Go to full page →

ಮಕ್ಕಳೊಂದಿಗೆ ಪ್ರಾಮಾಣಿಕತೆ ತೋರಿಸುವುದರ ಪ್ರಾಮುಖ್ಯತೆ KanCCh 239

ತಂದೆ ತಾಯಿಯರು ಸತ್ಯ ಹೇಳುವುದರಲ್ಲಿ, ಪ್ರಾಮಾಣಿಕತೆ ತೋರಿಸುವುದರಲ್ಲಿ ತಮ್ಮ ಮಕ್ಕಳಿಗೆ ಮಾದರಿಯಾಗಿರಬೇಕು. ಇದು ಮಕ್ಕಳ ಮನಸ್ಸಿನಲ್ಲಿ ಪರಿಣಾಮ ಬೀರುವಂತ ದಿನನಿತ್ಯದ ಪಾಠವಾಗಿರಬೇಕು. ತಂದೆತಾಯಿಯರು ತಮ್ಮ ಜೀವನದಾದ್ಯಂತ ಸಿದ್ಧಾಂತಗಳಿಗೆ ಬದ್ಧವಾಗಿ ನಡೆದುಕೊಳ್ಳಬೇಕು. ಅದರಲ್ಲಿಯೂ ವಿಶೇಷವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಾಗ, ಅವರ ತಪ್ಪು ನಡತೆಗಳನ್ನು ಸರಿಪಡಿಸುವಾಗ ಉತ್ತಮವಾದ ತತ್ವಗಳನ್ನು ಅನುಸರಿಸಬೇಕು. ಇದರಿಂದ ಮಕ್ಕಳೂ ಸಹ ತಮ್ಮ ಕಾರ್ಯಗಳು ಸರಿಯಾಗಿವೆಯೋ ಎಂದು ತಿಳಿದುಕೊಳ್ಳುವರು. KanCCh 239.3

para missing here end of page 263/239 pdf ಸಹಜವಾಗಿ ಸುಳ್ಳಾಡುವುದನ್ನು ಕಲಿಯುತ್ತಾರೆ. ಪ್ರಾಮಾಣಿಕತೆಗೆ ಬದಲಾಗಿ ತೋರಿಕೆಯನ್ನು ಅವರು ಬೆಳೆಸಿಕೊಳ್ಳುತ್ತಾರೆ. ತಂದೆ ತಾಯಿಯರು ಎಂದೂ ಸಹ ನುಣುಚಿಕೊಳ್ಳುವಂತೆ ಮಾತಾಡಬಾರದು ಮತ್ತು ಎಂದೂ ಸಹ ಸುಳ್ಳನ್ನು ಉದಾಹರಣೆಯಾಗಿ ಕೊಡಬಾರದು. ನಿಮ್ಮ ಮಕ್ಕಳು ಸತ್ಯವಂತರಾಗಿರಬೇಕೆಂದು ನೀವು ಬಯಸಿದಲ್ಲಿ, ಮೊದಲು ನೀವು ಪ್ರಾಮಾಣಿಕರಾಗಿರಬೇಕು, ಏನು ಹೇಳಬೇಕಾದರೂ ನೇರವಾಗಿ ತಿಳಿಸಬೇಕು. ಯಾವುದೇ ಕಾರಣದಿಂದಲೂ ಸ್ವಲ್ಪವಾದರೂ ನುಣುಚಿಕೊಳ್ಳುವಂತೆ ಮಾತಾಡಬಾರದು. ಸಾಮಾನ್ಯವಾಗಿ ತಾಯಂದಿರು ಈ ರೀತಿ ಮಾತಾಡುವುದರಿಂದಲೂ ಹಾಗೂ ಸುಳ್ಳು ಹೇಳುವುದರಿಂದಲೂ ಮಕ್ಕಳು ಆಕೆಯ ಉದಾಹರಣೆಯನ್ನು ಅನುಸರಿಸುತ್ತಾರೆ. ತಾಯಿ ತನ್ನ ಜೀವನದಲ್ಲಿ ಯಾವಾಗಲೂ ಸಹ ಪ್ರಾಮಾಣಿಕಳಾಗಿ ನಡೆಯುವುದು ಅಗತ್ಯ. ಅಲ್ಲದೆ ಹೆಣ್ಣುಗಂಡು ಮಕ್ಕಳು ಎಂದೂ ಸಹ ನುಣುಚಿಕೊಳ್ಳುವಂತೆ ಮಾತಾಡದಂತೆ ಅಥವಾ ಮೋಸ ಮಾಡದಂತೆ ಚಿಕ್ಕಂದಿನಲ್ಲಿಯೇ ತರಬೇತಿನೀಡುವುದು ತಾಯಿಯ ಪ್ರಾಮುಖ್ಯವಾದ ಕರ್ತವ್ಯವಾಗಿದೆ. KanCCh 239.4