Go to full page →

ಒಬ್ಬರನ್ನೊಬ್ಬರು ಪ್ರೀತಿಸಿರಿ ಕೊಕಾಘ 110

ಪರಸ್ಪರ ಕೋಮಲವಾದ ಪ್ರೀತಿ ವಾತ್ಸಲ್ಯ ತೋರಿಸುವುದೇ ಕ್ರೈಸ್ತವಾಗಿದೆ. ತಾನು ಸೃಷ್ಟಿಸಲ್ಪಟ್ಟ ಮಾನವರಿಂದ ಕ್ರಿಸ್ತನು ಶ್ರೇಷ್ಠ ಪ್ರೀತಿಯನ್ನು ಪಡೆದುಕೊಳ್ಳಬೇಕು. ಅಲ್ಲದೆ ಅವರು ಪರಸ್ಪರ ಗೌರವ, ಪ್ರೀತಿ ತೋರಿಸಬೇಕೆಂದೂ ಸಹ ಕ್ರಿಸ್ತನ ಅಪೇಕ್ಷಿಸುತ್ತಾನೆ. ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಸಹ, ದೇವರಿಂದ ಆರಂಭವಾಗುವ ಪ್ರೀತಿಯಿಂದ ರಕ್ಷಿಸಲ್ಪಡುವರು. ನಿಜವಾದ ಪರಿವರ್ತನೆ ಎಂದರೆ ಸ್ವಾರ್ಥಬಿಟ್ಟು ದೇವರಿಗೂ ಮತ್ತು ಒಬ್ಬರಿಗೊಬ್ಬರು ಪವಿತ್ರವಾದ ಪ್ರೀತಿ ವಾತ್ಸಲ್ಯ ಸೇರಿಸುವುದೇ ಆಗಿದೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 115, 1901). ಕೊಕಾಘ 110.5

ಶುದ್ಧತ್ವ ಹಾಗೂ ಪ್ರೀತಿಯು ದೇವರು ಅತ್ಯಮೂಲ್ಯವೆಂದು ಎಣಿಸುವ ಗುಣಗಳಾಗಿವೆ. ಇವುಗಳನ್ನು ಪ್ರತಿಯೊಬ್ಬ ಕ್ರೈಸ್ತನೂ ಬೆಳೆಸಿಕೊಳ್ಳಬೇಕು (ಟೆಸ್ಟಿಮೊನೀಸ್, ಸಂಪುಟ 5, ಪುಟ 85, 1882), ಪ್ರೀತಿಸುವ ಹಾಗೂ ಪ್ರೀತಿಸಲ್ಪಡುವ ಕ್ರೈಸ್ತರು ಸುವಾರ್ತೆಯ ಪರವಾಗಿ ಬಲವಾದ ಸಮರ್ಥನೆ ಹಾಗೂ ಸಾಕ್ಷಾಧಾರವೂ ಆಗಿದ್ದಾರೆ (ದಿ ಮಿನಿಸ್ಟ್ರಿ ಆಫ್ ಹೀಲಿಂಗ್, 470, 1905). ಕೊಕಾಘ 111.1