ಯೆರೂಸಲೇಮಿನಲ್ಲಿ ಕ್ರೈಸ್ತ ಸಭೆಯ ಕ್ರಮಬದ್ಧ ವ್ಯವಸ್ಥೆಯು ಇತರ ಸಭೆಗಳಿಗೆ ಒಂದು ಮಾದರಿಯಾಗಿ ಸೇವೆ ಮಾಡಬೇಕಾಗಿತ್ತು. ಸಭೆಯಲ್ಲಿ ಆಡಳಿತ ಮಾಡುವಜವಾಬ್ದಾರಿಕೊಡಲ್ಪಟ್ಟವರು, ದೇವರ ಸ್ವಾಸ್ತವಾದ ಸಭೆಯ ಮೇಲೆ ದೊರೆತನಮಾಡಬಾರದು. ಬದಲಾಗಿವಿವೇಕಿಗಳಾದ ಕುರುಬರಂತೆ “ಬದಲಾತ್ಕಾರದಿಂದಲ್ಲ. ದೇವರಚಿತ್ರದ ಪ್ರಕಾರಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ.ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆಮಾಡಬೇಕು” (1 ಪೇತ್ರನು 5:23) ಹಾಗೂಸಭಾಸೇವಕರು “...ಸಂಭಾವಿತರೂ, ಪವಿತ್ರಾತ್ಮಭರಿತರೂ, ಜ್ಞಾನ ಸಂಪನ್ನರೂ ಆಗಿರಬೇಕು”(ಅ.ಕೃತ್ಯಗಳು 6:3; 1 ತಿಮೊಥೆ 3:8-10). ಇವರೆಲ್ಲರೂ ಒಗ್ಗಟ್ಟಾಗಿ ತಮ್ಮ ಸೇವೆಮಾಡುತ್ತಾಯಾವುದು ಸತ್ಯವಾಗಿದೆಯೋ, ಅದರ ಪರವಾಗಿ ದೃಢವಾಗಿ ಯಾವಾಗಲೂ ನಿಲ್ಲಬೇಕುಹಾಗೂ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಈ ರೀತಿಯಾಗಿ ಅವರು ಎಲ್ಲಾಸಭಿಕರ ಮೇಲೆ ಒಳ್ಳೆಯ ಪ್ರಭಾವ ಹೊಂದಿರುವರು. KanCCh 305.3
ಹೊಸದಾಗಿ ಕ್ರೈಸ್ತರಾದ ವಿಶ್ವಾಸಿಗಳ ಆತ್ಮೀಕ ಬೆಳವಣಿಗೆಯಲ್ಲಿ ಪ್ರಮುಖ ಅಂಶವಾಗಿಅಪೊಸ್ತಲರುಅವರನ್ನು ಸುವಾರ್ತೆಯ ರಕ್ಷಣೆಯಲ್ಲಿರಿಸಲು ಬಹಳ ಎಚ್ಚರಿಕೆ ವಹಿಸಿದ್ದರು.ಇಕೊನ್ಯ ಮತ್ತು ಪಿಸಿದ್ಯ ಎಂಬ ಸ್ಥಳಗಳಲ್ಲಿದ್ದ ವಿಶ್ವಾಸಿಗಳ ಅನುಕೂಲಕ್ಕಾಗಿ ಅಲ್ಲಿ ಕ್ರೈಸ್ತಸಭೆಗಳು ಆರಂಭವಾದವು ಸಭೆಗೆ ಅಧಿಕಾರಿಗಳನ್ನು ನೇಮಿಸಲಾಯಿತು. ಸದಸ್ಯರ ಆತ್ಮಿಕಬೆಳವಣಿಗೆಗೆ ಸಂಬಂಧಪಟ್ಟ ಕಾರ್ಯಗಳನ್ನು ನಡೆಸಲು ಸಾಧ್ಯವಾಗುವಂತೆ ಸಭೆಗಳಲ್ಲಿಸರಿಯಾದ ಕ್ರಮಬದ್ಧ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. KanCCh 306.1
ಕ್ರಿಸ್ತನಲ್ಲಿ ವಿಶ್ವಾಸಿಗಳೆಲ್ಲರೂ ಒಂದೇ ಶರರವಾಗುವುದಕ್ಕೆ ಒಂದಾಗಬೇಕೆಂಬ ಸುವಾರ್ತಾಯೋಜನೆಗೆ ಈ ವ್ಯವಸ್ಥೆಯು ಪೂರಕವಾಗಿತ್ತು. ಈ ಯೋಜನೆಯನ್ನು ಪೌಲನು ತನ್ನಸುವಾರ್ತಾಸೇವೆಯಲ್ಲಿ ಯಾವಾಗಲೂ ಎಚ್ಚರಿಕೆಯಿಂದ ಅನುಸರಿಸಿದನು. ಅವನಸೇವೆಯಿಂದ ಕ್ರಿಸ್ತನನ್ನು ರಕ್ಷಕನೆಂದು ಅಂಗೀಕರಿಸಿಕೊಂಡವರು ಅನಂತರ ಸೂಕ್ತವಾದಸಮಯದಲ್ಲಿ ಒಂದು ಸಭೆಯಾಗಿ ಸಂಘಟಿಸಲ್ಪಟ್ಟರು. ವಿಶ್ವಾಸಿಗಳು ಬಹಳ ಕಡಿಮೆಸಂಖ್ಯೆಯಲ್ಲಿದ್ದಾಗಲೂ ಈ ಕ್ರಮವನ್ನು ಅನುಸರಿಸಲಾಯಿತು. ಕ್ರೈಸ್ತವಿಶ್ವಾಸಿಗಳು ಪರಸ್ಪರಸಹಾಯ ಮಾಡಬೇಕೆಂದು ಬೋಧಿಸಲಾಯಿತು.“ಇಬ್ಬರು, ಮೂವರು ನನ್ನ ಹೆಸರಿನಲ್ಲಿಎಲ್ಲಿ ಕೂಡಿ ಬಂದಿರುತ್ತಾರೋ, ಅಲ್ಲಿ ಅವರ ನಡುವೆ ನಾನು ಇದ್ದೇನೆ” ಎಂಬವಾಗ್ದಾನವನ್ನು ವಿಶ್ವಾಸಿಗಳ ನೆನಪಿಗೆ ತರಲಾಯಿತು (ಮತ್ತಾಯ 18:20). KanCCh 306.2