ಒಬ್ಬನ ಉಪಯುಕ್ತತೆಯು ಅವನು ತನ್ನನ್ನು ಪರಿಶುದ್ಧಾತ್ಮನಿಗೆ ಒಪ್ಪಿಸಿ ಕೊಡುವುದರ ಮೇಲೆ ಆಧಾರಗೊಂಡಿದೆ. ಮಾನವ ಸಂಪನ್ಮೂಲಗಳು ಎದುರಿಸಲು ಅಸಮರ್ಥವಾಗಿರುವಾಗ ತುರ್ತುಪರಿಸ್ಥಿತಿಯನ್ನು ಎದುರಿಸಲು ಬೇಕಾದ ಎಲ್ಲಾ ದೈವೀಕ ಸಹಾಯವನ್ನು ಪವಿತ್ರಾತ್ಮನು ಒದಗಿಸುತ್ತಾನೆ. ನಮ್ಮ ಭರವಸೆ ಮತ್ತು ನಿರೀಕ್ಷೆಯನ್ನು ಬಲಪಡಿಸಲು ನಮ್ಮಮನಸ್ಸು ದೈವೀಕಬೆಳಕನ್ನು ಹೊಂದಿ ಹೃದಯಗಳನ್ನು ಶುದ್ಧಿಗೊಳಿಸಲು ಬೇಕಾದ ಸಹಾಯವನ್ನು ಆತನು ಕೊಡುತ್ತಾನೆ. KanCCh 94.4
ಕ್ರಿಸ್ತನು ತನ್ನ ಸಭೆಯು ಸಂಪೂರ್ಣವಾಗಿ ಬದಲಾವಣೆಗೊಂಡ ಶರೀರವಾಗಿದ್ದು, ಪರಲೋಕದ ಬೆಳಕಿನ ಪ್ರಕಾಶವನ್ನು ಹೊಂದಿ, ಇಮ್ಮಾನುವೇಲನ ಮಹಿಮೆ ಹೊಂದಿಕೊಳ್ಳಲು ಬೇಕಾದ ಸಹಾಯ ಒದಗಿಸುತ್ತಾನೆ. ಪ್ರತಿಯೊಬ್ಬ ಕ್ರೈಸ್ತನೂ ಬೆಳಕು ಹಾಗೂ ಶಾಂತಿಯೆಂಬ ದೈವೀಕ ವಾತಾವರಣದಿಂದ ಆವರಿಸಲ್ಪಟ್ಟಿರ ಬೇಕೆಂಬುದು ದೇವರ ಉದ್ದೇಶ. ತನ್ನನ್ನು ತಾನೇ ನಿರಾಕರಿಸಿ, ತನ್ನ ಹೃದಯದಲ್ಲಿ ಪವಿತ್ರಾತ್ಮನ ಕಾರ್ಯಗಳಿಗೆ ಅವಕಾಶಕೊಟ್ಟು, ದೇವರಿಗೆ ಸಂಪೂರ್ಣವಾಗಿ ಪ್ರತಿಷ್ಠಿಸಿಕೊಂಡು ಜೀವಿಸುವವರ ಉಪಯುಕ್ತತೆಗೆ ಯಾವುದೇ ಇತಿಮಿತಿ ಇರುವುದಿಲ್ಲ. KanCCh 95.1
ಪಂಚಾಶತ್ತಮ ದಿನದಲ್ಲಿ ಪವಿತ್ರಾತ್ಮನ ಸುರಿಸುವಿಕೆಯಿಂದಾದ ಫಲಿತಾಂಶ ಏನು? ಪುನರುತ್ಥಾನಗೊಂಡ ರಕ್ಷಕನ ಶುಭವರ್ತಮಾನವು ಆ ಕಾಲದಲ್ಲಿ ಜನವಸತಿಯಿದ್ದ ಜಗತ್ತಿನ ಎಲ್ಲಾ ಕಡೆಗೂ ಒಯ್ಯಲ್ಪಟ್ಟಿತು. ಶಿಷ್ಯರ ಹೃದಯಗಳು ಪರಿಪೂರ್ಣವಾದ ಔದಾರ್ಯದಿಂದ ತುಂಬಿ ತುಳುಕಿತು. ಇದರಿಂದ ಪ್ರೇರಿತರಾಗಿ ಅವರು ಜಗತ್ತಿನ ಎಲ್ಲಾ ಕಡೆಗೂ ಹೋಗಿ “ನನಗಾದರೋ, ನಮ್ಮ ಕರ್ತನಾದ ಯೇಸುಕ್ರಿಸ್ತನ ವಿಷಯದಲ್ಲಿ ಹೊರತು ಹೆಚ್ಚಳ ಪಡುವುದು ಬೇಡ....” (ಗಲಾತ್ಯ 6:14) ಎಂದು ಸಾಕ್ಷಿ ನುಡಿದರು. ಕ್ರಿಸ್ತನ ಸತ್ಯವನ್ನು ಶಿಷ್ಯರು ಸಾರಿದಾಗ, ಆ ಸಂದೇಶದ ಶಕ್ತಿಯು ಎಲ್ಲರ ಹೃದಯವನ್ನೂ ಸೆಳೆಯಿತು. ಎಲ್ಲಾ ಕಡೆಯಿಂದಲೂ ಕ್ರೈಸ್ತರು ಸಭೆಗೆ ಸೇರಿದರು. ಧರ್ಮಭ್ರಷ್ಟರಾಗಿದ್ದವರು ತಿರುಗಿ ಕ್ರಿಸ್ತನನ್ನು ಅಂಗೀಕರಿಸಿಕೊಂಡರು. ಪಾಪಿಗಳು ಅಮೂಲ್ಯಬೆಲೆಯುಳ್ಳ ಮುತ್ತನ್ನು ಹುಡುಕಲು ಕ್ರೈಸ್ತರೊಂದಿಗೆ ಸೇರಿಕೊಂಡರು. ಸುವಾರ್ತೆಗೆ ಕಡುವಿರೋಧಿಗಳಾಗಿದ್ದವರು, ಅದನ್ನು ಸಾರುವುದರಲ್ಲಿ ಅಗ್ರಗಣ್ಯರಾದರು. “ಆ ದಿನದಲ್ಲಿ ಬಲಹೀನನು ದಾವೀದನಂತಾಗುವನು” ಎಂಬ ಪ್ರವಾದನೆಯು ನೆರವೇರಿತು. ಪ್ರತಿಯೊಬ್ಬ ಕ್ರೈಸ್ತನು ಇತರ ಸಹೋದರರಲ್ಲಿ ದೈವೀಕ ಪ್ರೀತಿ ಮತ್ತು ಔದಾರ್ಯ ಪರೋಪಕಾರ ಭಾವವನ್ನು ನೋಡಿದನು. ಸುವಾರ್ತೆ ಸಾರಬೇಕೆಂಬ ಒಂದೇಉದ್ದೇಶವು ಇತರೆಲ್ಲಾ ಉದ್ದೇಶಗಳಿಗಿಂತ ಮೇಲಾಯಿತು. ಕ್ರಿಸ್ತನಂತ ಗುಣಸ್ವಭಾವವನ್ನು ಪ್ರಕಟಿಸುವುದು ಮತ್ತು ಆತನ ರಾಜ್ಯಕ್ಕೆ ಎಲ್ಲರನ್ನೂ ಬಾಧ್ಯಸ್ಥರನ್ನಾಗಿ ಮಾಡಲು ಶ್ರಮಿಸುವುದು ವಿಶ್ವಾಸಿಗಳ ಮಹತ್ವಾಕಾಂಕ್ಷಿಯಾಗಿತ್ತು. KanCCh 95.2
ಆದಿಸಭೆಯ ಶಿಷ್ಯರಿಗೆ ಹೇಗೆ ಪರಿಶುದ್ಧಾತ್ಮನು ಸಂಬಂಧಪಟ್ಟಿದ್ದನೋ, ಇಂದೂ ಸಹ ನಮಗೂ ಆತನು ಸೇರಿದ್ದಾನೆ. ಪಂಚಾಶತ್ತಮ ಹಬ್ಬದ ದಿನದಲ್ಲಿ ರಕ್ಷಣೆಯ ವಾಕ್ಯವನ್ನು ಕೇಳಿದವರಿಗೆ ಕೊಟ್ಟಂತ ಅದೇ ಪವಿತ್ರಾತ್ಮನ ಶಕ್ತಿಯನ್ನು ದೇವರು ಇಂದೂ ಸಹ ಸ್ತ್ರೀಪುರುಷರಿಗೆ ಕೊಡುತ್ತಾನೆ. ದೇವರವಾಕ್ಯವನ್ನು ಅಂಗೀಕರಿಸುವವರಿಗೆ ಮತ್ತು ಆತನ ಕೃಪೆ ಹಾಗೂ ಆತ್ಮನ ಅಗತ್ಯ ನಮಗಿದೆ ಎಂದು ಕೇಳಿಕೊಂಡವರೆಲ್ಲರಿಗೂ ಇದೇ ಗಳಿಗೆಯಲ್ಲಿ ಆತನು ಕೊಡುವವನಾಗಿದ್ದಾನೆ. KanCCh 95.3