Go to full page →

ಅಧ್ಯಾಯ-33 — ಉಡುಪಿಗೆಸಂಬಂಧಪಟ್ಟಂತೆಹಿತವಚನಗಳು KanCCh 212

ಇತರೆಲ್ಲಾ ವಿಷಯಗಳಂತೆ, ನಾವು ಧರಿಸುವ ಉಡುಪಿನಲ್ಲಿಯೂ ದೇವರಿಗೆ ಗೌರವ ಸಲ್ಲಿಸುವುದು ನಮ್ಮ ಸದವಕಾಶವಾಗಿದೆ. ನಮ್ಮ ಉಡುಪು ಆರೋಗ್ಯಕರವೂ, ಅಚ್ಚುಕಟ್ಟಾಗಿ ಸರಳವಾಗಿಯೂ, ಯೋಗ್ಯವಾಗಿಯೂ ಹಾಗೂ ಗೌರವ ತರುವಂತದ್ದಾಗಿಯೂ ಇರಬೇಕು. KanCCh 212.1

ನಾವು ಸಾಧ್ಯವಾದಷ್ಟು ಅಂದವಾಗಿ ಕಾಣುವುದಕ್ಕೆ ಪ್ರಯತ್ನಪಡಬೇಕು. ಇಸ್ರಾಯೇಲ್ಯರಕಾಲದಲ್ಲಿ ದೇವದರ್ಶನಗುಡಾರದ ಸೇವೆಮಾಡುತ್ತಿದ್ದ ಯಾಜಕರು ಎಂತಹ ಉಡುಪು ಧರಿಸಬೇಕೆಂದು ದೇವರು ಪ್ರತಿಯೊಂದು ವಿಷಯವನ್ನು ವಿವರವಾಗಿ ತಿಳಿಸಿದ್ದನು. ಆದುದರಿಂದ ಆತನ ಸೇವೆ ಮಾಡುವವರು ಎಂತಹ ಉಡುಪು ಧರಿಸಬೇಕೆಂದು ನಮಗೆ ತಿಳಿಸಲಾಗಿದೆ. ಮಹಾಯಾಜಕನಾದ ಆರೋನನವಸ್ತ್ರಗಳು ಸಾಂಕೇತಿಕವಾಗಿದ್ದರೂ, ಅದರ ಬಗ್ಗೆ ದೇವರು ನಿರ್ದಿಷ್ಟವಾದ ಸೂಚನೆಗಳನ್ನು ಕೊಟ್ಟಿದ್ದನು. ಈ ಕಾರಣದಿಂದ ಕ್ರಿಸ್ತನ ಅನುಯಾಯಿಗಳ ಉಡುಪೂ ಸಹ ಸಾಂಕೇತಿಕವಾಗಿರಬೇಕು. ಎಲ್ಲಾ ವಿಷಯಗಳಲ್ಲಿಯೂ ನಾವು ಆತನ ಪ್ರತಿನಿಧಿಗಳಾಗಿರಬೇಕು. ನಮ್ಮ ವೇಷ ಭೂಷಣವು ಎಲ್ಲಾ ವಿಧದಲ್ಲಿಯೂ ಯೋಗ್ಯವಾಗಿ ಒಪ್ಪುವಂತೆಯೂ, ಆಡಂಬರವಿಲ್ಲದೆಯೂ ಮತ್ತು ಶುದ್ಧವಾಗಿಯೂ ಇರಬೇಕು. KanCCh 212.2

ನಿಸರ್ಗದಲ್ಲಿರುವ ಹೂಗಳು ಮುಂತಾದವುಗಳ ಮೂಲಕ ದೇವರು ಪರಲೋಕವು ಪರಿಗಣಿಸುವ ಸೌಂದರ್ಯದ ಬಗ್ಗೆ ಕ್ರಿಸ್ತನು ವಿವರಿಸಿದ್ದಾನೆ. ನಿರಾಡಂಬರದ ಅಲಂಕಾರ, ಸರಳತೆ, ಶುಭ್ರತೆ, ಯೋಗ್ಯವಾಗಿ ಒಪ್ಪುವಂತ ಉಡುಪು ಆತನಿಗೆ ಮೆಚ್ಚುಗೆಯಾಗುತ್ತದೆ. KanCCh 212.3