Go to full page →

ಹೊಟ್ಟೆ ಬಾಕತನ ಹಾಗೂ ಮಿತಿಮೀರಿದ ಭೋಗಾಸಕ್ತಿ ಕೊಕಾಘ 12

ನಮ್ಮ ಜಗತ್ತಿನಲ್ಲಿ ನೈತಿಕಮಟ್ಟ ಅಧಃಪತನಗೊಳ್ಳಲು ಹೊಟ್ಟೆಬಾಕತನ ಹಾಗೂ ಮಿತಿಮೀರಿದ ಭೋಗಾಸಕ್ತಿ ಮುಖ್ಯಕಾರಣಗಳಾಗಿವೆ. ಸೈತಾನನಿಗೆ ಇದು ಚೆನ್ನಾಗಿ ಗೊತ್ತುಂಟು. ಆದುದರಿಂದ ಅವನು ಜನರು ಆರೋಗ್ಯ ಹಾಗೂ ಪ್ರಾಣ ಕಳೆದುಕೊಂಡರೂ ಸರಿಯೇ, ಸ್ತ್ರೀಪುರುಷರು ಇದರಲ್ಲಿ ಲೋಲುಪ್ತರಾಗಬೇಕೆಂದು ಅವರನ್ನು ಬಹಳವಾಗಿ ಶೋಧನೆಗೆ ಒಳಪಡಿಸುತ್ತಾನೆ. ಉಣ್ಣುವುದು, ತಿನ್ನುವುದು, ಕುಡಿಯುವುದು, ಆಡಂಬರದ ಬಟ್ಟೆತಾಕಿಕೊಳ್ಳುವುದು ಈ ಲೋಕದಲ್ಲಿ ಹೆಚ್ಚಿನ ಜನರ ಮುಖ್ಯ ಗುರಿಯಾಗಿದೆ. ನೋಹನ ಕಾಲದಲ್ಲಿ ಜಲಪ್ರಳಯ ಉಂಟಾಗುವುದಕ್ಕೆ ಮೊದಲೂ ಇದೇ ರೀತಿಯಲ್ಲಿ ಜನರು ಉಣ್ಣುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ ಇದ್ದರು. ಇಂತಹ ಕೆಟ್ಟ ಚಟಗಳು ಈ ಜಗತ್ತಿನ ಇತಿಹಾಸ ಶೀಘ್ರವಾಗಿ ಮುಕ್ತಾಯಗೊಳ್ಳಲಿದೆ ಎಂಬುದಕ್ಕೆ ಮಹತ್ವಪೂರ್ಣವಾದ ಸೂಚನೆಗಳಲ್ಲಿ ಒಂದಾಗಿದೆ (1875). ಪ್ರವಾದನಾ ಆತ್ಮನ ಮೂಲಕವಾಗಿ ಜಲಪ್ರಳಯಕ್ಕೆ ಮೊದಲು ಜೀವಿಸಿದ್ದ ಜನರ ಬಗ್ಗೆ ಕೊಟ್ಟಿರುವ ಚಿತ್ರಣವು, ನಮ್ಮ ಕಾಲದಲ್ಲಿ ಆಧುನಿಕ ಸಮಾಜವು ಶೀಘ್ರವಾಗಿ ಅಂತಹ ಸ್ಥಿತಿ ತಲುಪಲಿದೆ ಎಂಬುದನ್ನು ಸೂಚಿಸುತ್ತದೆ (ಪೇಟಿಯಾರ್ಕ್ ಅಂಡ್ ಪ್ರಾಫೆಟ್ಸ್, ಪುಟ 102 (1890). ಕೊಕಾಘ 12.3

ಕರ್ತನು ಅತೀ ಶೀಘ್ರದಲ್ಲಿ ಬರುತ್ತಾನೆಂದು ನಮಗೆ ತಿಳಿದಿದೆ. ಜಗತ್ತು ಶೀಘ್ರವಾಗಿ ನೋಹನ ಕಾಲದಲ್ಲಿದ್ದ ಸ್ಥಿತಿಗೆ ಬರುತ್ತಿದೆ. ಜನರು ಸ್ವಾರ್ಥಿಗಳಾಗಿದ್ದಾರೆ. ಉಣ್ಣುವುದು, ತಿನ್ನುವುದು, ಕುಡಿಯುವುದು ಮಿತಿಮೀರಿದೆ. ಹುಚ್ಚರನ್ನಾಗಿ ಮಾಡುವ ವಿಷಪೂರಿತವಾದ ಮದ್ಯವನ್ನು ಜನರು ಕುಡಿಯುತ್ತಿದ್ದಾರೆ (1907). ಕೊಕಾಘ 12.4