“ಆತನು ಮುಂಗಾರನ್ನು ತಕ್ಕ ಹಾಗೆ ನಿಮಗೆ ಕೊಡುವೆನು: ಮುಂಗಾರು ಹಿಂಗಾರು ಮಳೆಗಳನ್ನು ಮೊದಲಿನಂತೆ ನಿಮಗಾಗಿ ಸುರಿಸುವನು’ (ಯೋವೇಲನು 2:23). ಪೂರ್ವ ದೇಶಗಳಲ್ಲಿ (ನಮ್ಮ ಭಾರತ ದೇಶವೂ ಸೇರಿದಂತೆ) ಬೀಜ ಬಿತ್ತುವ, ನಾಟಿ ಹಾಕುವ ಕಾಲದಲ್ಲಿ ಮುಂಗಾರು ಮಳೆ ಬೀಳುವುದು. ಅದು ಬೀಜ ಮೊಳಕೆ ಒಡೆಯಲು ಅಗತ್ಯ, ಆಗ ಮಳೆ ಬಂದಾಗ, ಹೊಡೆಯು ಕಾಣಿಸಿಕೊಳ್ಳುವುದು. ಮಳೆಗಾಲದ ಮುಕ್ತಾಯದಲ್ಲಿ ಬೀಳುವ ಹಿಂಗಾರು ಧಾನ್ಯವನ್ನು ಕೊಯಿಲಿಗೆ ಸಿದ್ಧಪಡಿಸುವುದು. ನಿಸರ್ಗದ ಈ ಕಾರ್ಯವಿಧಾನವನ್ನು ಕರ್ತನು ಪರಿಶುದ್ಧಾತ್ಮನ ಕಾರ್ಯಕ್ಕೆ ಹೋಲಿಸಿದ್ದಾನೆ (ಜೆಕರ್ಯ 10:1; ಹೋಶೇಯನು 6:3; ಯೋವೇಲ 2:23, 28). ಕೊಕಾಘ 106.1
ಬೀಜ ಬಿತ್ತಿದನಂತರ ಹೇಗೆ ಮಂಜು ಮತ್ತು ಮಳೆ ಬೀಜ ಮೊಳಕೆ ಬರಲು ಹಾಗೂ ಆನಂತರ ಬೆಳೆಯನ್ನು ಕೊಯಿಲಿಗೆ ಸಿದ್ದಪಡಿಸುವುದೋ ಅದೇ ರೀತಿಯಾಗಿ ಆತ್ಮೀಕ ಬೆಳವಣಿಗೆಯ ಕಾರ್ಯವಿಧಾನದಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಹೋಗಲು ಪರಿಶುದ್ಧಾತ್ಮನು ಕೊಡಲ್ಪಡುವನು. ಧಾನ್ಯವು ಸಂಪೂರ್ಣವಾಗಿ ಕೊಯಿಲಿಗೆ ಬರುವುದು ಮನುಷ್ಯನ ಹೃದಯದಲ್ಲಿ ದೇವರ ಕೃಪೆಯ ಕಾರ್ಯವು ಮುಕ್ತಾಯವಾಗುವುದನ್ನು ಸೂಚಿಸುತ್ತದೆ. ಪವಿತ್ರಾತ್ಮನ ಶಕ್ತಿಯಿಂದ ದೇವರ ನೈತಿಕ ಸ್ವರೂಪವು ನಮ್ಮ ಗುಣಸ್ವಭಾವವನ್ನು ಪರಿಪೂರ್ಣಗೊಳಿಸಬೇಕು. ನಾವು ಸಂಪೂರ್ಣವಾಗಿ ಕ್ರಿಸ್ತನ ಪ್ರತಿರೂಪಕ್ಕೆ ಬದಲಾವಣೆ ಹೊಂದಬೇಕು. ಕೊಕಾಘ 106.2
ಬೆಳೆಯನ್ನು ಕೊಯಿಲಿಗೆ ಸಿದ್ದಪಡಿಸುವ ಹಿಂಗಾರುಮಳೆಯು, ಸಭೆಯನ್ನು ಮನುಷ್ಯಕುಮಾರನ ಬರೋಣಕ್ಕೆ ಸಿದ್ಧಪಡಿಸುವ ಆತ್ಮೀಕ ಕೃಪೆಯನ್ನು ಸೂಚಿಸುತ್ತದೆ. ಆದರೆ ಮುಂಗಾರು ಮಳೆ ಬೀಳದಿದ್ದಲ್ಲಿ, ಬೀಜಗಳಲ್ಲಿ ಜೀವವಿರುವುದಿಲ್ಲ ಹಾಗೂ ಪೈರಿನ ಹಸಿರುಗರಿಗಳು ಮೊಳಕೆ ಒಡೆಯುವುದಿಲ್ಲ; ಮುಂಗಾರು ಮಳೆಯು ತನ್ನ ಕಾರ್ಯ ಮಾಡದಿದ್ದಲ್ಲಿ, ಹಿಂಗಾರು ಮಳೆಯು ಬೀಜವನ್ನು ಪರಿಪೂರ್ಣತೆಗೆ ಅಂದರೆ ಕೊಯಿಲಿಗೆ ತರಲಾಗದು (ಟೆಸ್ಟಿಮೊನೀಸ್ ಟು ಮಿನಿಸ್ಟರ್ಸ್, 506, 1897). ಕೊಕಾಘ 106.3