Go to full page →

ಯೇಸುವಿನ ವಿಷಯವಾದ ಸಾಕ್ಷಿಗಳನ್ನು ಅವುಗಳ ಫಲಗಳಿಂದ ನಿರ್ಣಯಿಸಿ KanCCh 85

ಯೇಸುವಿನ ವಿಷಯವಾದ ಸಾಕ್ಷಿಗಳನ್ನು ಅವುಗಳ ಫಲದಿಂದ ನಿರ್ಣಯಿಸಿ ಅವುಗಳ ಪ್ರಭಾವದಿಂದ ಉಂಟಾದ ಫಲಿತಾಂಶಗಳೇನು? ಈ ರೀತಿ ಮಾಡಬೇಕೆಂದು ಬಯಸುವವರು ಈ ದರ್ಶನಗಳ ಫಲಗಳನ್ನು ಚೆನ್ನಾಗಿ ಅರಿತುಕೊಳ್ಳಲಿ. ಸೈತಾನನಶಕ್ತಿ ಹಾಗೂ ಅವನ ಕಾರ್ಯದಲ್ಲಿ ಸಹಕರಿಸುವವರ ವಿರೋಧತೆಯ ನಡುವೆಯೂ ಶ್ರೀಮತಿ ವೈಟಮ್ಮನವರ ಪ್ರವಾದನಾಆತ್ಮ ಪ್ರೇರಿತವಾದ ಸಾಕ್ಷಿಗಳನ್ನು ದೇವರು ಉಳಿಸಿದ್ದಾನೆ ಹಾಗೂ ಬಲಪಡಿಸಿದ್ದಾನೆ. KanCCh 85.1

ದೇವರು ತನ್ನ ಸಭೆಗೆ ಬೋಧಿಸುತ್ತಾನೆ, ಅವರ ತಪ್ಪುಗಳನ್ನು ಖಂಡಿಸುತ್ತಾನೆ ಮತ್ತು ಅವರ ನಂಬಿಕೆಯನ್ನು ಬಲಪಡಿಸುತ್ತಾನೆ. ಅಥವಾ ಇವು ಯಾವುದನ್ನೂ ಆತನು ಮಾಡುವುದಿಲ್ಲ. ಇದು ದೇವರಕೆಲಸ ಅಥವಾ ಇಲ್ಲ. ದೇವರು ಸೈತಾನನೊಂದಿಗೆ ಸೇರಿ ಯಾವುದನ್ನೂ ಮಾಡುವುದಿಲ್ಲ. ಶ್ರೀಮತಿ ವೈಟಮ್ಮನವರ ಕಾರ್ಯಗಳು ದೇವರಿಂದ ಬಂದದ್ದು ಅಥವಾ ವೈರಿಯಾದ ಸೈತಾನನಿಂದ ಬಂದದ್ದು. ಈ ವಿಷಯದಲ್ಲಿ ಯಾವುದೇ ಅರೆಬರೆಯ ಕಾರ್ಯವಿಲ್ಲ. ಯೇಸುವಿನ ವಿಷಯವಾದ ಸಾಕ್ಷಿಯು ದೇವರಾತ್ಮನಿಂದ ಬಂದಿದೆ ಅಥವಾ ಸೈತಾನನಿಂದ ಬಂದಿದೆ. ಪ್ರವಾದನಾ ಆತ್ಮದ ಮೂಲಕ ದೇವರು ಸ್ವತಃ ಶ್ರೀಮತಿ ವೈಟಮ್ಮನವರಿಗೆ ಹಿಂದೆ ನಡೆದದ್ದು, ಈಗ ನಡೆಯುತ್ತಿರುವುದು ಹಾಗೂ ಮುಂದೆ ನಡೆಯಲಿರುವುದನ್ನು ತೋರಿಸಿದ್ದಾನೆ. ಅವರು ಹಿಂದೆ ಎಂದೂ ನೋಡಿರದ ಮನುಷ್ಯರನ್ನು ದರ್ಶನದಲ್ಲಿ ನೋಡಿದ್ದಾರೆ, ಆದರೆ ಅನೇಕ ವರ್ಷಗಳ ನಂತರ ಅವರನ್ನು ಮುಖಾಮುಖಿಯಾಗಿ ಕಂಡಾಗ, ಶ್ರೀಮತಿ ವೈಟಮ್ಮನವರು ಗುರುತಿಸಿದ್ದಾರೆ. ಮಧ್ಯರಾತ್ರಿಯಲ್ಲಿ ದೇವರು ಅವರನ್ನು ಎಬ್ಬಿಸಿ, ಹಿಂದೆ ಅವರ ಮನಸ್ಸಿಗೆ ದರ್ಶನದಲ್ಲಿ ಬಂದಂತ ವಿಷಯಗಳನ್ನು ತಿರುಗಿ ತೋರಿಸಿದ್ದಾನೆ. ಮಧ್ಯರಾತ್ರಿಯಲ್ಲಿ ಶ್ರೀಮತಿ ವೈಟಮ್ಮನವರು ಪವಿತ್ರಾತ್ಮ ಪ್ರೇರಣೆಯಿಂದ ಬರೆದ ಪತ್ರಗಳು ದೇಶವಿದೇಶಗಳಿಗೆ ತಲುಪಿ, ದೇವರ ಸೇವೆಗೆ ಬರಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಿವೆ. ಅನೇಕ ವರ್ಷಗಳ ಕಾಲ ಅವರು ಈ ಕಾರ್ಯಮಾಡಿದ್ದಾರೆ. ಅಲ್ಲದೆ ಶ್ರೀಮತಿ ವೈಟಮ್ಮನವರು ಮನಸ್ಸಿನಲ್ಲಿ ಎಂದೂ ಆಲೋಚಿಸದಿದ್ದಂತ ರೀತಿಯಲ್ಲಿ ತಪ್ಪುಗಳನ್ನು ಖಂಡಿಸಿ ಗದರಿಸುವಂತೆ ಪವಿತ್ರಾತ್ಮನಿಂದ ಪ್ರಚೋದಿಸಲ್ಪಟ್ಟಿದ್ದಾರೆ. ಈ ಕಾರ್ಯವು ಮೇಲಿನಿಂದ ಬಂದದ್ದೇ ಅಥವಾ ಕೆಳಗಿನಿಂದ ಬಂದದ್ದೇ? KanCCh 85.2