Go to full page →

ಆಗ ದೇವರು ಆಶೀರ್ವದಿಸುವನು KanCCh 296

ಮನಸ್ಸಿನ ಬಯಕೆಯಂತೆ ಇಂದ್ರಿಯಗಳನ್ನು ತೃಪ್ತಿಗೊಳಿಸುವಂತ ಭೋಗಾಸಕ್ತಿಯನ್ನುಪೂರೈಸಲು ತಮಗೆ ಮುಕ್ತ ಸ್ವಾತಂತ್ರವಿದೆ ಎಂದು ಭಾವಿಸುವ ಬೋಧಕರು, ಕ್ರಿಸ್ತನಸೇವೆ ಮಾಡಲು ಅನರ್ಹರಾಗಿದ್ದಾರೆ. ಅವರು ಮೊದಲು ಆರೋಗ್ಯಸುಧಾರಕರಾಗಿರಬೇಕೆಂದು ದೇವರು ಬಯಸುತ್ತಾನೆ. ಈ ವಿಷಯದಲ್ಲಿ ದೇವರುಶ್ರೀಮತಿವೈಟಮ್ಮನವರಿಗೆ ಕೊಟ್ಟಿರುವ ಬೆಳಕಿಗೆ ಅನುಗುಣವಾಗಿ ಅವರು ನಡೆಯಬೇಕೆಂಬುದುಆತನ ಇಚ್ಛೆ ಆರೋಗ್ಯದತತ್ವಗಳನ್ನು ಉತ್ಸಾಹದಿಂದ ಅನುಸರಿಸಿ, ಅದನ್ನು ಇತರರಿಗೆಸಾರಿಹೇಳಬೇಕಾಗಿರುವ ಈ ಬೋಧಕರ ಜೀವನಶೈಲಿ ತಪ್ಪಾಗಿದೆ. ತಾವು ಮುಂದೆದೊಡ್ಡ ನಷ್ಟ ಎದುರಿಸುತ್ತೇವೆಂದು ಅವರು ತಿಳಿದುಕೊಳ್ಳಬೇಕಾಗಿದೆ. ನಮ್ಮ ಸಭೆಗಳಲ್ಲಿರುವಸದಸ್ಯರು ಆರೋಗ್ಯದ ನಿಯಮಗಳನ್ನು ಪ್ರಾಮಾಣಿಕವಾಗಿ ಅನುಸರಿಸಿದಲ್ಲಿ, ಈಗ ಮಾಡುವುದಕ್ಕಿಂತಲೂ ಎರಡರಷ್ಟಾಗಿ ನಾವು ಕರ್ತನ ಸೇವೆಮಾಡಬಹುದು. KanCCh 296.1

ಸೆವೆಂತ್ ಡೇ ಅಡ್ವೆಂಟಿಸ್ಪರು ಪರಿಶುದ್ಧರಾಗುವುದಕ್ಕೂ ಹಾಗೂ ಪರಿಶುದ್ಧರಾಗಿಇರುವುದಕ್ಕೂ ಅವರ ಹೃದಯಗಳಲ್ಲಿ ಮತ್ತು ಕುಟುಂಬಗಳಲ್ಲಿ ಪವಿತ್ರಾತ್ಮನು ವಾಸಮಾಡಬೇಕಾಗಿದೆ. ಆತ್ಮೀಕ ಇಸ್ರಾಯೇಲ್ಯರಾದ ನಾವು ದೇವರಿಗೆ ವಿನಮ್ರವಾಗಿ ನಡೆದುದೇವರ ಗರ್ಭಗುಡಿಯಾಗಿರುವ ನಮ್ಮ ದೇಹಗಳನ್ನು ಎಲ್ಲಾ ವಿಧವಾದ ಅಶುದ್ಧತೆಯಿಂದಶುದ್ದೀಕರಿಸಿಕೊಂಡಲ್ಲಿ, ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿ ಆಶೀರ್ವದಿಸುವನುಹಾಗೂ ರೋಗಿಗಳಿಗಾಗಿ ನಾವು ಪ್ರಾರ್ಥನೆ ಮಾಡಿದಾಗ ಅವರಿಗೆ ಗುಣವಾಗುವುದೆಂದುಶ್ರೀಮತಿ ವೈಟಮ್ಮನವರಿಗೆ ದೇವರು ದರ್ಶನದಲ್ಲಿ ತಿಳಿಸಿದ್ದಾನೆ. ಮಾನವರಾದ ನಾವುನಂಬಿಕೆಯಿಂದ ದೇವರು ಕೊಟ್ಟಿರುವ ಸರಳವಾದ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದಲ್ಲಿ,ರೋಗಗಳು ವಾಸಿಯಾಗುವುದಲ್ಲದೆ, ಆತನು ಅವರ ಪ್ರಯತ್ನಗಳನ್ನು ಆಶೀರ್ವದಿಸುವನು. KanCCh 296.2

