Go to full page →

ಪರಲೋಕದ ಸಭೆಯೊಂದಿಗೆ ಒಂದಾಗಿರುವುದು KanCCh 299

ಈ ಲೋಕದಲ್ಲಿರುವ ದೇವರಸಭೆಯು ಪರಲೋಕದಲ್ಲಿರುವ ದೇವರ ಸಭೆಯೊಂದಿಗೆಒಂದಾಗಿದೆ. ಇಲ್ಲಿರುವ ಕ್ರೈಸ್ತವಿಶ್ವಾಸಿಗಳು ಮತ್ತು ಪರಲೋಕದಲ್ಲಿರುವ ಎಂದಿಗೂಪಾಪಮಾಡದ ದೇವದೂತರು ಒಂದು ಸಭೆಗೆ ಸೇರಿದ್ದಾರೆ. ಪರಲೋಕದಲ್ಲಿರುವ ಪ್ರತಿಯೊಬ್ಬದೇವದೂತನೂ ಸಹ ಇಲ್ಲಿ ದೇವಾರಾಧನೆಗಾಗಿ ಸೇರುವ ಭಕ್ತರ ಕೂಟದಲ್ಲಿ ಆಸಕ್ತಿವಹಿಸಿದ್ದಾನೆ. ಈ ಲೋಕದಲ್ಲಿ ಕ್ರಿಸ್ತನಸಾಕ್ಷಿಗಳು ನೀಡುವ ಹೇಳಿಕೆಗಳನ್ನು ದೇವದೂತರುಪರಲೋಕದಲ್ಲಿ ಕೇಳುತ್ತಾರೆ. ಈ ಲೋಕದ ದೇವಾರಾಧಕರು ಮಾಡುವ ಸ್ತುತಿ ಸ್ತೋತ್ರಹಾಗೂ ಕೃತಜ್ಞತೆಗಳನ್ನು ಅವರು ಪರಲೋಕದ ಹರ್ಷಗೀತೆಯೊಂದಿಗೆ ಸೇರಿ ಹಾಡುತ್ತಾರೆ.ಹಾಗೂ ಕ್ರಿಸ್ತನು ಪಾಪಿಗಳಾದ ಆದಾಮನ ಸಂತಾನದವರನ್ನು ತನ್ನ ಮರಣದ ಮೂಲಕರಕ್ಷಿಸಿದ್ದಕ್ಕಾಗಿ ಈ ಸ್ತುತಿಗೀತೆ, ಕೊಂಡಾಟದ ಉಲ್ಲಾಸವು ಪರಲೋಕದಾದ್ಯಂತ ಪ್ರತಿಧ್ವನಿಸುತ್ತದೆ. KanCCh 299.1

ಓ! ಪರಲೋಕವು ನಮ್ಮ ಭೂಲೋಕಕ್ಕೆ ಎಷ್ಟೊಂದು ಹತ್ತಿರವಾಗಿದೆ ಎಂದು ನಾವೆಲ್ಲರೂಮನವರಿಕೆ ಮಾಡಿಕೊಳ್ಳಬೇಕಲ್ಲವೇ! ನಾವು ಇದನ್ನು ತಿಳಿದುಕೊಂಡಲ್ಲಿ, ದೇವದೂತರುನಮ್ಮ ಸಂಗಾತಿಗಳಾಗಿರುತ್ತಾರೆ. ನಮ್ಮಲ್ಲಿ ಪ್ರತಿಯೊಬ್ಬರನ್ನು ಅವರು ಮೌನವಾಗಿ ರಕ್ಷಿಸುತ್ತಾ,ಕ್ರಿಸ್ತನೆಡೆಗೆ ಸೆಳೆಯಲು ಪ್ರಯತ್ನಿಸುತ್ತಾರೆ. ಎಲ್ಲಿಯವರೆಗೆ ನಿರೀಕ್ಷೆ ಇರುವುದೋ, ಮನುಷ್ಯರುಪವಿತ್ರಾತ್ಮನನ್ನು ತಿರಸ್ಕರಿಸುವುದಿಲ್ಲವೋ ಅಲ್ಲಿಯವರೆಗೆ ಅವರು ದೇವದೂತರಿಂದರಕ್ಷಿಸಲ್ಪಡುವರು. ದೇವಭಕ್ತರು ಆರಾಧನೆಗಾಗಿ ಸೇರುವ ಪ್ರತಿಯೊಂದು ಸಮಯದಲ್ಲಿಯೂದೇವದೂತರು ಇರುತ್ತಾರೆ ಹಾಗೂ ನಮ್ಮ ಸಾಕ್ಷಿ, ಪ್ರಾರ್ಥನೆ ಮತ್ತು ಹಾಡುಗಳನ್ನುಕೇಳುತ್ತಾರೆಂಬುದನ್ನು ನಾವು ಪ್ರತಿಯೊಬ್ಬರು ಮನಸ್ಸಿನಲ್ಲಿಡಬೇಕು. ನಾವು ಹಾಡುಗಳಮೂಲಕ ಸಭೆಯಲ್ಲಿ ದೇವರನ್ನು ಸ್ತುತಿಸುವಾಗ, ಅದರಲ್ಲಿರುವ ಕೊರತೆಗಳನ್ನು ಪರಲೋಕದದೇವದೂತರ ಗಾಯನ ವೃಂದವು ಪೂರೈಸುತ್ತದೆಂಬುದನ್ನು ನಾವು ಮರೆಯಬಾರದು. KanCCh 299.2

