ್ತನೆಂದು ತಿಳಿಸುತ್ತಾನೆ (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 3, ಪುಟ 392 (1891). ಕೊಕಾಘ 70.4

“ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ನೀವು ತಪ್ಪದೇ ಆಚರಿಸಬೇಕು. ನಿಮ್ಮನ್ನು ದೇವಜನರನ್ನಾಗಿ ಮಾಡಿರುವ ಯೆಹೋವನು ನಾನೇ ಎಂದು ನೀವು ತಿಳುಕೊಳ್ಳುವಂತೆ ಇದೇ ನನಗೂ, ನಿಮಗೂ ನಿಮ್ಮ ಸಂತತಿಯವರಿಗೂ ಇರುವ ಗುರುತು’ ಎಂದು ಕರ್ತನಾದ ಯೆಹೋವನು ಹೇಳುತ್ತಾನೆ (ವಿಮೋಚನಕಾಂಡ 31:13). ಕೆಲವರು ಸಬ್ಬತ್ ದಿನವು ಯಾವುದೆಂದು ನಿಮಗೆ ತಿಳಿಯದು ಎಂದು ಹೇಳಿ ಅದನ್ನು ಪರಿಶುದ್ಧ ದಿನವನ್ನಾಗಿ ಆಚರಿಸುವುದಕ್ಕೆ ಅಡ್ಡಿಮಾಡುತ್ತಾರೆ (ಲಾಸ್ಟ್ ಡೇ ಈವೆಂಟ್ಸ್ ಪುಟ 124). ಈ ವಿಷಯದಲ್ಲಿ ಶ್ರೀಮತಿ ವೈಟಮ್ಮನವರು ಹೀಗೆ ಹೇಳುತ್ತಾರೆ. ಕೊಕಾಘ 71.1

‘ಅಮೇರಿಕಾ ದೇಶದಲ್ಲಿ ಭಾನುವಾರಾಚರಣೆಯನ್ನು ಕಡ್ಡಾಯ ಮಾಡುವ ಶಾಸನ ಜಾರಿಯಾಗುವುದೆಂದು ಅನೇಕ ವರ್ಷಗಳಿಂದ ಎದುರು ನೋಡುತ್ತಾ ಇದ್ದೇವೆ. ಈಗ ಅದು ಇನ್ನೇನು ಜಾರಿಯಾಗಲಿದೆ. ಈ ವಿಷಯದಲ್ಲಿ ಅಡ್ವೆಂಟಿಸ್ಟರು ಏನು ಮಾಡಲಿದ್ದಾರೆ? ದೇವರು ತನ್ನ ಜನರಿಗೆ ಕೃಪೆ ಹಾಗೂ ಬಲ ನೀಡಲೆಂದು ವಿಶೇಷವಾಗಿ ಪ್ರಾರ್ಥಿಸಬೇಕು. ಆ ಸಮಯವು ಬಂದಿದೆ ಹಾಗೂ ನಿಮ್ಮ ಧಾರ್ಮಿಕ ಸ್ವಾತಂತ್ರ್ಯವು ನಿರ್ಬಂಧಗೊಳ್ಳುತ್ತದೆಂದು ನಾವು ನಂಬುವುದಿಲ್ಲ’, ಕೊಕಾಘ 71.2

ಪ್ರವಾದಿಯಾದ ಯೋಹಾನನು ತಾನು ಕಂಡ ಮತ್ತೊಂದು ದರ್ಶನವನ್ನು ಪ್ರಕಟನೆ 7:1-3ನೇ ವಚನಗಳಲ್ಲಿ ತಿಳಿಸುತ್ತಾನೆ: ‘ಇದಾದ ಮೇಲೆ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ, ಸಮುದ್ರದ ಮೇಲಾಗಲಿ, ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ಹಿಡಿದಿರುವುದನ್ನು ಕಂಡೆನು. ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡುಕೊಂಡು ಮೂಡಣ ದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಅವನು ಭೂಮಿಯನ್ನೂ, ಸಮುದ್ರವನ್ನೂ ಕೆಡಿಸುವುದಕ್ಕೆ ಅಧಿಕಾರ ಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ ನಾವು ನಮ್ಮ ದೇವರ ದಾಸರಿಗೆ ಹಣೆಯಮೇಲೆ ಮುದ್ರೆಒತ್ತುವ ತನಕ ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ, ಮರಗಳನ್ನಾಗಲಿ ಕಡಿಸಬೇಡಿರಿ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು. ಈ ಕಾರ್ಯವನ್ನು ತಾನೇ ಈಗ ನಾವು ಮಾಡಬೇಕಾಗಿದೆ. ಅಂದರೆ ದೇವರ ಸೇವಕರು ಜಗತ್ತಿನ ಎಲ್ಲಾ ಭಾಗಗಳಿಗೆ ಹೋಗಿ, ದೇವರಾಜ್ಞೆಗಳಿಗೆ ವಿರುದ್ಧವಾಗಿ ಅವಿಧೇಯರಾದವರಿಗೆ ಈ ಎಚ್ಚರಿಕೆ ಕೊಡುವ ತನಕ ದೇವದೂತರು ಗಾಳಿಯನ್ನು ಹಿಡಿದುಕೊಂಡಿರಬೇಕೆಂದು ದೇವರಿಗೆ ಮೊರೆಯಿಡಬೇಕಾಗಿದೆ (ರಿವ್ಯೂ ಅಂಡ್ ಹೆರಾಲ್ಡ್, ಡಿಸೆಂಬರ್ 11, 1888). ಕೊಕಾಘ 71.3