Go to full page →

ಅನೇಕ ಅಡ್ವೆಂಟಿಸ್ಟರು ಬೆಳಕಿಗೆ ವಿರುದ್ಧವಾಗಿ ನಡೆದುಕೊಳ್ಳುವರು ಕೊಕಾಘ 121

ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಗಳಲ್ಲಿ ದೇವರ ಮಹಾಶಕ್ತಿಯು ಅದ್ಭುತ ರೀತಿಯಲ್ಲಿ ಕಂಡುಬರುವುದು. ಆದರೆ ತಮ್ಮ ಪಾಪಗಳಿಗೆ ಪಶ್ಚಾತ್ತಾಪಟ್ಟು ಅವುಗಳನ್ನು ದೇವರ ಮುಂದೆ ಅರಿಕೆ ಮಾಡಿಕೊಳ್ಳದ ಹಾಗೂ ತಮ್ಮ ಹೃದಯಗಳನ್ನು ಆತನಿಗೆ ಒಪ್ಪಿಸಿ ತಮ್ಮನ್ನು ತಗ್ಗಿಸಿಕೊಳ್ಳದವರಿಗೆ, ಇದು ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ದೇವರ ಮಹಿಮೆಯಿಂದ ಲೋಕವನ್ನು ಪ್ರಕಾಶಗೊಳಿಸುವ ದೇವರ ಈ ಮಹಾಶಕ್ತಿಯು ಆತೀಕವಾಗಿ ಕುರುಡರಾಗಿರುವವರಿಗೆ ಇದು ಅಪಾಯಕಾರಿಯಾಗಿದೆ. ತಮ್ಮಲ್ಲಿ ಭಯಹುಟ್ಟಿಸುವಂತದೆಂದು ತಿಳಿದುಕೊಂಡು ಅದನ್ನು ವಿರೋಧಿಸಲು ಅವರು ದೃಢವಾಗಿ ನಿರ್ಧರಿಸುವರು. ದೇವರು ಅವರ ಯೋಜನೆ ಹಾಗೂ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯ ಮಾಡದಿರುವುದರಿಂದ ಅವರು ಆತನ ಅದ್ಭುತಗಳನ್ನು ವಿರೋಧಿಸುವರು. “ಇದೊಂದು ವರ್ಷಗಳ ಕಾಲ ಸೇವೆ ಮಾಡಿದ ನಮಗೆ ದೇವರಾತ್ಮನು ಯಾಕೆ ನಮಗೆ ತಿಳಿದಿಲ್ಲವೋ?” ಎಂದು ಅವರು ಪ್ರಶ್ನಿಸುವರು (ರಿವ್ಯೂ ಅಂಡ್ ಹೆರಾಲ್ಡ್, ಡಿಸೆಂಬರ್ 23, 1890). ಕೊಕಾಘ 121.2

ಲೋಕವನ್ನು ದೇವರ ಮಹಿಮೆಯಿಂದ ಪ್ರಕಾಶಗೊಳಿಸುವ ಬೆಳಕಿನಲ್ಲಿ ನಡೆಯಲು ನಿರಾಕರಿಸುವವರು ಇದನ್ನು ಮೋಸ ಬೆಳಕೆಂದು ತಿರಸ್ಕರಿಸುವರು ಹಾಗೂ ಅವರು ಮೂರನೇ ದೂತನ ಸಂದೇಶವನ್ನು ಗ್ರಹಿಸಿಕೊಳ್ಳಲಾರರು (ರಿವ್ಯೂ ಅಂಡ್ ಹೆರಾಲ್ಡ್ ಮೇ 27, 1890). ಕೊಕಾಘ 121.3