ತನ್ನದೇ ಆದ ವೈಯಕ್ತಿಕ ನಿರ್ಣಯವು ಇತರೆಲ್ಲರ ಅಭಿಪ್ರಾಯಗಳಿಗಿಂತ ಅತ್ಯುತ್ತಮವೆಂದುಎಣಿಸುವಂತವರು ಗಂಭೀರವಾದ ಗಂಡಾಂತರದಲ್ಲಿದ್ದಾರೆ. ಈ ಲೋಕದಲ್ಲಿ ದೇವರುತನ್ನ ಸೇವೆಯನ್ನು ಮುಂದುವರಿಸಲಿಕ್ಕಾಗಿ ಆರಿಸಿಕೊಂಡವರಿಂದ ಅಂತವರನ್ನು ಸೈತಾನನುಬಹಳ ಪ್ರಯತ್ನದ ಮೂಲಕ ಬೇರೆಯಾಗುವಂತೆ ಮಾಡುತ್ತಾನೆ. ಸತ್ಯದ ಮುಂದುವರಿಕೆಗೆಸಂಬಂಧಪಟ್ಟಂತೆ ನಾಯಕತ್ವದ ಜವಾಬ್ದಾರಿ ಹೊರುವಂತೆ ದೇವರು ಆರಿಸಿಕೊಂಡವರನ್ನುನಿರ್ಲಕ್ಷಿಸುವುದು ಅಥವಾ ಕೀಳಾಗಿ ಕಾಣುವುದು, ದೇವಜನರನ್ನು ಬಲಪಡಿಸಿ ಉತ್ತೇಜಿಸಲುಹಾಗೂ ಅವರಿಗೆ ಸಹಾಯ ಮಾಡಲು ದೇವರು ಅಭಿಷೇಕಿಸಿದ ಮಾರ್ಗಗಳನ್ನುತಿರಸ್ಕರಿಸಿದಂತಾಗುತ್ತದೆ. ದೇವರ ಸೇವೆಯಲ್ಲಿರುವ ಯಾವುದೇ ಕೆಲಸಗಾರನು ಇದನ್ನುಮೀರಿ ತನಗೆ ದೊರಕಿದ ಬೆಳಕು ನೇರವಾಗಿ ದೇವರಿಂದ ಬಂತೆಂದು ತಿಳಿದಲ್ಲಿ, ಅಂತವನುಸೈತಾನನಿಂದ ಮೋಸಗೊಳಿಸಲ್ಪಡುವನು ಹಾಗೂನಾಶವಾಗುವನು. KanCCh 308.1
ಎಲ್ಲಾ ವಿಶ್ವಾಸಿಗಳೂ ನಿಕಟಸಂಬಂಧ ಹೊಂದುವುದರ ಮೂಲಕ ಒಬ್ಬ ಕ್ರೈಸ್ತನುಮತ್ತೊಬ್ಬ ಕ್ರೈಸ್ತನೊಂದಿಗೂ ಹಾಗೂ ಸಭೆಯು ಮತ್ತೊಂದು ಸಭೆಯೊಂದಿಗೂಒಂದಾಗಿರಬೇಕೆಂಬುದು ದೇವರ ನೇಮಕವಾಗಿದೆ. ಈ ರೀತಿಯಾಗಿ ಮನುಷ್ಯರುದೇವರೊಂದಿಗೆ ಸಹಕಾರ ಹೊಂದಲು ಸಾಧ್ಯವಾಗುತ್ತದೆ. ಸಭೆಯ ಎಲ್ಲಾ ಮಾಧ್ಯಮಅಥವಾ ಸಾಧನಗಳು ಪವಿತ್ರಾತ್ಮನಿಗೆ ಅಧೀನವಾಗಿರಬೇಕು; ಹಾಗೂ ಎಲ್ಲಾವಿಶ್ವಾಸಿಗಳುದೇವರಕೃಪೆಯ ಶುಭ ಸಂದೇಶವನ್ನು ಜಗತ್ತಿಗೆ ಸಾರಲು ಒಟ್ಟಾಗಿ ವ್ಯವಸ್ಥಿತವಾದ ರೀತಿಯಲ್ಲಿಪ್ರಯತ್ನ ಮಾಡಬೇಕು. KanCCh 308.2
ವಿವಿಧ ಹಿನ್ನೆಲೆಯಿಂದ ಬಂದ ಸಭಾಸದಸ್ಯರು ಸಭೆಯೆಂಬ ಸಂಪೂರ್ಣ ದೇಹವನ್ನುರೂಪಿಸಲು ಒಂದಾಗಬೇಕು ಮತ್ತು ಪ್ರತಿಯೊಬ್ಬರೂ ತಮಗೆ ನೇಮಿಸಿದ ಸೇವೆಯನ್ನುವಿಧೇಯತೆಯಿಂದ ಮಾಡಬೇಕು. KanCCh 309.1
ನಮ್ಮದೇಹದ ವಿವಿಧ ಅಂಗಗಳು ಹೇಗೆ ಒಂದೇಶರೀರವಾಗಿ ರೂಪಿಸಲ್ಪಡುವುದಕ್ಕೆಒಟ್ಟಾಗಿವೆಯೋ, ಅದೇ ರೀತಿ ಮೆದುಳಿನ ಬುದ್ಧಿ ಶಕ್ತಿಯಿಂದ ನಿಯಂತ್ರಿಸಲ್ಪಟ್ಟವಿಧೇಯತೆಯಿಂದ ತಮ್ಮ ತಮ್ಮ ಕಾರ್ಯಗಳನ್ನು ಮಾಡುವವು. ಅದೇ ರೀತಿ ಕ್ರಿಸ್ತನಸಭೆಯ ಎಲ್ಲಾ ಸದಸ್ಯರು ಸುಸಂಗತವಾದ ಒಂದೇಶರೀರವಾಗಿ ಐಕ್ಯತೆಯಿಂದಿದ್ದು,ಪರಿಶುದ್ಧಾತ್ಮನಿಗೆ ವಿಧೇಯರಾಗಿರಬೇಕು. KanCCh 309.2