Go to full page →

ಹಾಗಾದರೆ ನಾವೇನು ಮಾಡಬೇಕು? KanCCh 398

ರಾಜಕೀಯವನ್ನು ಅದರಷ್ಟಕ್ಕೆ ಬಿಡಿ. ಸುವಾರ್ತೆ ಇನ್ನೂ ಸಾರದಿರುವ ಬಹಳಷ್ಟುಸ್ಥಳಗಳಿವೆ. ಆದರೆ ಕ್ರೈಸ್ತರು ಕ್ರೈಸ್ತರಲ್ಲವರಿಗೆ ಸುವಾರ್ತೆ ಸಾರುತ್ತಿದ್ದರೂ, ನಾವು ಪ್ರಾಪಂಚಿಕದಲ್ಲಿಆಸಕ್ತಿಯಿರುವ ವ್ಯಕ್ತಿಗಳಾಗಿರಬಾರದು. ಕ್ರೈಸ್ತರು ರಾಜಕೀಯವನ್ನೇ ಮಾತಾಡುತ್ತಾಕಾಲಕಳೆಯಬಾರದು ಅಥವಾ ಅದರಲ್ಲಿ ಸೇರಬಾರದು. ಆ ರೀತಿ ಮಾಡಿದಲ್ಲಿ ಸೈತಾನನಿಗೆನಮ್ಮಲ್ಲಿಯೇ ಭಿನ್ನಾಭಿಪ್ರಾಯ ಹುಟ್ಟಿಸುವುದಕ್ಕೆ ಅವಕಾಶ ನೀಡಿದಂತಾಗುತ್ತದೆ. ದೇವರಮಕ್ಕಳುರಾಜಕೀಯದಿಂದ ದೂರವಿರಬೇಕು ಹಾಗೂ ಅವಿಶ್ವಾಸಿಗಳೊಂದಿಗೆ ಯಾವುದೇ ಒಪ್ಪಂದಮಾಡಿಕೊಳ್ಳಬಾರದು. ಯಾವುದೇ ರಾಜಕೀಯ ಹೋರಾಟದಲ್ಲಿ ಭಾಗವಹಿಸಬಾರದು.ಲೋಕದಿಂದ ದೇವರಮಕ್ಕಳು ಬೇರೆಯಾಗಿರಬೇಕು ಹಾಗೂ ಶಾಲೆಗಳಿಗಾಗಲಿ ಅಥವಾಕ್ರೈಸ್ತಸಭೆಗಳಿಗಾಗಲಿ ಭಿನ್ನಾಭಿಪ್ರಾಯ ಮತ್ತು ಅವ್ಯವಸ್ಥೆ, ಗಲಿಬಿಲಿ ಉಂಟುಮಾಡುವಯಾವುದೇ ಆಲೋಚನಾ ವಿಧಾನಗಳನ್ನು ತರಬಾರದು. ನಮ್ಮ ನಮ್ಮಲ್ಲಿ ಒಡಕುಹುಟ್ಟಿಸಿಮನಸ್ತಾಪ ತರುವುದು ಸ್ವಾರ್ಥಿಗಳಾದ ಜನರು ಸಭಾವ್ಯವಸ್ಥೆಯೊಳಗೆ ತರುವ ನೈತಿಕವಿಷವಾಗಿದೆ. KanCCh 398.1