Go to full page →

ಮನುಷ್ಯರಿಗಿಂತ ಹೆಚ್ಚಾಗಿ ನಾವು ದೇವರಿಗೆ ವಿಧೇಯರಾಗಬೇಕಲ್ಲಾ! ಕೊಕಾಘ 81

ಸತ್ಯದ ಅನುಯಾಯಿಗಳು ದೇವರ ವಾಕ್ಯವನ್ನು ಅಲಕ್ಷಿಸಲು ಅಥವಾ ತಮ್ಮ ಧಾರ್ಮಿಕ ಸ್ವಾತಂತ್ರ ಕಳೆದುಕೊಳ್ಳುವುದು - ಇವೆರಡರ ನಡುವೆ ಆಯ್ಕೆ ಮಾಡುವ ಸಮಯ ಬರುತ್ತದೆ. ನಾವು ದೇವರ ವಾಕ್ಯವನ್ನು ತಿರಸ್ಕರಿಸಿ, ಮಾನವರ ಸಂಪ್ರದಾಯಗಳು, ಪದ್ಧತಿಗಳನ್ನು ಅನುಸರಿಸಿದಲ್ಲಿ, ನಾವು ಜನರ ಮಧ್ಯೆ ವಾಸಿಸಲು, ದವಸ ದಾನ್ಯಗಳನ್ನು ಕೊಳ್ಳುವುದಕ್ಕೂ ಹಾಗೂ ಮಾರುವುದಕ್ಕೂ ಅನುಮತಿ ದೊರೆಯುತ್ತದೆ. ಅಲ್ಲದೆ ನಮ್ಮ ಹಕ್ಕುಗಳು ಗೌರವಿಸಲ್ಪಡುತ್ತವೆ. ಆದರೆ ನಾವು ದೇವರಿಗೆ ವಿಧೇಯರಾಗಿ ನಿಷ್ಠೆ ತೋರಿಸಿದಲ್ಲಿ, ನಮ್ಮ ಹಕ್ಕು ಬಾಧ್ಯತೆಗಳನ್ನು ಕಳೆದುಕೊಳ್ಳಬೇಕು. ಯಾಕೆಂದರೆ ದೇವರಾಜ್ಜೆಯ ವಿರೋಧಿಗಳು ಒಟ್ಟಾಗಿ ಕೂಡಿಕೊಂಡು ಧಾರ್ಮಿಕ ನಂಬಿಕೆಗಳಲ್ಲಿ ಸ್ವತಂತ್ರ ನಿರ್ಣಯಗಳನ್ನು ಕೈಗೊಳ್ಳುವವರನ್ನು ನಾಶಪಡಿಸುವರು. ಕೊಕಾಘ 81.1

ದೇವಜನರು ಲೋಕದ ಸರ್ಕಾರ, ಅಧಿಕಾರಿಗಳು, ನಾಯಕರೆಲ್ಲರೂ ದೇವರಿಂದ ಆರಿಸಲ್ಪಟ್ಟವರೆಂದು ಎಣಿಸುತ್ತಾರೆ. ಎಲ್ಲಿಯವರೆಗೆ ಸಂವಿಧಾನದ ಚೌಕಟ್ಟಿನಲ್ಲಿ ತಮ್ಮ ಅಧಿಕಾರ ಚಲಾಯಿಸುತ್ತಾರೋ, ಅಲ್ಲಿಯವರೆಗೆ ಸರ್ಕಾರಕ್ಕೆ ವಿಧೇಯರಾಗಿರುವುದು ಪವಿತ್ರ ಕರ್ತವ್ಯವೆಂದು ದೇವಜನರು ಬೋಧಿಸುತ್ತಾರೆ. ಆದರೆ ಸರ್ಕಾರದ ನಿಯಮಗಳು ದೇವರ ನಿಯಮಗಳಿಗೆ ವಿರುದ್ಧವಾದಾಗ, ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವರಿಗೆ ವಿಧೇಯರಾಗಬೇಕು. ಮಾನವರ ಎಲ್ಲಾ ಕಾನೂನುಬದ್ಧವಾದ ಶಾಸನಗಳಿಗಿಂತ ದೇವರ ವಾಕ್ಯವು ಅಧಿಕಾರಯುಕ್ತವಾಗಿದೆ ಎಂದು ತಿಳಿದು ಅದಕ್ಕೆ ವಿಧೇಯರಾಗಬೇಕು, ಲೋಕದ ಎಲ್ಲಾ ರಾಜರು, ಚಕ್ರವರ್ತಿಗಳು, ನಾಯಕರುಗಳಿಗಿಂತ ಕ್ರಿಸ್ತನು ಉನ್ನತ ಸ್ಥಾನಕ್ಕೇರಿಸಲಡಬೇಕು. ಸರ್ಕಾರ ಅಥವಾ ಸಭೆ ಹೀಗೆ ಹೇಳುತ್ತದೆ ಅನ್ನುವುದನ್ನು ನಿರಾಕರಿಸಿ, ಯೆಹೋವನು ಇಂತೆನ್ನುತ್ತಾನೆ ಎಂಬುದಕ್ಕೆ ವಿಧೇಯರಾಗಬೇಕು. ಕೊಕಾಘ 81.2

ಜನರು ತನ್ನ ಪರಮಾಧಿಕಾರ ಒಪ್ಪಿಕೊಂಡಲ್ಲಿ ಅವರಿಗೆ ಲೋಕದ ಅಧಿಕಾರವನ್ನು ಸೈತಾನನು ಕೊಡಲು ಸಿದ್ಧನಾಗಿದ್ದಾನೆ. ಅನೇಕರು ಇದನ್ನು ಅಂಗೀಕರಿಸಿಕೊಂಡು ಪರಲೋಕವನ್ನು ತಿರಸ್ಕರಿಸುತ್ತಾರೆ. ಪಾಪ ಮಾಡುವುದಕ್ಕಿಂತ ಸಾಯುವುದು ಮೇಲು, ಮೋಸ ಮಾಡುವುದಕ್ಕಿಂತ ಕೊರತೆ ಅನುಭವಿಸುವುದು ಮೇಲು, ಸುಳ್ಳಾಡುವುದಕ್ಕಿಂತ ಹಸಿವೆಯಿಂದಿರುವುದು ಒಳ್ಳೆಯದು (ಟೆಸ್ಟಿಮೊನೀಸ್, ಸಂಪುಟ 4, ಪುಟ 495, 1880). ಕೊಕಾಘ 81.3

*****