Go to full page →

ತಂದೆಯಾದ ದೇವರು ಕ್ರಿಸ್ತನಲ್ಲಿ ತನ್ನನ್ನು ತಿಳಿಯಪಡಿಸಿದನು KanCCh 57

ಸಾಕಾರನಾದ ದೇವರು ಕ್ರಿಸ್ತನಲ್ಲಿ ತನ್ನನ್ನು ಪ್ರಕಟಿಸಿಗೊಂಡು ತಿಳಿಯ ಪಡಿಸಿದನು. ಕ್ರಿಸ್ತನು ದೇವರ ಪ್ರಭಾವದ ಪ್ರಕಾಶವೂ, ಆತನ ತತ್ವದ ಮೂರ್ತಿಯೂ.. (ಇಬ್ರಿಯ 1:3) ಆಗಿದ್ದು, ಈ ಲೋಕದಲ್ಲಿ ಮನುಷ್ಯಾವತಾರವೆತ್ತಿದನು. ಸ್ವಂತ ರಕ್ಷಕನಾದ ಆತನು ಈ ಜಗತ್ತಿಗೆ ಬಂದನು, ಮತ್ತು ಪರಲೋಕಕ್ಕೆ ಏರಿಹೋದನು ಹಾಗೂ ನಮ್ಮ ಪರವಾಗಿ ಪರಲೋಕದ ನ್ಯಾಯಾಲಯದಲ್ಲಿ ತಂದೆಯ ಮುಂದೆ ಮಧ್ಯಸ್ಥನಾಗಿ ಭಿನ್ನವಿಸುತ್ತಿದ್ದಾನೆ. ಮನುಷ್ಯಕುಮಾರನಂತಿರುವವನು (ಪ್ರಕಟನೆ 1:13) ದೇವರಸಿಂಹಾಸನದ ಮುಂದೆ ನಮಗಾಗಿ ಬೇಡಿಕೊಳ್ಳುತ್ತಿದ್ದಾನೆ. KanCCh 57.3

ಲೋಕದ ಬೆಳಕಾಗಿರುವ ಕ್ರಿಸ್ತನು ತನ್ನ ಕಣ್ಣುಕೋರೈಸುವಂತ ದೈವೀಕ ವೈಭವದ ಮಹಿಮೆಯಿಂದ ಮನುಷ್ಯರು ನಾಶವಾಗದೆ ತಮ್ಮ ಸೃಷ್ಟಿಕರ್ತನನ್ನು ಅರಿತುಕೊಳ್ಳಬೇಕೆಂಬ ಉದ್ದೇಶದಿಂದ ತನ್ನ ದೈವೀಕತ್ವವನ್ನು ಮರೆ ಮಾಡಿಕೊಂಡಿದ್ದನು. ದೇವರನ್ನು ಯಾರೂ ಎಂದೂಕಂಡಿಲ್ಲ. ಯಾವನು ಏಕಪುತ್ರನೂ, ಸ್ವತಃ ದೇವರು ಆಗಿದ್ದು ತಂದೆಯ ಎದೆಯಲ್ಲಿದ್ದಾನೋ ಆತನೇ (ಕ್ರಿಸ್ತನು) ತಿಳಿಯಪಡಿಸಿದನು (ಯೋಹಾನ 1:18). KanCCh 58.1