ಪ್ರತಿಯೊಂದು ಸಬ್ಬತ್ತಿನಲ್ಲಿಯೂ ನಮ್ಮನ್ನು ಕತ್ತಲೆಯಿಂದ ತನ್ನ ಆಶ್ಚರ್ಯಕರವಾದಬೆಳಕಿಗೆ ಕರೆದಂತ ಕ್ರಿಸ್ತನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಬೇಕು (1 ಪೇತ್ರನು 2:9). ನಮ್ಮನ್ನುಪ್ರೀತಿಸಿ ತನ್ನ ಸ್ವಂತ ರಕ್ತದಿಂದ ನಮ್ಮ ಪಾಪಗಳನ್ನು ತೊಳೆದು ಶುದ್ಧ ಮಾಡಿದಾತನಿಗೆನಮ್ಮ ಹೃದಯಾಂತರಾಳದಿಂದ ಸ್ತುತಿಸ್ತೋತ್ರ ಸಲ್ಲಿಸೋಣ. ಬೋಧಕರ ನುಡಿಯಿಂದಯಾವಾಗಲೂ ಕ್ರಿಸ್ತನ ಪ್ರೀತಿಯ ಮಾತುಗಳು ಬರಲಿ. ಈ ಪ್ರೀತಿಯು ನಾವು ಘನಪಡಿಸುವಪ್ರತಿಯೊಂದು ಹಾಡಿನ ಮೂಲಕ ಸರಳವಾದ ಭಾಷೆಯಲ್ಲಿ ವ್ಯಕ್ತವಾಗಲಿ. ದೇವರಪವಿತ್ರಾತ್ಮನಪ್ರೇರಣೆಯು ನಮ್ಮ ಪ್ರಾರ್ಥನೆಗಳನ್ನು ನಿರ್ದೇಶಿಸಲಿ. ಜೀವವಾಕ್ಯವು ಹೇಳಲ್ಪಟ್ಟಾಗ,ನಮ್ಮ ಹೃದಯಾಂತರಾಳದ ಭಾವನೆಯ ಪ್ರತ್ಯುತ್ತರವು ನಾವು ಸ್ವೀಕರಿಸಿದ ಸಂದೇಶವುಪರಲೋಕದಿಂದ ಬಂದದ್ದೆಂದು ಸಾಕ್ಷಿಕೊಡಲಿ. KanCCh 299.3

ನಾವು ದೇವರ ಆಲಯದಲ್ಲಿ ಪರಿಪೂರ್ಣ ಪ್ರೀತಿಯ ವಿಶೇಷ ಲಕ್ಷಣಗಳನ್ನು ಪೋಷಿಸಲುಕೂಡಿ ಬರಬೇಕೆಂದು ದೇವರು ಹೇಳುತ್ತಾನೆ. ಭೂಲೋಕದ ನಿವಾಸಿಗಳಾದ ನಮಗೆಇದು ತನ್ನನ್ನು ಪ್ರೀತಿಸುವವರಿಗಾಗಿ ಕ್ರಿಸ್ತನು ಸಿದ್ಧಪಡಿಸುತ್ತಿರುವ ಭಾವನೆಗಳಿಗೆ ಯೋಗ್ಯವಾಗಿದೆ.ಪರಲೋಕದ ದೇವಾಲಯದಲ್ಲಿ ನಾವು ಒಂದೊಂದು ಸಬ್ಬತ್ತಿನಲ್ಲಿ ಹಾಗೂ ಒಂದುಅಮಾವಾಸ್ಯೆಯಿಂದ ಮತ್ತೊಂದು ಅಮಾವಾಸ್ಯೆಯಲ್ಲಿ ಆರಾಧನೆಗಾಗಿ ಕೂಡಿ ಬರುತ್ತೇವೆ.ಅಲ್ಲಿ ಸಿಂಹಾಸನದಲ್ಲಿ ಆಸೀನನಾಗಿರುವ ತಂದೆಯಾದ ದೇವರಿಗೂ ಹಾಗೂ ಯಜ್ಞದಕುರಿಯಾದಾತನಿಗೂ ಯುಗಯುಗಾಂತರಗಳವರೆಗೂ ನಾವು ಉನ್ನತವಾದ ಸ್ವರವೆತ್ತಿಮಧುರವಾದ ಗಾನದಿಂದ ಸ್ತುತಿಸ್ತೋತ್ರ ಅರ್ಪಿಸುತ್ತಾ ಕೃತಜ್ಞತೆ ಮಾಡುತ್ತೇವೆ. KanCCh 300.1