Go to full page →

ದೇವರ ಕೊನೆಯ ಎಚ್ಚರಿಕೆಯ ಸಂದೇಶ ಕೊಕಾಘ 115

ಪ್ರಕಟನೆ 14ನೇ ಅಧ್ಯಾಯದ ಸಂದೇಶಗಳನ್ನು ದೇವರು ಪ್ರವಾದನೆಯಂತೆ ಪರಿಗಣಿಸಿದ್ದಾನೆ ಹಾಗೂ ಈ ಲೋಕದ ಚರಿತ್ರೆಯು ಮುಕ್ತಾಯವಾಗುವವರೆಗೆ ಅವುಗಳ ಕಾರ್ಯವು ನಿಂತುಹೋಗುವುದಿಲ್ಲ (ಎಲೆನ್ ವೈಟ್ 1888 ಮೆಟೀರಿಯಲ್ಸ್, ಪುಟ 804). ಕೊಕಾಘ 115.1

ಪ್ರಕಟನೆ 14:6-12ನೇ ವಚನಗಳಲ್ಲಿ ಮೂರುದೂತರ ಮುಖಾಂತರ ತಿಳಿಸಿರುವ ಎಚ್ಚರಿಕೆಗಳನ್ನು ತಿರಸ್ಕರಿಸಿದ ಪರಿಣಾಮವಾಗಿ, ಸಭೆಯು ಎರಡನೇ ದೂತನಿಂದ ಮುಂದಾಗಿ ತಿಳಿಸಲ್ಪಟ್ಟ ಸ್ಥಿತಿಯನ್ನು ಯಾವಾಗ ಸಂಪೂರ್ಣವಾಗಿ ಮುಟ್ಟುತ್ತದೆಂದು ಇದೇ ಪುಸ್ತಕದ 18ನೇ ಅಧ್ಯಾಯವು ಸೂಚಿಸುತ್ತದೆ. ಬಾಬೆಲಿನಲ್ಲಿ ಇನ್ನೂ ಉಳಿದಿರುವ ದೇವರ ಮಕ್ಕಳು ಅಲ್ಲಿಂದ ಹೊರಬರಬೇಕೆಂದು ತಿಳಿಸುತ್ತದೆ. ಇದು ಜಗತ್ತಿಗೆ ಕೊಡಲಿರುವ ಕೊನೆಯ ಸಂದೇಶವಾಗಿದೆ (ಗ್ರೇಟ್ ಕಾಂಟ್ರೊವರ್ಸಿ, ಪುಟ 3, 1911). ಕೊಕಾಘ 115.2

ಪ್ರಕಟನೆ 14:8ನೇ ವಚನದಲ್ಲಿ ಎರಡನೇ ದೇವದೂತನು ಬಾಬೆಲಿನ ಪತನದ ಬಗ್ಗೆ ತಿಳಿಸಿರುವುದನ್ನೇ 18-1, 2, 4ನೇ ವಚನಗಳು ಪುನಃ ತಿಳಿಸುತ್ತವೆ. ಅಲ್ಲದೆ 1844ನೇ ಇಸವಿಯಲ್ಲಿ ಈ ಸಂದೇಶವು ಮೊಟ್ಟ ಮೊದಲ ಬಾರಿಗೆ ಸಾರಲ್ಪಟ್ಟ ದಿನದಿಂದ ಬಾಬೆಲಿಗೆ ಸೇರಿರುವ ಇತರ ಸಂಸ್ಥೆಗಳ ಭ್ರಷ್ಟಾಚಾರವನ್ನು 18ನೇ ಅಧ್ಯಾಯವು ತಿಳಿಸುತ್ತದೆ. ಈ ಘೋಷಣೆಗಳು ಹಾಗೂ ಮೂರನೇ ದೂತನ ಸಂದೇಶವು ಒಟ್ಟಾಗಿ ಸೇರಿ ಲೋಕದ ನಿವಾಸಿಗಳಿಗೆ ಕೊಡಲಿರುವ ಎಚ್ಚರಿಕೆಯ ಕೊನೆಯ ಸಂದೇಶವಾಗಿದೆ. ಬಾಬೆಲಿನ ಪಾಪಗಳು ಎಲ್ಲರಿಗೂ ಕಾಣುವಂತೆ ತಿಳಿಸಲ್ಪಟ್ಟಿವೆ. ಭಾನುವಾರಾಚರಣೆಯನ್ನು ಕಡ್ಡಾಯಗೊಳಿಸಬೇಕೆನ್ನುವ ಸಭೆಯ ಒತ್ತಾಯವನ್ನು ಸರ್ಕಾರ ಜಾರಿಗೆ ತಂದ ಭಯಾನಕ ಫಲಿತಾಂಶಗಳು, ಪ್ರೇತಾತ್ಮವಾದ ಸಿದ್ಧಾಂತದ ಬೆಳವಣಿಗೆ, ರೋಮನ್ ಕಥೋಲಿಕ್ ಸಭೆಯ ರಹಸ್ಯವಾದ ಆದರೆ ವೇಗವಾದ ಅಧಿಕಾರದ ಪ್ರಗತಿ - ಇವೆಲ್ಲವುಗಳ ಮುಖವಾಡವು ಕಳಚಲ್ಪಡುತ್ತದೆ. ಗಂಭೀರವಾದ ಈ ಸಂದೇಶದ ಎಚ್ಚರಿಕೆಯು ಜನರನ್ನು ಬಡಿದೆಬ್ಬಿಸುತ್ತದೆ. ಇಂತಹ ಸಂದೇಶಗಳನ್ನು ಮೊದಲೆಂದೂ ಕೇಳಿರದ ಲಕ್ಷಾಂತರ ಜನರು ಇದನ್ನು ಮೊದಲ ಬಾರಿ ಕೇಳುವರು (ಗ್ರೇಟ್ ಕಾಂಟ್ರೊವರ್ಸಿ, 603, 604, 606, 1911). ಕೊಕಾಘ 115.3