Go to full page →

ಪಂಚಾಶತ್ತಮ ಹಬ್ಬದ ದಿನದಂತೆ ಕೊಕಾಘ 117

ಪಂಚಾಶತ್ತಮ ದಿನದಲ್ಲಿ ನಡೆದ ಘಟನೆಗಳು, ಆ ಸಮಯಕ್ಕಿಂತಲೂ ಮಹಾಶಕ್ತಿಯಿಂದ ಮತ್ತೆ ಸುರಿಸಲ್ಪಡಬೇಕೆಂದು ಶ್ರೀಮತಿ ವೈಟಮ್ಮನವರು ಬಹಳ ಪ್ರಾಮಾಣಿಕವಾದ ಕಳಕಳಿಯಿಂದ ಎದುರು ನೋಡುತ್ತಿದ್ದರು. ಪ್ರಕಟನೆ 18:1ನೇ ವಚನದಲ್ಲಿ ಯೋಹಾನನು ‘ಇದಾದ ಮೇಲೆ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿಯುವುದನ್ನು ಕಂಡೆನು; ಅವನ ಪ್ರಭಾವದಿಂದ ಭೂಮಿಗೆ ಪ್ರಕಾಶವುಂಟಾಯಿತು’ ಎಂದು ಹೇಳುತ್ತಾನೆ. ಅನಂತರ ಪಂಚಾಶತ್ತಮ ಹಬ್ಬದ ದಿನದಲ್ಲಿ ಆದಂತೆಯೇ, ಜನರು ತಮಗೆ ತಿಳಿಸುವ ಸತ್ಯಗಳನ್ನು ತಮ್ಮ ಭಾಷೆಯಲ್ಲಿಯೇ ಕೇಳುವರು (ಬೈಬಲ್ ವ್ಯಾಖ್ಯಾನ, ಸಂಪುಟ 6, ಪುಟ 1055, 1886). ಕೊಕಾಘ 117.1

ರಾತ್ರಿಯಲ್ಲಿ ಕಂಡ ದರ್ಶನಗಳಲ್ಲಿ ಶ್ರೀಮತಿ ವೈಟಮ್ಮನವರ ಮನಸ್ಸಿಗೆ ದೇವಜನರಲ್ಲಿ ಒಂದು ಮಹಾಧಾರ್ಮಿಕ ಸುಧಾರಣಾ ಚಳುವಳಿ ನಡೆಯುವುದು ವಿಶದವಾಗಿ ಕಂಡುಬಂದಿತು. ಅನೇಕರು ದೇವರನ್ನು ಸ್ತುತಿಸುತ್ತಿದ್ದರು. ರೋಗಿಗಳು ಗುಣವಾದರು ಹಾಗೂ ಇನ್ನೂಅನೇಕ ಅದ್ಭುತಕಾರ್ಯಗಳು ನಡೆದವು. ಪಂಚಾಶತ್ತಮ ಮಹಾದಿನದ ಮೊದಲು ಕಂಡುಬಂದಂತೆ ಪ್ರತಿಯೊಬ್ಬರೂ ಇತರರ ಪರವಾಗಿ ಪ್ರಾರ್ಥನೆ ಮಾಡುವ ಭಾವನೆ ಕಂಡುಬಂದಿತೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. (ಟೆಸ್ಟಿಮೋನೀಸ್, ಸಂಪುಟ 9, ಪುಟ 126, 1909). ಕೊಕಾಘ 117.2

ಸುವಾರ್ತೆಯ ಮಹಾಕಾರ್ಯವು ಆರಂಭದಲ್ಲಿ ದೇವರ ಮಹಾಶಕ್ತಿಯನ್ನು ತೋರಿಸಿತು. ಅದೇರೀತಿ ಈ ಸುವಾರ್ತಾಸೇವೆಯು ಅಷ್ಟೇ ಬಲದಿಂದ ಮುಕ್ತಾಯವಾಗುವುದು. ಪಂಚಾಶತ್ತಮ ಹಬ್ಬದ ಸುವಾರ್ತೆಯ ಆರಂಭದಲ್ಲಿ ಮುಂಗಾರು ಮಳೆಯಂತೆ ಪವಿತ್ರಾತ್ಮನ ವರವು ಸುರಿದು ಹೇಗೆ ಪ್ರವಾದನೆಯು ನೆರವೇರಿತೋ, ಅದೇ ರೀತಿ ಸುವಾರ್ತೆಯ ಮುಕ್ತಾಯದಲ್ಲಿ ಹಿಂಗಾರು ಮಳೆಯು ಸುರಿದಾಗ, ಪ್ರವಾದನೆಯು ನೆರವೇರಲಿದೆ. ಕೊಕಾಘ 117.3

ದೇವರಿಗೆ ತಮ್ಮನ್ನು ಪರಿಶುದ್ಧರನ್ನಾಗಿ ಪ್ರತಿಷ್ಠಿಸಿಕೊಂಡು, ಮುಖಗಳು ಪ್ರಕಾಶಿಸುವ ದೇವರ ಸೇವಕರು, ಪರಲೋಕದಿಂದ ಬಂದ ಸಂದೇಶವನ್ನು ಸಾರಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕೆ ತ್ವರೆಯಾಗಿ ಹೋಗುವು. ಜಗತ್ತಿನಾದ್ಯಂತ ಸಾವಿರಾರು ಸ್ವರಗಳು ಈ ಎಚ್ಚರಿಕೆಯ ಸಂದೇಶ ನೀಡುವವು. ರೋಗಿಗಳು ಗುಣಹೊಂದುವರು. ಅದ್ಭುತಗಳು ನಡೆಯುವವು ಹಾಗೂ ವಿಶ್ವಾಸಿಗಳು ಸೂಚಕ ಕಾರ್ಯಗಳನ್ನು ಮಾಡುವರು (ಗ್ರೇಟ್ ಕಾಂಟ್ರೊವರ್ಸಿ, ಪುಟಗಳು 611, 612, 1911). ಕೊಕಾಘ 117.4