Go to full page →

ಮಾನವರ ಆಹಾರದ ಬಗ್ಗೆ ದೇವರ ಮೂಲ ಯೋಜನೆ KanCCh 274

ಅತ್ಯುತ್ತಮ ಆಹಾರಗಳು ಯಾವುದೆಂದು ಅರಿಯಲು, ನಾವು ಮಾನವರ ಆಹಾರದವಿಷಯದಲ್ಲಿ ದೇವರ ಮೂಲಯೋಜನೆ ಏನಿತ್ತೆಂಬುದನ್ನು ಅಧ್ಯಯನ ಮಾಡಬೇಕು.ಮಾನವರ ಸೃಷ್ಟಿಕರ್ತನೂ, ಅವರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವವನೂ ಆದದೇವರು ಆದಾಮನು ಯಾವ ಆಹಾರ ಪದಾರ್ಥ ತಿನ್ನಬೇಕೆಂದು ನೇಮಿಸಿದನು.“ಮತ್ತು ದೇವರು ಇಗೋ ಸಮಸ್ತ ಭೂಮಿಯ ಮೇಲೆ ಬೀಜವುಳ್ಳ ಎಲ್ಲಾ ಪೈರುಗಳನ್ನೂ,ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ” ಎಂದುಹೇಳಿದನು (ಆದಿಕಾಂಡ 1:29), ಆದಾಮನು ಪಾಪಮಾಡಿದ ನಂತರ ಅದರ ಶಾಪದಪರಿಣಾಮವಾಗಿ ಅವನು ತನ್ನ ಜೀವನಾಧಾರಕ್ಕಾಗಿ ಭೂಮಿಯನ್ನು ವ್ಯವಸಾಯಮಾಡಬೇಕಾಯಿತು. ಆಗ ದೇವರು ಆದಾಮನಿಗೆ “.... ನಿನ್ನ ಜೀವಮಾನವೆಲ್ಲಾ ದುಡಿದು,ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು” ಎಂದು ಅನುಮತಿ ನೀಡಿದನು. KanCCh 274.1

ನಮ್ಮ ಸೃಷ್ಟಿಕರ್ತನಾದ ದೇವರು ದವಸ ಧಾನ್ಯಗಳು, ಹಣ್ಣು ತರಕಾರಿ ಹಾಗೂಬೀಜಗಳನ್ನು ನಮಗೆ ಆಹಾರವಾಗಿರಬೇಕೆಂದು ತಾನೇ ಆರಿಸಿಕೊಟ್ಟನು. ಈಆಹಾರಪದಾರ್ಥಗಳನ್ನು ಸಹಜವಾಗಿಯೂ, ಸರಳವಾಗಿಯೂ ಸಿದ್ಧ ಮಾಡಿ ತಿನ್ನುವುದುಬಹಳ ಆರೋಗ್ಯಕರವೂ, ಪೋಷಕವೂ ಆಗಿವೆ. ಇವು ಹೆಚ್ಚಿನ ವೈವಿಧ್ಯವುಳ್ಳ,ಪ್ರಚೋದನಕಾರಿಯಾದ ಆಹಾರಕ್ಕಿಂತಲೂ ಹೆಚ್ಚಿನ ಶಕ್ತಿ, ದೀರ್ಘಕಾಲ ಆಯಾಸವನ್ನುತಡೆದುಕೊಳ್ಳುವ ಸಾಮರ್ಥ್ಯ, ಸಹನೆ ಹಾಗೂ ಬೌದ್ಧಿಕ ಚೈತನ್ಯನೀಡುತ್ತದೆ. ಉತ್ತಮಆರೋಗ್ಯಬೇಕಾದಲ್ಲಿ, ಉತ್ತಮ ಪೋಷಕಾಂಶವುಳ್ಳ ಆಹಾರದ ಅಗತ್ಯವಿದೆ. KanCCh 274.2

ವಿವೇಕತನದಿಂದ ಯೋಜನೆ ಹಾಕಿಕೊಂಡಲ್ಲಿ, ಆರೋಗ್ಯಕ್ಕೆ ಉತ್ತಮವಾದ ಆಹಾರವುಜಗತ್ತಿನೆಲ್ಲೆಡೆ ದೊರೆಯುತ್ತದೆ. ಅಕ್ಕಿ, ಗೋಧಿ, ಬಾರ್ಲಿ, ಮುಸುಕಿನ ಜೋಳ, ಓಟ್ಸ್‌ನಿಂದತಯಾರಿಸಿದ ಆಹಾರವಲ್ಲದೆ, ತರಕಾರಿ, ಸೊಪ್ಪುಗಳು, ಕಾಳುಗಳು ಎಲ್ಲೆಲ್ಲೂ ಹೇರಳವಾಗಿದೊರೆಯುತ್ತವೆ. ಇವುಗಳನ್ನೂ ಹಾಗೂ ಹಣ್ಣುಗಳನ್ನೂ ಉಪಯೋಗಿಸಿದಲ್ಲಿ ಮಾಂಸಾಹಾರಉಪಯೋಗಿಸುವ ಅಗತ್ಯವೇ ಇರುವುದಿಲ್ಲ. ಒಣಗಿದ ಹಣ್ಣುಗಳಾದ ಒಣದ್ರಾಕ್ಷಿ, ಪ್ಲಮ್ಸೇಬು, ಪೇರುಹಣ್ಣು (Pears) ಹಾಗೂ ಪೀಚ್ (ಕೆಂಪು ಮಿಶ್ರಿತ ಹಳದಿ ಅಥವಾಕೆನೆಬಣ್ಣದ Peaches), ಇವುಗಳು ಕೈಗೆಟಕುವ ಬೆಲೆಯಲ್ಲಿ ದೊರೆತಲ್ಲಿ, ಅದನ್ನುಸಾಕಷ್ಟು ಉಪಯೋಗಿಸುವುದರಿಂದ ಎಲ್ಲಾ ವರ್ಗಗಳ ಜನರಿಗೂ ಅತ್ಯುತ್ತಮ ಆರೋಗ್ಯಹಾಗೂ ಚೈತನ್ಯ ದೊರೆಯುತ್ತದೆ. KanCCh 274.3