ದೇವರ ಮಕ್ಕಳಾದ ನಮಗೆ ಆರೋಗ್ಯದ ವಿಷಯದಲ್ಲಿ ಪ್ರವಾದಿಯ ಮೂಲಕ KanCCh 296.3

ಇಷ್ಟೆಲ್ಲಾ ಬೆಳಕು ಕೊಡಲ್ಪಟ್ಟಿದೆ. ಆದರೆ ಅವರು ತಮ್ಮ ಕೆಟ್ಟ ಅಭ್ಯಾಸಗಳಲ್ಲಿ ಮುಳುಗಿ,ಲೌಕಿಕ ಆಶಾಪಾಶಗಳನ್ನು ಬಿಡಲು ನಿರಾಕರಿಸಿದಲ್ಲಿ, ಆರೋಗ್ಯದ ನಿಯಮಗಳಉಲ್ಲಂಘನೆಯ ಹಾನಿಕರ ಪರಿಣಾಮಗಳನ್ನು ಅವರು ಖಂಡಿತವಾಗಿಯೂಅನುಭವಿಸುವರು. ಎಂತಹ ಬೆಲೆತೆತ್ತಾದರೂ, ತಮ್ಮ ಭೋಗಾಸಕ್ತಿಯನ್ನು ತೃಪ್ತಿಪಡಿಸಿಕೊಳ್ಳಬೇಕೆಂದು ನಿರ್ಧರಿಸಿದಲ್ಲಿ, ಅದರಿಂದಾಗುವ ಹಾನಿಕರ ಪರಿಣಾಮಗಳಿಂದದೇವರು ಅವರನ್ನು ಅದ್ಭುತವಾದ ರೀತಿಯಲ್ಲಿ ಪಾರು ಮಾಡುವುದಿಲ್ಲ. “ಅವರು ದುಃಖಕ್ಕೆ ಒಳಗಾಗಿ ಸಾಯುವರು” (ಯೆಶಾಯ 50:11). KanCCh 296.4

ಅಯ್ಯೋ, ತಮ್ಮ ಕೆಟ್ಟ ಅಭ್ಯಾಸಗಳ ನಿಮಿತ್ತ ಎಷ್ಟೊಂದು ಜನರು ಆರೋಗ್ಯ ಮತ್ತು ಆತ್ಮೀಕ ವಿಷಯಗಳಲ್ಲಿ ದೇವರ ಹೇರಳವಾದ ಆಶೀರ್ವಾದಗಳನ್ನು ಕಳೆದುಕೊಳ್ಳುತ್ತಿದ್ದಾರಲ್ಲಾ!ತಾವು ಮಹಾಸಾಧನೆ ಮಾಡಬೇಕೆಂಬ ಉದ್ದೇಶದಿಂದ ಅನೇಕರು ವಿಶೇಷವಾದ ಜಯಹಾಗೂ ಆಶೀರ್ವಾದಗಳಿಗಾಗಿ ಕಣ್ಣೀರಿಟ್ಟು ಪ್ರಾರ್ಥಿಸುತ್ತಿದ್ದಾರೆ. ಅಂತವರು ಸತ್ಯವೇದದಮೂಲಕ ದೇವರು ವ್ಯಕ್ತಪಡಿಸಿರುವ ಚಿತ್ತವೇನೆಂದು ತಿಳಿದುಕೊಂಡಲ್ಲಿ, ಆಗ ಅವರುಯಾವುದೇ ಹಿಂಜರಿಕೆಯಿಲ್ಲದೆ ಆತನ ಚಿತ್ತವನ್ನು ಅನುಸರಿಸಿ ವಿಶ್ರಾಂತಿಹೊಂದುವರು.ಎಲ್ಲಾ ವಿಧವಾದ ವೇದನೆ, ಕಣ್ಣೀರು, ಹೋರಾಟಗಳು ಅವರು ಬಯಸುತ್ತಿರುವ ಆಶೀರ್ವಾದತರುವುದಿಲ್ಲ. ಮೊದಲು ಅವರು ಸ್ವಾರ್ಥತ್ಯಾಗ ಮಾಡಬೇಕು. ತಮ್ಮ ಕರ್ತವ್ಯಗಳನ್ನುಪ್ರಾಮಾಣಿಕವಾಗಿ ಮಾಡಿದಾಗ, ನಂಬಿಕೆಯಿಂದ ಬೇಡಿಕೊಳ್ಳುವವರಿಗೆ ದೇವರು ವಾಗ್ದಾನಮಾಡಿರುವ ಕೃಪೆಯನ್ನು ಹೇರಳವಾಗಿ ದಯಪಾಲಿಸುವನು. KanCCh 296.5

“ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನುನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲು ಹೊತ್ತುಕೊಂಡು ನನ್ನಹಿಂದೆ ಬರಲಿ” ಎಂದುಕ್ರಿಸ್ತನು ಹೇಳುತ್ತಾನೆ (ಲೂಕ 9:23) ಕ್ರಿಸ್ತನಂತೆಯೇ ನಾವೂ ಸಹ ಸ್ವಾರ್ಥಬಿಟ್ಟು ಸರಳತೆಯಿಂದಆತನನ್ನು ಹಿಂಬಾಲಿಸಬೇಕು. ನಮ್ಮ ಮಾತುಗಳಿಂದ ಹಾಗೂ ಪರಿಶುದ್ಧ ಜೀವಿತದಿಂದಕ್ರಿಸ್ತನನ್ನು ಮಹಿಮೆ ಪಡಿಸೋಣ. ದೇವರಿಗೆ ತಮ್ಮನ್ನು ಪ್ರತಿಷ್ಟಿಸಿಕೊಂಡವರಿಗೆ ಕ್ರಿಸ್ತನುಹತ್ತಿರವಾಗಿದ್ದಾನೆ. ನಮ್ಮ ಹೃದಯ ಹಾಗೂ ಜೀವಿತದಲ್ಲಿ ಪವಿತ್ರಾತ್ಮನುಕಾರ್ಯಮಾಡಬೇಕಾದ ಸುಸಂದರ್ಭವು ಇಂದೇಆಗಿದೆ. ಸ್ವಾರ್ಥತ್ಯಾಗ ಮತ್ತುಪರಿಶುದ್ಧಜೀವನ ನಡೆಸಲು ಬೇಕಾದ ದೈವೀಕ ಬಲಕ್ಕಾಗಿ ನಾವು ದೇವರ ಮೇಲೆಸಂಪೂರ್ಣವಾಗಿ ಆತುಕೊಳ್ಳಬೇಕಾಗಿದೆ.. KanCCh 297.1

*****