ಮನುಷ್ಯರಾದ ನಾವು ಏನು ತಿಳಿದುಕೊಳ್ಳಬೇಕೆಂದು ದೇವರು ಬಯಸುತ್ತಾನೋ, ಅದನ್ನು ಬೋಧಿಸಲು ಯೇಸುಕ್ರಿಸ್ತನು ಈ ಲೋಕಕ್ಕೆ ಬಂದನು. ಭೂಮ್ಯಾಕಾಶಗಳಲ್ಲಿ ಹಾಗೂ ವಿಶಾಲವಾದ ಸಾಗರ, ಸಮುದ್ರಗಳಲ್ಲಿ ದೇವರ ಕೈಕೆಲಸವು ಕಂಡುಬರುತ್ತದೆ. ಸೃಷ್ಟಿಸಲ್ಪಟ್ಟ ಎಲ್ಲಾ ಸಜೀವ, ನಿರ್ಜೀವವಸ್ತುಗಳು ಆತನ ಶಕ್ತಿ, ಜ್ಞಾನವಿವೇಕ ಮತ್ತು ಪ್ರೀತಿಯನ್ನು ಋಜುವಾತು ಪಡಿಸುತ್ತವೆ. ಆದರೆ ಕ್ರಿಸ್ತನಲ್ಲಿ ಪ್ರಕಟಿಸಲ್ಪಟ್ಟ ದೇವರ ವ್ಯಕ್ತಿತ್ವವನ್ನು ನಾವು ಆಕಾಶದ ನಕ್ಷತ್ರಗಳಿಂದಾಗಲಿ, ಸಾಗರ ಸಮುದ್ರಗಳಿಂದಾಗಲಿ ಇಲ್ಲವೆ ಧಾರಾಕಾರ ಮಳೆ, ಕಡಿದಾದ ಸ್ಥಳದಿಂದ ಧುಮುಕುವ ದೊಡ್ಡ ಜಲಪಾತಗಳಲ್ಲಾಗಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ತನ್ನ ವ್ಯಕ್ತಿತ್ವ ಹಾಗೂ ಗುಣಾತಿಶಯಗಳನ್ನು ತಿಳಿಯಪಡಿಸುವುದಕ್ಕೆ ಪ್ರಕೃತಿಗಿಂತಲೂ ಹೆಚ್ಚಿನ ಪ್ರಕಟನೆಯ ಅಗತ್ಯವಿದೆ ಎಂದು ದೇವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಆದುದರಿಂದ ಅದೃಶ್ಯನಾದ ದೇವರು ತನ್ನ ಗುಣಸ್ವಭಾವ ಹಾಗೂ ವೈಶಿಷ್ಟ್ಯಗಳನ್ನು ಮನುಷ್ಯರು ತಾಳಿಕೊಳ್ಳುವಷ್ಟು ಪ್ರಕಟಿಸಿಕೊಳ್ಳಲು ತನ್ನ ಮಗನಾದ ಕ್ರಿಸ್ತನನ್ನು ಈ ಲೋಕಕ್ಕೆ ಕಳುಹಿಸಿದನು. ಒಂದುವೇಳೆ ದೇವರು ತಾನು ಸೃಷ್ಟಿಸಿದ ಹೂ, ಮರಗಿಡಗಳು ಮುಂತಾದ ನಿಸರ್ಗದ ವಸ್ತುಗಳಲ್ಲಿ ವಾಸಿಸುವುದಕ್ಕೆ ಸ್ವತಃ ಬಯಸಿದಲ್ಲಿ ಕ್ರಿಸ್ತನು ಈ ಲೋಕದಲ್ಲಿದ್ದಾಗ ತನ್ನ ಶಿಷ್ಯರಿಗೆ ಅದನ್ನು ತಿಳಿಸುತ್ತಿರಲಿಲ್ಲವೇ? ಆದರೆ ಕ್ರಿಸ್ತನು ಮಾಡಿದ ಯಾವ ಬೋಧನೆಯಲ್ಲಿಯೂ ದೇವರು ಎಂದೂ ಈ ರೀತಿ ಮಾತಾಡಿಲ್ಲ. ಸಾಕಾರನಾದ ದೇವರು ಅಸ್ತಿತ್ವದಲ್ಲಿದ್ದಾನೆಂಬ ಸತ್ಯವನ್ನು ಯೇಸುಸ್ವಾಮಿ ಹಾಗೂ ಆತನ ಶಿಷ್ಯರು ಸ್ಪಷ್ಟವಾಗಿ ಬೋಧಿಸಿದ್ದಾರೆ. KanCCh 58.2

ಪಾಪಿಗಳಾದ ನಾವು ನಾಶವಾಗದೆ ಉಳಿದು ತಾಳಿಕೊಳ್ಳುವಷ್ಟನ್ನು ಮಾತ್ರ ದೇವರ ಬಗ್ಗೆ ಕ್ರಿಸ್ತನು ಪ್ರಕಟಪಡಿಸಿದ್ದಾನೆ. ಆತನು ನಮಗೆ ದೇವರ ಬಗ್ಗೆ ಬೆಳಕು ನೀಡಿ ಜ್ಞಾನೋದಯ ಉಂಟುಮಾಡಿದ ದೈವೀಕ ಗುರುವಾಗಿದ್ದಾನೆ. ತನ್ನ ಮಗನು ಹಾಗೂ ಸತ್ಯವೇದದ ಮೂಲಕ ತನ್ನ ಬಗ್ಗೆ ತಿಳಿಯಪಡಿಸಿರುವುದಕ್ಕಿಂತಲೂ ಮನುಷ್ಯರಿಗೆ ಹೆಚ್ಚಿನ ಬೆಳಕಿನ ಅಗತ್ಯವಿದೆ ಎಂದು ದೇವರು ಆಲೋಚಿಸಿದ್ದಲ್ಲಿ, ಖಂಡಿತವಾಗಿಯೂ ಅದನ್ನು ಆತನು ಕೊಟ್ಟಿರುತ್ತಿದ್ದನು. KanCCh 58.3