Go to full page →

ಸುಳ್ಳಾದ ಧಾರ್ಮಿಕ ಸುಧಾರಣೆಗಳು ಕೊಕಾಘ 90

ಹೆಸರಿಗೆ ಮಾತ್ರ ಅಡ್ವೆಂಟಿಸ್ಟರಾಗಿರುವ ಮತ್ತು ಧರ್ಮಭ್ರಷ್ಟತೆಯಿಂದ ಬಿದ್ದು ಹೋಗಿರುವ ಸಭೆಗಳಲ್ಲಿಯೂ ಸಹ ದೇವರ ಮಕ್ಕಳಿದ್ದಾರೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಕೊನೆಯ ಏಳು ಉಪದ್ರವಗಳು ಬೀಳುವುದಕ್ಕೆ ಮೊದಲೇ ಈ ಸಭೆಗಳಿಂದ ಹೊರಬರುವಂತೆ ಬೋಧಕರು ಮತ್ತು ಜನಗಳಿಗೆ ದೇವರು ಕರೆಕೊಟ್ಟಾಗ (ಪ್ರಕಟನೆ 18:4) ಅನೇಕರು ಸಂತೋಷದಿಂದ ಸತ್ಯವನ್ನು ಸ್ವೀಕರಿಸುತ್ತಾರೆ. ಸೈತಾನನಿಗೆ ಇದು ಚೆನ್ನಾಗಿ ತಿಳಿದಿದೆ. ಮೂರನೇ ದೇವದೂತನ ಸಂದೇಶವು ಮಹಾಶಬ್ದದಿಂದ ಕೊಡುವುದಕ್ಕೆ ಮೊದಲೇ ಅವನು ಈ ಧಾರ್ಮಿಕ ಸಭೆಗಳಲ್ಲಿ ಒಂದು ರೀತಿಯ ಪ್ರಚೋದನೆ ಹುಟ್ಟಿಸುತ್ತಾನೆ. ದೇವರ ಸತ್ಯವನ್ನು ತಿರಸ್ಕರಿಸಿದವರು ಇದರಿಂದ ಉತ್ತೇಜನಗೊಂಡು ದೇವರು ನಮ್ಮೊಂದಿಗಿದ್ದಾನೆಂದು ತಿಳಿದುಕೊಳ್ಳುವರು (ಅರ್ಲಿ ರೈಟಿಂಗ್ಸ್, 261, 1858). ಕೊಕಾಘ 90.4

ದೇವರ ಅಂತಿಮ ನ್ಯಾಯತೀರ್ಪಿನ ದಂಡನೆಯು ಈ ಲೋಕಕ್ಕೆ ಬರುವುದಕ್ಕೆ ಮೊದಲು, ಆತನ ಜನರಲ್ಲಿ ಅಪೊಸ್ತಲರ ಕಾಲದಿಂದ ಕಂಡುಬಂದಿರದಂತ ದೈವಭಕ್ತಿಯ ಪುನರುಜ್ಜಿವನ ಉಂಟಾಗುವುದು. ಈ ಕಾರ್ಯವನ್ನು ತಡೆಯಬೇಕೆಂದು ಜನರ ವಿರೋಧಿಯಾಗಿರುವ ಸೈತಾನನು ಬಯಸುತ್ತಾನೆ. ಆದುದರಿಂದ ದೇವರ ಮಕ್ಕಳಲ್ಲಿ ದೈವಭಕ್ತಿಯು ಕಂಡುಬರುವ ಪುನರುಜ್ಜೀವನ ಚಳುವಳಿ ನಡೆಯುವ ಕಾಲ ಬರುವ ಮೊದಲು, ಸೈತಾನನು ಅದನ್ನು ತಡೆಯಬೇಕೆಂಬ ಉದ್ದೇಶದಿಂದ ಅದರ ವಿರುದ್ಧವಾಗಿ ಮೋಸದಿಂದ ಅದನ್ನು ಅನುಕರಿಸುವಂತ ಒಂದು ಸುಳ್ಳು ಧಾರ್ಮಿಕ ಸುಧಾರಣೆ ತರುತ್ತಾನೆ. ತನ್ನ ಮೋಸಕ್ಕೆ ಒಳಗಾಗುವಂತ ಸಭೆಗಳಲ್ಲಿ ಸೈತಾನನು ಅವುಗಳ ಮೇಲೆ ದೇವರ ವಿಶೇಷ ಆಶೀರ್ವಾದ ಸುರಿಸಲ್ಪಟ್ಟಿತೇನೋ ಎಂದು ಕಂಡುಬರುವಂತೆ ಮಾಡುತ್ತಾನೆ. ಒಂದು ಮಹಾಧಾರ್ಮಿಕ ಚಳುವಳಿ ಆರಂಭವಾಯಿತೋ ಎಂಬಂತೆ ಜನರು ಭಾವಿಸುತ್ತಾರೆ. ಕೊಕಾಘ 90.5

ಜನರನ್ನು ಮೋಸಗೊಳಿಸಿ ತಪ್ಪು ದಾರಿಗೆ ಎಳೆಯಲು ಸುಳ್ಳಿನೊಂದಿಗೆ ಸತ್ಯ ಬೆರಸಿದ ಒಂದು ಭಾವೋದ್ವೇಗದ ಪ್ರಚೋದನೆ ಉಂಟುಮಾಡುತ್ತಾನೆ. ಆದಾಗ್ಯೂ, ಯಾರೂ ಸಹ ಮೋಸ ಹೊಗಬಾರದು, ದೇವರ ವಾಕ್ಯದ ಬೆಳಕಿನಲ್ಲಿ ಅಂತಹ ಮೋಸದ ಚಳುವಳಿಗಳನ್ನು ತಿಳಿದುಕೊಳ್ಳುವುದು ಕಷ್ಟವಲ್ಲ. ಮನುಷ್ಯರು ಸತ್ಯವೇದದ ಸಾಕ್ಷಿಯನ್ನು ನಿರ್ಲಕ್ಷಿಸಿದಾಗ, ಈ ಲೋಕದಿಂದ ನಾವು ದೂರವಾಗಿರಬೇಕೆಂಬ ಸರಳವಾದ ಸತ್ಯದಿಂದ ನಾವು ದೂರಹೋದಾಗ ಅಲ್ಲಿ ದೇವರ ಆಶೀರ್ವಾದವು ಇರುವುದಿಲ್ಲವೆಂಬುದನ್ನು ನಾವು ಖಚಿತವಾಗಿ ತಿಳಿದುಕೊಳ್ಳಬಹುದು (ಗ್ರೇಟ್ ಕಾಂಟ್ರೊವರ್ಸಿ, 464, 1911). ಕೊಕಾಘ 91.1