Go to full page →

ದೇವರ ಸೇವೆಗೆ ಪ್ರಥಮ ಸ್ಥಾನ ಕೊಡಬೇಕು KanCCh 184

ರಜಾದಿನಗಳಲ್ಲಿ ದೇವರು ನಮಗೆ ಹಿಂದೆ ಮಾಡಿದ ಆಶೀರ್ವಾದಗಳನ್ನು ನೆನಪಿಗೆ ತಂದುಕೊಳ್ಳುವುದು ಒಳ್ಳೆಯದಲ್ಲ? ನಾವು ದೇವರನ್ನು ಮರೆಯದಂತೆ ಆತನು ಕೊಟ್ಟ ಎಚ್ಚರಿಕೆಗಳನ್ನು ನೆನಪಿಸಿಕೊಳ್ಳುವುದು ಉತ್ತಮವಲ್ಲವೇ? ಲೌಕಿಕವಾದ ಜನರಿಗೆ ಸಾಕಷ್ಟು ರಜೆಗಳು ದೊರೆಯುತ್ತವೆ. ಅವರು ಆ ದಿನಗಳಲ್ಲಿ ಕುದುರೆ ಜೂಜು, ಇಸ್ಪೀಟ್ ಆಡುವುದು ಮತ್ತು ಕುಡಿದು ತಿಂದು ಧೂಮಪಾನ ಮಾಡುವುದರಲ್ಲಿ ಕಳೆಯುತ್ತಾರೆ. KanCCh 184.1

ದೇವರ ಮಕ್ಕಳು ಆಗಾಗ ಪರಿಶುದ್ಧವಾದ ಆಲೋಚನಾ ಸಭೆ/ ಗೋಷ್ಠಿಗಳನ್ನು ನಡೆಸಿ, ದೇವರು ಸುರಿಸಿದ ಧಾರಾಳವಾದ ಆಶೀರ್ವಾದಕ್ಕಾಗಿ ಕೃತಜ್ಞತೆ ಸಲ್ಲಿಸಬೇಕಲ್ಲವೇ? ನಮ್ಮ ಸಭೆಯ ಯುವಕ ಯುವತಿಯರನ್ನು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿ ಮಾನವರ ಕಷ್ಟ ದುಃಖಗಳಲ್ಲಿ ಭಾಗಿಯಾಗಿ ಅವರ ನೋವನ್ನು ಕಡಿಮೆ ಮಾಡುವಂತಹ ಮತ್ತು ಎಲ್ಲರ ರಕ್ಷಣೆಗಾಗಿ ಸೇವೆ ಮಾಡುವಂತಹ ಸಾಮರ್ಥ್ಯವುಳ್ಳ ಜನರು ಸಭೆಯಲ್ಲಿ ನಮಗೆ ಬೇಕಾಗಿದ್ದಾರೆ. ನಮ್ಮ ಕುಟುಂಬದ ನಿರ್ವಹಣೆಗೆ ಹೊರಗೆ ದುಡಿಯಬೇಕಾಗಿರುವುದರಿಂದ, ಸಂಪೂರ್ಣವಾದ ಸಮಯವನ್ನು ದೇವರ ಸೇವೆಯಲ್ಲಿ ಉಪಯೋಗಿಸಲು ಎಲ್ಲರಿಗೂ ಸಾಧ್ಯವಾಗದು. ಆದಾಗ್ಯೂ ರಜಾದಿನಗಳು ದೊರೆತಾಗ, ಆ ಸಮಯವನ್ನು ಕ್ರೈಸ್ತ ಸೇವೆಗೆ ಮೀಸಲಾಗಿಟ್ಟು ಒಳ್ಳೆಯದನ್ನು ಮಾಡಬೇಕಾಗಿದೆ. KanCCh 184.2

ರಜಾದಿನಗಳು ನಮ್ಮ ಮಕ್ಕಳಿಗೆ ಮಾತ್ರವಲ್ಲದೆ, ಬಡವರಿಗೆ ಮತ್ತು ಬಾಧೆಗೊಳಗಾದವರಿಗೂ ಸಹ ಸಂತೋಷದ ದಿನವಾಗಿರುವಂತೆ ನೀವು ಮಾಡಬೇಕು. ಕ್ರಿಸ್ತನಿಗೆ ಕೃತಜ್ಞತೆ ಸಲ್ಲಿಸಿ ಕಾಣಿಕೆ ಅರ್ಪಿಸುವುದನ್ನು ಆ ದಿನದಲ್ಲಿ ಮರೆಯಬಾರದು. KanCCh 184.3