Go to full page →

ಹಿಂಗಾರುಮಳೆ ಸುರಿಯುವ ವಾಗ್ದಾನ ಕೊಕಾಘ 107

ಅಪೊಸ್ತಲರ ಕಾಲದಲ್ಲಿ ಸುರಿದ ಪವಿತ್ರಾತ್ಮನ ವರವು ಮುಂಗಾರು ಮಳೆಯಾಗಿದ್ದು ಅದರಿಂದ ಅದ್ಭುತ ಫಲಿತಾಂಶ ಉಂಟಾಯಿತು. ಆದರೆ ಹಿಂಗಾರು ಮಳೆಯು ಅದಕ್ಕಿಂತಲೂ ಹೇರಳವಾಗಿ ಸುರಿಸಲ್ಪಡುವುದು (ಟೆಸ್ಟಿಮೊನೀಸ್, ಪುಟ 21, 1904). ಕೊಕಾಘ 107.5

ಲೋಕದ ಸುಗ್ಗಿಕಾಲದ ಮುಕ್ತಾಯದ ಮೊದಲು ಮನುಷ್ಯಕುಮಾರನ ಎರಡನೇ ಬರೋಣಕ್ಕಾಗಿ ಸಭೆಯನ್ನು ಸಿದ್ಧಪಡಿಸಲು ಒಂದು ವಿಶೇಷವಾದ ಆತ್ಮೀಕ ಕೃಪೆಯು ಸುರಿಸಲ್ಪಡುವುದೆಂದು ವಾಗ್ದಾನ ಮಾಡಿದೆ. ಪವಿತ್ರಾತ್ಮ ವರದ ಈ ಸುರಿಸುವಿಕೆಯು ಹಿಂಗಾರು ಮಳೆಯಂತಿರುತ್ತದೆ (ಆಕ್ಟ್ಸ್ ಆಫ್‌ ದಿ ಅಪೊಸ್ತಲ್ಸ್, ಪುಟ 48, 1911). ಕೊಕಾಘ 107.6

ದೇವರ ನ್ಯಾಯತೀರ್ಪಿನ ಅಂತಿಮ ಶಿಕ್ಷೆಗೆ ಮೊದಲು, ಕರ್ತನ ಜನರಲ್ಲಿ ಅಪೊಸ್ತಲರ ಕಾಲದಿಂದ ಕಂಡುಬರದಿದ್ದಂತ ಭಕ್ತಿಯ ಪುನರುಜ್ಜೀವನ ಉಂಟಾಗುವುದು. ದೇವರಾತ್ಮ ಹಾಗೂ ಆತನ ಶಕ್ತಿಯು ಆತನ ಮಕ್ಕಳ ಮೇಲೆ ಸುರಿಸಲ್ಪಡುವುದು. (ಗೇಟ್ ಕಾಂಟ್ರೊವರ್ಸಿ, 464, 1911). ಈ ಕಾರ್ಯವು ಪಂಚಾಶತ್ತಮ ಹಬ್ಬದ ದಿನದಲ್ಲಿ ನಡೆದಂತೆಯೇ ಇರುವುದು, ಸುವಾರ್ತೆಯ ಆರಂಭದಲ್ಲಿ ಅಮೂಲ್ಯವಾದ ಬೀಜಗಳು ಮೊಳಕೆ ಒಡೆಯಲು ಪವಿತ್ರಾತ್ಮನ ವರವು ಹೇಗೆ ಮುಂಗಾರು ಮಳೆಯಂತೆ ಸುರಿಸಲ್ಪಟ್ಟಿತೋ, ಅದೇ ರೀತಿಯಲ್ಲಿ ಸುಗ್ಗಿಯು ಕೊಯಿಲಿಗೆ ಬರುವ ಮೊದಲು ಹಿಂಗಾರು ಮಳೆಯು ಸುರಿಸಲ್ಪಡುವುದು (ಪುಟ 611). ಕೊಕಾಘ 107.7