Go to full page →

ಸಂಸ್ಥೆಗಳನ್ನು ಸ್ಥಾಪಿಸಬೇಕು KanCCh 386

ಅನೇಕ ಸ್ಥಳಗಳಲ್ಲಿ ವೈದ್ಯಕೀಯ ಸುವಾರ್ತಾಸೇವೆಯ ಅಗತ್ಯವಿದೆ. ಅಂತಹ ಸ್ಥಳಗಳಲ್ಲಿಚಿಕ್ಕ ಆಸ್ಪತ್ರೆಗಳನ್ನು ಆರಂಭಿಸಬೇಕು. ನಮ್ಮ ಆಸ್ಪತ್ರೆಗಳು ದೊಡ್ಡವರು ಚಿಕ್ಕವರು ಶ್ರೀಮಂತರುಬಡವರು ಹಾಗೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಹಾಗೂಕೆಳಸ್ಥಾನದಲ್ಲಿರುವವರು- ಹೀಗೆ ಎಲ್ಲರಿಗೂ ಸೇವೆ ಮಾಡುವ ಸಾಧನವಾಗಬೇಕು. ದೇವರುಈ ಜಗತ್ತಿಗೆ ಸಾರಬೇಕೆಂದು ತಿಳಿಸಿರುವ ಸಂದೇಶದ ಕಡೆಗೆ ಇತರ ಗಮನ ಸೆಳೆಯುವಂತರೀತಿಯಲ್ಲಿ ಅವರು ನಿಸ್ವಾರ್ಥಸೇವೆಮಾಡಬೇಕು. KanCCh 386.2

ವೈದ್ಯಕೀಯಸೇವೆ ಹಾಗೂ ದೈವೀಕಸೇವೆಗಳೆರಡೂ ಒಂದಾಗಿ, ರೋಗಿಗಳು ಪರಲೋಕದಘನವೈದ್ಯನಾದ ದೇವರ ಸಾಮರ್ಥ್ಯದಲ್ಲಿ ಭರವಸವಿಡುವಂತೆ ಅವರನ್ನು ಮುನ್ನಡೆಸಬೇಕು.ಚಿಕಿತ್ಸೆ ನೀಡುವಂತ ವೈದ್ಯರು, ದಾದಿಯರು ಹಾಗೂ ಇತರರು ಕ್ರಿಸ್ತನ ಕೃಪೆಯ ಸ್ವಸ್ಥತೆಗಾಗಿಪ್ರಾರ್ಥಿಸಬೇಕು. ಆಗ ರೋಗಿಗಳ ಮನಸ್ಸಿನಲ್ಲಿಯೂ ಸಹ ನಂಬಿಕೆ ಹುಟ್ಟುತ್ತದೆ. ತಮಗೆಇನ್ನೂ ಗುಣವಾಗುವುದಿಲ್ಲವೆಂದು ಹತಾಶರಾಗಿರುವವರಿಗೂ ಇದರಿಂದ ಉತ್ತೇಜನದೊರೆಯುತ್ತದೆ. KanCCh 386.3

ಈ ಕಾರಣದಿಂದಲೇ ಸಮರ್ಪಕವಾದ ಚಿಕಿತ್ಸೆ ಹಾಗೂ ನಂಬಿಕೆಯಿಂದ ಮಾಡಿದಪ್ರಾರ್ಥನೆ - ಇವೆರಡೂ ಒಟ್ಟಾಗಿಸೇರಿ ನಿರಾಶೆಗೊಂಡವರಿಗೆ ಧೈರ್ಯತುಂಬಲು ಮತ್ತುಶಾರೀರಿಕವಾಗಿ ಉತ್ತಮ ಜೀವನಶೈಲಿ ಹಾಗೂ ಆತ್ಮೀಕ ವಿಷಯಗಳಲ್ಲಿ ದೇವರಿಗೆಮೆಚ್ಚುಗೆಯಾಗುವ ರೀತಿಯಲ್ಲಿ ನಡೆಯುವಂತೆ ಸಲಹೆಗಳನ್ನು ನೀಡುವ ಸಲುವಾಗಿಸೆವೆಂತ್ ಡೇ ಅಡ್ವೆಂಟಿಸ್ಟರು ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ. ಇಂತಹ ಸೇವೆಯ ಮೂಲಕಅನೇಕರು ಕ್ರಿಸ್ತನನ್ನು ಅಂಗೀಕರಿಸುತ್ತಾರೆ. ಅಡ್ರೆಂಟಿಸ್ಟ್ ವೈದ್ಯರು ಆತ್ಮವನ್ನೂ ಸಹಗುಣಪಡಿಸುವಂತ ಸುವಾರ್ತಾಸಂದೇಶವನ್ನು ಸ್ಪಷ್ಟವಾಗಿ ಕೊಡಬೇಕು. KanCCh 387.1