Go to full page →

ಹಣದ ವಿಷಯದಲ್ಲಿ ಗಂಡ ಹೆಂಡತಿಯರಿಗೆ ಹಿತವಚನಗಳು KanCCh 182

ಆದಾಯ ಮತ್ತು ವೆಚ್ಚದ ಲೆಕ್ಕ ಇಡಬೇಕು. ಇದೇನು ಮುಖ್ಯವಲ್ಲವೆಂಬ ಅಭಿಪ್ರಾಯ ತಪ್ಪು ಗಳಿಸಿದ ಹಣವನ್ನು ವಿವೇಕದಿಂದಲೂ, ಮಿತವ್ಯಯದಿಂದಲೂ ಖರ್ಚು ಮಾಡಿದಾಗ, ಕಾಯಿಲೆ ಮುಂತಾದ ತುರ್ತು ಸ್ಥಿತಿಯಲ್ಲಿ ಉಳಿಸಿದ ಹಣ ಪ್ರಯೋಜನಕ್ಕೆ ಬರುತ್ತದೆ. ಗಂಡಹೆಂಡತಿಯರು ಪರಸ್ಪರ ಸಹಾಯ ಮಾಡಬೇಕು. ಗಂಡನು ಹೆಂಡತಿಗೆ ಹಣ. ಕೊಡುವ ವಿಷಯದಲ್ಲಿ ಜಿಪುಣತನ ತೋರಿಸಬಾರದು. ಹೆಂಡತಿಯು ಗಂಡನ ಕೊಟ್ಟ ಹಣದಲ್ಲಿ ತನಗೆ ಅಗತ್ಯವಾದದ್ದನ್ನು ಕೊಂಡುಕೊಳ್ಳಲಿ. ಪತ್ನಿಯು ವ್ಯವಹಾರದಲ್ಲಿ ಉತ್ತಮವಾದ ಸಮಚಿತ್ತದ ಮನಸ್ಸು ಹೊಂದಿರುತ್ತಾಳೆಂಬುದು ಗಂಡನಿಗೆ ತಿಳಿದಿರಲಿ. KanCCh 182.3

*****