Go to full page →

ಪರಲೋಕದಿಂದ ಬೆಂಕಿ ಕೊಕಾಘ 96

ಮನುಷ್ಯರ ಸಮರ್ಥನೆಗಳ ಮೇಲೆ ನಾವು ಭರವಸವಿಡಬಾರದು. ಅವರು ಕ್ರಿಸ್ತನು ಮುಂದಾಗಿ ತಿಳಿಸಿರುವಂತೆ ರೋಗಿಗಳನ್ನು ವಾಸಿ ಮಾಡುವಲ್ಲಿ ಅದ್ಭುತಗಳನ್ನು ಮಾಡುತ್ತೇವೆಂದು ಹೇಳಿಕೊಳ್ಳಬಹುದು. ಪರಲೋಕದಿಂದ ಬೆಂಕಿ ತರಲು ಶಕ್ತಿಯಿರುವ ಮಹಾವಂಚಕನಾದ ಸೈತಾನನು ಅವರ ಅದ್ಭುತದ ಹಿಂದೆ ಇರುವಾಗ ಇದು ಆಶ್ಚರ್ಯವೆನಿಸುತ್ತದೆಯೇ? (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 2, ಪುಟ 49, 1887). ಕೊಕಾಘ 96.2

ದೆವ್ವವೆನಿಸಿಕೊಳ್ಳುವ ಸೈತಾನನ ಈ ಹುಸಿಯಾದ ಅದ್ಭುತಗಳು ಮನುಷ್ಯರ ಮನಸ್ಸನ್ನು ಸೆರೆಹಿಡಿಯುತ್ತವೆ. ಅವನು ಜನರ ಮುಂದೆ ಆಕಾಶದಿಂದ ಬೆಂಕಿ ಬರುವಂತೆ ಮಾಡುತ್ತಾನೆ, ಅದ್ಭುತವಾದ ಪವಾಡಗಳನ್ನು ಮಾಡುವ ಈ ಶಕ್ತಿಯು ಸಮಸ್ತ ಲೋಕದಲ್ಲಿ ಶೀಘ್ರವಾಗಿ ಹರಡುವುದು (ಪುಟ 51) ಸೈತಾನನು ಸಾಧ್ಯವಾದರೆ ದೇವರಾರಿಸಿಕೊಂಡವರನ್ನೂ ಮೋಸಗೊಳಿಸಲು ಬರುವನು, ತಾನು ಕ್ರಿಸ್ತನೆಂದು ಅವನು ಹೇಳಿಕೊಂಡು, ತಾನೊಬ್ಬ ದೊಡ್ಡ ವೈದ್ಯಕೀಯ ಸೇವೆ ಮಾಡುವವನೆಂದು ಹೊರಗೆ ತೋರಿಸಿಕೊಳ್ಳುತ್ತಾನೆ. ತಾನು ದೇವರೆಂದು ತೋರಿಸಿಕೊಳ್ಳಲು ಸೈತಾನನು ಜನರ ಮುಂದೆ ಪರಲೋಕದಿಂದ ಬೆಂಕಿ ಇಳಿದು ಬರುವಂತೆ ಮಾಡುವನು (ಮೆಡಿಕಲ್ ಮಿಷನರಿ 87, 88, 1903), ಸೈತಾನನು ಕ್ರಿಸ್ತ ನಂಬಿಕೆಯಿಂದ ದೂರ ಹೋಗಿರುವ ತನ್ನ ಏಜಂಟರುಗಳು ಅಂದರೆ ಮಧ್ಯವರ್ತಿಗಳ ಮೂಲಕ ಕಾರ್ಯ ಮಾಡುತ್ತಾನೆಂದು ಸತ್ಯವೇದವು ಹೇಳುತ್ತದೆ. ಅವರು ಪರಲೋಕದಿಂದ ಬೆಂಕಿ ಇಳಿದು ಬರುವಂತೆ ಜನರ ಮುಂದೆ ಅದ್ಭುತ ಕಾರ್ಯಗಳನ್ನು ಮಾಡುವರು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 54, 1907). ಕೊಕಾಘ 96.3

“ಇದು ಮಹತ್ತಾದ ಸೂಚಕ ಕಾರ್ಯಗಳನ್ನು ನಡೆಸುತ್ತದೆ; ಜನರ ಮುಂದೆ ಬೆಂಕಿಯು ಆಕಾಶದಿಂದ ಇಳಿದುಬರುವಂತೆಯಾದರೂ ಮಾಡುವುದು. ಆ ಮೊದಲನೆ ಮೃಗದ ಸನ್ನಿಧಿಯಲ್ಲಿ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವಿರುವುದರಿಂದ ಭೂನಿವಾಸಿಗಳನ್ನು ಮರುಳುಗೊಳಿಸುತ್ತದೆ..... (ಪ್ರಕಟನೆ 13:13, 14). ಇಲ್ಲಿ ಕೇವಲ ಮೋಸಗಾರಿಕೆಗಳು ಮಾತ್ರ ಮುಂದಾಗಿ ತಿಳಿಸಲ್ಪಟ್ಟಿಲ್ಲ. ಸೈತಾನನ ಮಧ್ಯವರ್ತಿಗಳ ಅದ್ಭುತಗಳನ್ನು ಮಾಡುತ್ತೇವೆಂದು ತೋರ್ಪಡಿಸಿಕೊಳ್ಳುವುದಿಲ್ಲ. ಅವರಿಗೆ ಅದನ್ನು ಮಾಡುವ ಶಕ್ತಿಯಿದೆ ಹಾಗೂ ಮನುಷ್ಯರು ಅಂತಹ ಪವಾಡಗಳಿಂದ ಮೋಸ ಹೊಗುವರು (ಗ್ರೇಟ್ ಕಾಂಟ್ರೊವರ್ಸಿ, ಪುಟ 553, 1911). ಕೊಕಾಘ 96.4