Go to full page →

ಜನರಿಗೆ ತಿಳುವಳಿಕೆ ನೀಡಬೇಕು KanCCh 293

ಆರೋಗ್ಯ ಸುಧಾರಣಾ ತತ್ವಗಳ ವಿಷಯದಲ್ಲಿ ಜನರಿಗೆ ತಿಳುವಳಿಕೆ ನೀಡಲು ಹೆಚ್ಚಿನಪ್ರಯತ್ನ ಮಾಡಬೇಕು. ಆರೋಗ್ಯಕರವಾದ ಹಾಗೂ ಸರಳವಾದ ಆಹಾರ ತಯಾರಿಸುವುದರಬಗ್ಗೆ ಚಿಕ್ಕವರು, ದೊಡ್ಡವರೂ ಸೇರಿದಂತೆ ಎಲ್ಲರಿಗೂ ಶಿಕ್ಷಣ ನೀಡಬೇಕು. ಎಲ್ಲೆಲ್ಲಿಸುವಾರ್ತಾಸತ್ಯವನ್ನು ಸಾರಲಾಗುತ್ತದೋ, ಅಲ್ಲೆಲ್ಲಾ ಸರಳವಾದ ಆದರೆ ಮನಸ್ಸನ್ನುಆಕರ್ಷಿಸುವ ರೀತಿಯಲ್ಲಿ ಆಹಾರವನ್ನು ಹೇಗೆ ತಯಾರಿಸಬೇಕೆಂದು ಜನರಿಗೆ ತಿಳಿಹೇಳಬೇಕು.ಮಾಂಸಾಹಾರ ಸೇವಿಸದೆ ಸಸ್ಯಾಹಾರದಿಂದಲೇ ಹೇಗೆ ದೇಹಕ್ಕೆ ಅಗತ್ಯವಾದಪೋಷಕಾಂಶವನ್ನು ಪಡೆಯಬಹುದೆಂದು ಅವರಿಗೆ ಹೇಳಬೇಕು. KanCCh 293.2

ರೋಗ ಬಂದಮೇಲೆ ಗುಣಪಡಿಸುವುದಕ್ಕಿಂತ, ಅದು ಬಾರದಂತೆ ತಡೆಗಟ್ಟುವುದುಹೇಗೆ ಉತ್ತಮವೆಂದು ಜನರಿಗೆ ಶಿಕ್ಷಣ ನೀಡಬೇಕು. ಅಡ್ವೆಂಟಿಸ್ಟ್ ವೈದ್ಯರು ವಿವೇಕಶಾಲಿಗಳಾದಶಿಕ್ಷಣತಜ್ಞರೂ ಆಗಿರಬೇಕು. ಎಲ್ಲಾ ವಿಧವಾದ ಭೋಗಾಸಕ್ತಿ ಅಂದರೆ ಇಂದ್ರಿಯಗಳಬಯಕೆಗಳನ್ನು ಮನಸ್ಸು ಬಂದಂತೆ ಇತಿಮಿತಿಯಿಲ್ಲದೆ ತೃಪ್ತಿಪಡಿಸಿಕೊಳ್ಳದಿರುವುದು ಮತ್ತುದೇವರು ನಿಷೇಧಿಸಿರುವ ವಿಷಯಗಳಿಂದ ದೂರವಿರುವುದೇ ಶರೀರ ಹಾಗೂ ಮನಸ್ಸನ್ನುನಾಶ ಮಾಡಿಕೊಳ್ಳದಿರುವ ಏಕೈಕ ಮಾರ್ಗವಾಗಿದೆ ಎಂದು ವೈದ್ಯರು ಜನರಿಗೆ ಮನವರಿಕೆಮಾಡಿಸಬೇಕು. KanCCh 293.3

ಮಾಂಸಾಹಾರ ತ್ಯಜಿಸಿ ಆರೋಗ್ಯಸುಧಾರಣೆ ಮಾಡಿಕೊಳ್ಳುವವರು, ಪೋಷಕಾಂಶಭರಿತಸಸ್ಯಾಹಾರ ತಯಾರಿಸುವಲ್ಲಿ ಹೆಚ್ಚಿನ ಜಾಣ್ನೆ ಹಾಗೂ ವಿವೇಚನೆ ಹೊಂದಿರಬೇಕು.ದೇವರಲ್ಲಿ ನಂಬಿಕೆ, ಉದ್ದೇಶದಲ್ಲಿ ಪ್ರಾಮಾಣಿಕತೆ ಮತ್ತು ಒಬ್ಬರಿಗೊಬ್ಬರು ಸಹಾಯಮಾಡುವ ಇಚ್ಛೆ ಹೊಂದಿರಬೇಕು. ಶರೀರಕ್ಕೆ ಅಗತ್ಯವಾದ ಪೋಷಕಾಂಶವಿಲ್ಲದ ಆಹಾರಸೇವಿಸುವುದರಿಂದ ಪರಿಪೂರ್ಣ ಆರೋಗ್ಯ ದೊರೆಯದಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕೇ ಹೊರತು, ಆರೋಗ್ಯ ಸುಧಾರಣಾ ಸಿದ್ಧಾಂತಗಳೇ ಇದಕ್ಕೆ ಕಾರಣವೆಂದು ತಪ್ಪುಹೊರಿಸಬಾರದು. ನಾವು ಮನುಷ್ಯ ಮಾತ್ರದವರು. ಆದುದರಿಂದ ಶರೀರಕ್ಕೆ ಅಗತ್ಯವಾದಪರಿಪೂರ್ಣ ಪೋಷಕಾಂಶವುಳ್ಳ ಆಹಾರವನ್ನು ನಾವು ತೆಗೆದುಕೊಳ್ಳಬೇಕು. KanCCh 293.4